ಭೇಲನೆಂಬ ಭಾರತೀಯ ವಿಜ್ಞಾನಿ

ಭೇಲನೆಂಬ ಭಾರತೀಯ ವಿಜ್ಞಾನಿ

'ಮಾನವ ದೇಹದೊಳಗೆ ರಕ್ತ ಪದೇ ಪದೇ ತಿರುಗುವ ಕ್ರಿಯೆಯನ್ನು ಅಂದರೆ Blood Circulation ನ್ನು ಕಂಡುಹಿಡಿದ ವಿಜ್ಞಾನಿ ಯಾರು?' ಎಂದು ಕೇಳಿದರೆ ಆರನೇ ತರಗತಿಯ ಹುಡುಗ ಕೂಡ ’ವಿಲಿಯಮ್ ಹಾರ್ವೇ’ ಎನ್ನುತ್ತಾನೆ. ಎಲ್ಲ ವೈದ್ಯಕೀಯ ವಿಜ್ಞಾನಿಗಳೂ ಅವನನ್ನು ’ ಈ ವರೆಗೆ ವೈದ್ಯ ವಿಜ್ಞಾನ ಕಂಡ ಅತ್ಯದ್ಭುತ ಸಂಶೋಧನೆ ಯ ಕರ್ತೃ’ ಎಂದೇ ಹೊಗಳುತ್ತಾರೆ. ಹೌದು; ನಿಜಕ್ಕೂ ಇದು ಅತ್ಯದ್ಭುತ ಸಂಶೋಧನೆಯೇ ಸರಿ. ಯಾಕೆಂದರೆ ಈ ಮೂಲಭೂತ ತಥ್ಯವನ್ನು ಆಧರಿಸಿಯೇ ವೈದ್ಯಕೀಯ ವಿಜ್ಞಾನ ಇಷ್ಟೊಂದು ಪ್ರಗತಿ ಕಾಣುವುದು ಸಾಧ್ಯವಾಗಿದೆ.

ಆದರೆ ವಿಲಿಯಮ್ ಹಾರ್ವೇ ನಿಜಕ್ಕೂ ಈ ವಿಷಯ ತಿಳಿಸಿದ ಮೊದಲಿಗನೇ ಎಂಬ ಪ್ರಶ್ನೆ ಕೇಳಿಕೊಂಡಾಗ ’ಅಲ್ಲ’ ಎಂಬ ಉತ್ತರ ನೀಡಬೇಕಾಗುತ್ತದೆ. ಹಾಗಾದರೆ ಈ ಸಂಶೋಧನೆಯ ಅಸಲೀ ಹಕ್ಕುದಾರ ಯಾರು ? ಇದಕ್ಕೆ ಉತ್ತರವಾಗಿ ಒಂದು ಸಣ್ಣ ಕಥೆ ಹೇಳುತ್ತೇನೆ , ಕೇಳಿ:

ಹಿಂದೆ ನಮ್ಮದೇ ದೇಶದಲ್ಲಿಅಗ್ನಿವೇಶ, ಭೇಲ, ಜತೂಕರ್ಣ, ಪರಾಶರ, ಹಾರೀತ ಮತ್ತು ಕ್ಷಾರಪಾಣಿ - ಎಂಬ ಆರು ಮಂದಿ ಹುಡುಗರು, ಆತ್ರೇಯ ಪುನರ್ವಸು ಎಂಬ ವೈದ್ಯನ ಬಳಿ ಶಿಷ್ಯರಾಗಿ ಓದಿಕೊಂಡಿದ್ದರು. ಇದು ಸುಮಾರು ಕ್ರಿಸ್ತಪೂರ್ವ ಒಂದು ಸಾವಿರ ವರ್ಷಗಳ ಹಿಂದಿನ ಮಾತು. (ಕೆಲವು ವಿದ್ವಾಂಸರ ಪ್ರಕಾರ ಕ್ರಿಸ್ತಪೂರ್ವ ಎಂಟುನೂರು ವರ್ಷಗಳ ಹಿಂದೆ; ಏನಿದ್ದರೂ ಪಾಣಿನಿ ಅಷ್ಟಾಧ್ಯಾಯಿ ಬರೆಯುವುದಕ್ಕೆ ಮುಂಚೆ). ತಾವು ಎಲ್ಲ ಓದಿ ಆದಮೇಲೆ ಒಬ್ಬೊಬ್ಬರೂ ಒಂದೊಂದು ಪುಸ್ತಕ ಬರೆದರು. ಅವುಗಳಲ್ಲಿ ಅಗ್ನಿವೇಶ , ’ ಅಗ್ನಿವೇಶ ಸಂಹಿತೆ ’ ಬರೆದರೆ ಭೇಲ, ’ ಭೇಲ ಸಂಹಿತೆ’ ಬರೆದ. Actually, ಈ ಅಗ್ನಿವೇಶ ಸಂಹಿತೆಯೇ ಇವತ್ತು ನಾವು ’ ಚರಕ ಸಂಹಿತೆ’ ಎಂದು ಕರೆಯುವ ಪುಸ್ತಕ. ಅಗ್ನಿವೇಶ ಸಂಹಿತೆಯನ್ನು ಮತ್ತೆ edit ಮಾಡಿದ್ದು ಚರಕ. ಕಾಲಕ್ರಮೇಣ ಮತ್ತೆ ಚರಕ ಸಂಹಿತೆಯಲ್ಲಿ ಕೆಲವು ಅಧ್ಯಾಯಗಳು ಕಾಣದಾದಾಗ (ಕಾಣದಾಗಿದ್ದಕ್ಕೆ ಕಾರಣ ಖಚಿತವಾಗಿ ಗೊತ್ತಿಲ್ಲ) ಅವನ್ನು ಮತ್ತೆ ಸೇರಿಸಿ ಬರೆದವ ದೃಢಬಲ (ಸುಮಾರು ಕ್ರಿಸ್ತ ಶಕ ಹತ್ತನೇ ಶತಮಾನ). ಹಾಗಾಗಿ ಈಗ ನಾವು ಕಾಲೇಜುಗಳಲ್ಲಿ ಆಯುರ್ವೇದ ಕಲಿಯುವವರಿಗೆ ಹೇಳಿಕೊಡುವುದು ದೃಢಬಲ ಬರೆದ most recent edition ನ್ನು.

ಇನ್ನು ಭೇಲನ ವಿಷಯಕ್ಕೆ ಬರೋಣ. ಭೇಲ ಸಂಹಿತೆ, ಚರಕ ಅಥವಾ ಸುಶ್ರುತ ಸಂಹಿತೆಗಳಂತೆ famous ಆಗಲಿಲ್ಲ. ಕಾರಣ ಗೊತ್ತಿಲ್ಲ. ಕೆಲವರು ಅಗ್ನಿವೇಶ exceptionally brilliant ಆಗಿದ್ದರಿಂದ ಅವನು ಬರೆದ ಪುಸ್ತಕ ಬಹುಶಃ ತುಂಬ practical ಆಗಿತ್ತು ಅನ್ನುತ್ತಾರೆ. ಅದೇನೇ ಇರಲಿ, ಚರಕ ಅಥವಾ ಸುಶ್ರುತ ಸಂಹಿತೆಗಳಿಗೆ ಸಿಕ್ಕಿದ ಆದರ ಭೇಲ ಸಂಹಿತೆಗೆ ಸಿಗದೇ ಹೋದದ್ದರಿಂದ ಅದನ್ನು ಊಳಿಸಿಕೊಳ್ಳುವ ಪ್ರಯತ್ನಗಳು ಆಗಲಿಲ್ಲ. ಹೊಸ edition ಗಳೂ ಬಹುಶಃ ಬರಲಿಲ್ಲ. ಹಾಗಾಗಿ ಈಗ ಸಿಗುವ ಭೇಲ ಸಂಹಿತೆ ಪರಿಪೂರ್ಣವಾಗಿಲ್ಲ. ಅಲ್ಲಲ್ಲಿ ಹಲವು ಶ್ಲೋಕಗಳು ಇಲ್ಲವಾದರೆ, ಕೆಲವು ಅಧ್ಯಾಯಗಳೇ ಇಲ್ಲ. ಇನ್ನು ಕೆಲವೆಡೆ ಅರ್ಧರ್ಧ ಉಳಿದುಕೊಂಡಿರುವ ಶ್ಲೋಕಗಳು. ಹೀಗಾಗಿ ಭೇಲಸಂಹಿತೆಯ ಬಗ್ಗೆ ಯಾರೂ ಹೆಚ್ಚು ಗಮನ ಕೊಟ್ಟಿಲ್ಲ.

ಆದರೆ ಭೇಲನೇ ಮೊಟ್ಟಮೊದಲಿಗೆ blood circulation ನ್ನು ವಿವರಿಸಿದ್ದು ಎಂದರೆ ನಂಬುತ್ತೀರಾ?
ಹಾಂ, ಆದರೆ ಆತ ’ ರಕ್ತ ಪರಿಚಲನೆ ’ ಅಂತೇನೂ ಹೇಳಲಿಲ್ಲ; ಬದಲಿಗೆ ’ ರಸ ನಿಸ್ಸರಣ ’ ಅಂದಿದ್ದಾನೆ- ಹೀಗೆ:

हृदॊ रसॊ निःसरति तस्मादॆवं च सर्वशः ।
सिराभिर्हृदयं वैति तस्मात् हृत्प्रभवाः सिराः ॥ (ಸೂತ್ರ ಸ್ಥಾನ, ಅಧ್ಯಾಯ ೨೧ )

ಇದರ ಅರ್ಥ ಹೀಗಿದೆ:
ರಸವು ಹೃದಯದಿಂದ ಎಸೆಯಲ್ಪಟ್ಟು / ತಳ್ಳಲ್ಪಟ್ಟು ಇಡಿಯ ದೇಹದೊಳಕ್ಕೆ ಸಂಚರಿಸುತ್ತದೆ. ಮತ್ತೆ ಅದು ಸಿರೆಗಳ ಮೂಲಕ ಪುನಃ ಹೃದಯವನ್ನು ಸೇರುತ್ತದೆ. ಹೀಗಾಗಿ ಹೃದಯವೇ ಸಿರೆಗಳ ಮೂಲ.
(’Rasa’ gets forcefully ejected out of the heart, circulates all over the body and then re-enters the heart through the blood vessels called 'Siraa's. Therefore, the heart is the place of origin of these bloos vessels.)
ಸಿರಾ ಅಂದರೆ blood vessel ಎಂದರ್ಥ. ಅದು vein ಅಥವಾ artery -ಎರಡೂ ಆಗಿರಬಹುದು.
’ ರಸ ’ ಅಂದರೆ ನಾವು ಸಾಮಾನ್ಯ ಭಾಷೆಯಲ್ಲಿ 'ರಕ್ತ ' ಎಂದು ಕರೆಯುವ ಪದಾರ್ಥ (whole blood).
’ ರಸ ’ , ದೇಹದಲ್ಲಿ ಹರಿಯುವ ಎಲ್ಲ ದ್ರವ ಪದಾರ್ಥಗಳನ್ನು ಪ್ರತಿನಿಧಿಸುತ್ತದೆ ಹಾಗೂ Cardio vascular system - (ಕನ್ನಡದಲ್ಲಿ ' ರಕ್ತ ಪರಿಚಲನಾ ವ್ಯೂಹ ' ಎಂದು ಸಾಮಾನ್ಯವಾಗಿ ಕರೆಯುವ system )- ಗೆ ಸಂಬಂಧಿಸಿದಂತೆ ಅದರ ಅರ್ಥ whole blood. ( ಅಂದರೆ ಅದರಲ್ಲಿ Plasma, White Blood Cells, Red Blood Cells ಹಾಗೂ Platelets - ಎಲ್ಲವೂ ಸೇರಿವೆ.)

ಸುಮಾರು 1628 ರ ಹೊತ್ತಿಗೆ ವಿಲಿಯಂ ಹಾರ್ವೇ ಬರೆದ ಪ್ರಬಂಧ ಅಚ್ಚಾಗಿತ್ತು. ಅಲ್ಲಿ ಅವನು ಹೇಳಿದ್ದೂ ಇಷ್ಟೇ:
’ ರಕ್ತ ಹೃದಯದಿಂದ ತಳ್ಳಲ್ಪಟ್ಟು, artery ಗಳ ಮೂಲಕ ದೇಹದ ಎಲ್ಲ ಭಾಗಗಳಿಗೂ ತಲುಪುತ್ತದೆ; ಹಾಗೇ ಅದು vein ಗಳ ಮೂಲಕ ಪುನಃ ಹೃದಯವನ್ನು ತಲುಪುತ್ತದೆ. ’ ಹೀಗೆ cardio-vascular system ಒಂದು closed circuit - ಇದು ಆತ ಹೇಳಿದ ಒಟ್ಟು ವಿಷಯ. ಅಲ್ಲಿಯವರೆಗೂ ಪಾಶ್ಚಾತ್ಯ ವೈದ್ಯ ವಿಜ್ಞಾನ ಗ್ಯಾಲನ್ ಅನ್ನುವ ಗ್ರೀಕ್ ತತ್ವಶಾಸ್ತ್ರಿ ಹೇಳಿದ ತಪ್ಪು ಮಾತನ್ನೇ ನಂಬಿಕೊಂಡು ಬಂದಿತ್ತು - ಅದೇನೆಂದರೆ, ರಕ್ತ ತಯಾರಾಗುವುದು liver ನಲ್ಲಿ, ಮತ್ತು ರಕ್ತವನ್ನು ದೇಹದೊಳಗೆ ಸಂಚರಿಸುವಂತೆ ಮಾಡುವ ಅಂಗವೂ liver. ಗ್ಯಾಲನ್ ಮಾತನ್ನು ವಿರೋಧಿಸುವುದಕ್ಕೆ ವಿಲಿಯಂ ಹಾರ್ವೇ ತುಂಬ ಕಷ್ಟಪಡಬೇಕಿತ್ತು. ಅವನ ಮಾತನ್ನು ಅಲ್ಲಗಳೆಯುವುದೆಂದರೆ ಸಾಮಾನ್ಯ ವಿಷಯವೇನೂ ಆಗಿರಲಿಲ್ಲ. ಅದಕ್ಕೇ ಹಲವು ಪ್ರಯೋಗಗಳನ್ನು ಮಾಡಿ ತಾನು ಕಂಡದ್ದನ್ನು ಒಟ್ಟಾಗಿಸಿ ಪ್ರಬಂಧ ಬರೆದ. ಅದಕ್ಕೇ ಅವನಿಗೆ ಇಂದಿಗೂ ವಿಜ್ಞಾನ ಪ್ರಪಂಚದಲ್ಲಿ ಅಷ್ಟೊಂದು ಗೌರವ ಇರುವುದು.

ಆದರೆ ನಮ್ಮ ಭೇಲನೋ, ಪಾಪ, ಬರೆದದ್ದನ್ನೂ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಭಾರತೀಯರ ಉಪೇಕ್ಷೆಗೆ ಒಳಗಾದನಲ್ಲದೆ ಯಾವುದೇ ವೈದ್ಯಕೀಯ ಪಠ್ಯಪುಸ್ತಕದಲ್ಲಾಗಲಿ, ಇತಿಹಾಸದಲ್ಲಾಗಲಿ ಹೆಸರು ಮಾಡಲಿಲ್ಲ.

Rating
No votes yet

Comments