ಭೈರಪ್ಪನವರ ’ಜಲಪಾತ’ ಕಾದಂಬರಿಯಲ್ಲಿನ ಪ್ರಶ್ನೆ

ಭೈರಪ್ಪನವರ ’ಜಲಪಾತ’ ಕಾದಂಬರಿಯಲ್ಲಿನ ಪ್ರಶ್ನೆ

ನಾನು ಭೈರಪ್ಪನವರ ಕಾದಂಬರಿಗಳ ಅಭಿಮಾನಿ.


ಹೀಗೆ ಓದಿದ ಒಂದು ಕಾದಂಬರಿ ’ಜಲಪಾತ’


ಅದರಲ್ಲಿನ ಮುಖ್ಯ ಕಥಾವಸ್ತು ಅಂತಹದ್ದೇನೂ ಅಬ್ಬಬ್ಬಾ ಅನ್ನಿಸಲಿಲ್ಲವಾದರೂ ಅಲ್ಲಿ ಎರೆಡು ಪಾತ್ರಗಳು ನನಗೆ ಯೋಚಿಸುವಂತೆ ಮಾಡಿತು


ಜಲಪಾತದಲ್ಲಿ ನಾಯಕನ  ಮನೆಯ  ಪಕ್ಕದಲ್ಲೇ ಇರುವ ಪ್ರೊಫೆಸರ್ ಒಬ್ಬ ಹಾಗು ಅವನ ಹೆಂಡತಿ ಸುಧಾಬಾಯಿಈ ಇಬ್ಬರೇ ಆ ಪಾತ್ರಧಾರಿಗಳು.


ಪ್ರೊಫೆಸರ್ ಬಹು ಓದಿಕೊಂಡವನು ಅನುವಂಶಿಕತೆ, ಜೈವಿಕತೆ ಇವುಗಳನ್ನೆಲ್ಲಾ ಆಳವಾಗಿ ಅಧ್ಯಯನ ಮಾಡಿದ್ದವನು. ಇದಕ್ಕೆ ತದ್ವಿರುದ್ದ ಆತನ ಹೆಂಡತಿ. ಸಾಂಪ್ರದಾಯಿಕ ಮನೆತನದವಳು ,ಮಡಿ, ಮೈಲಿಗೆ, ಇತ್ಯಾದಿ


ಪ್ರೊಫೆಸರ್‌ನ ವಾದ ಏನೆಂದರೆ ಯಾವುದೇ  ಅನುವಂಶಿಕ ರೋಗವಿರುವವರು ಸಂತಾನ ಕ್ರಿಯೆಗೆ ಮುಂದಾಗಬಾರದು . ಏಕೆಂದರೆ ಆ ರೋಗ ಮತ್ತೆ ಮುಂದಿನ ಪೀಳಿಗೆಗೆ ಹರಿಯುತ್ತದೆ. ಮತ್ತೆ ಇದೇ ಕಥೆ


ಅದೇ ಒಂದು ವೇಳೆ ಅನುವಂಶಿಕ ರೋಗದ ಇತಿಹಾಸವಿರುವವಿರುವ  ವ್ಯಕ್ತಿ  ತನ್ನನ್ನು ಸಂತಾನ ಕ್ರಿಯೆಗೆ ಒಳಪಡಿಸಿಕೊಳ್ಳದೆ ಇದ್ದಲ್ಲಿ ಆ ಅನುವಂಶಿಕ ರೋಗದವರ ಸಂಖ್ಯೆ ಕಡಿಮೆ ಆಗುತ್ತಾ ಕೊನೆಗೊಮ್ಮೆ  ಆ ರೋಗವೇ ಇಲ್ಲದಂತಾಗುತ್ತದೆ. ಅಂತಹವರು ಬೇರೊಬ್ಬ ಆರೋಗ್ಯವಂತ ವ್ಯಕ್ತಿಯ ವೀರ್ಯಾಣುಗಳನ್ನು(ಅಂಡಾಣುಗಳನ್ನು) ಎರವಲು ಪಡೆದು  ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು.


ಈ ಮಾತನ್ನೆ ನಾಯಕನಲ್ಲಿಯೂ ಹೇಳುತ್ತಾನಲ್ಲದೆ ಅದನ್ನೆ ತಾನು ಪಾಲಿಸುತ್ತಿದ್ದೇನೆ ಎಂದು ಹೇಳುತ್ತಾನೆ(ಪ್ರೊಫೆಸರ್‌ಗೆ ಮಧುಮೇಹದ ಇತಿಹಾಸವಿರುತ್ತದೆ)


ಹಾಗಾಗಿ ಅವನು ಮಗು ಬೇಕು ಎಂದು ಹಂಬಲಿಸುತ್ತಿದ್ದ ಸುಧಾಬಾಯಿಗೆ ತನ್ನ ಮಗುವನ್ನು ಹೆರುವ ಬದಲು ಬೇರೊಬ್ಬ ಆರೋಗ್ಯವಂತನ ಮಗುವಿಗೆ ತಾಯಿ ಆಗಲು ಆಗ್ರಹಿಸುತ್ತಾನೆ


ಇದರಿಂದ ನೊಂದ ಸುಧಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ


ಒಂಟಿತನಕ್ಕೆ ಸಿಲುಕಿದ  ಪ್ರೊಫೆಸರ್  ಕುಡಿತ ವೇಶ್ಯೆಯರ ಸಂಗ ಇತ್ಯಾದಿ ಮಾಡಿ ಕೊನೆಗೊಮ್ಮೆ ಜೀವನಕ್ಕೆ ಇತಿಶ್ರೀ ಹಾಡುತ್ತಾನೆ.


ಪ್ರೊಫೆಸರ್‌ನ ವಾದದಲ್ಲಿ ತಿರುಳಿದೆಯಲ್ಲವೇ?


ಹಾಗೊಮ್ಮೆ ನಡೆದರೆ ಮುಂದೆ ಪ್ರಪಂಚದಲ್ಲಿ ಅನುವಂಶಿಕ ಕಾಯಿಲೆಗಳು ಕಡಿಮೆಯಾಗುವ ಸಂಭವನೀಯತೆ ಇದೆಯಲ್ಲವೇ?


ಹೀಗೆ ಮನಸಿಗನಿಸಿದ್ದು


ನೀವೆಲ್ಲಾ ಏನನ್ನುತ್ತೀರಾ?


 


 


 


 


 


 


 


 


 


 


 


 

Rating
No votes yet

Comments