ಭ್ರಮೆಯೋ, ಕನಸೋ, ನಿಜವೋ ಗೊಂದಲದ ಗೂಡು

ಭ್ರಮೆಯೋ, ಕನಸೋ, ನಿಜವೋ ಗೊಂದಲದ ಗೂಡು

ಇವರು ಆಗ ತಾನೆ ಆಫೀಸಿಗೆ ಹೊರಟಿದ್ದರು, ಕೆಲಸದವಳು ಮಗಳಿಗೆ ಶಾಲೆಗೆ ರೆಡಿ ಮಾಡುತಿದ್ದಳು. ಬೆಳಗಿನಿಂದ ಗಡಿಬಿಡಿಯಿಂದ ದುಡಿದ ನಾನು ಹಾಗೆ ಒಂದರೆಘಳಿಗೆ ಸೋಫಾಕ್ಗೆ ಒರಗಿದೆ
ಇದ್ದಕಿದ್ದಂತೆ ಕಾರು ನಿಂತ ಶಬ್ಧವಾಯಿತು ಇವರು ವಾಪಸ್ ಬಂದಿದ್ದರು .

ರೂಪ ನನ್ನ ಮೊಬೈಲ್ ಮರೆತು ಹೋಗಿದ್ದೀನಿ ಕೊಡು ಎಂದರು ಅವರಿಗೆ ಕೊಟ್ಟು ಮತ್ತೆ ಬಂದು ಮತ್ತೆ ಸೋಫಾಗೆ ಒರಗಿದೆ
ಕೆಲಕ್ಶಣಗಳಾಗಿರಬಹುದೇನೋ
ಮತ್ತೆ ಇದ್ದಕಿದ್ದಂತೆ ಕಾರು ನಿಂತ ಶಬ್ದವಾಯಿತು. ಇವರು ಮತ್ತೆ ವಾಪಸ್ ಬಂದಿದ್ದರು . ನಾನು ಏನಾದರೂ ಕೇಳುವ ಮುಂಚೆಯೇ
" ರೂಪ ನನ್ನ ಮೊಬೈಲ್ ಮರೆತು ಹೋಗಿದ್ದೀನಿ ಕೊಡು" ಎಂದರು
ನಂಗೆ ಆಶ್ಚರ್ಯ
"ಈಗ ತಾನೆ ಬಂದು ತೆಗೆದುಕೊಂಡು ಹೋದ್ರಲ್ಲ " ಅಂದೆ
"ಯಾವಾಗ , ತಲೆ ಕೆಟ್ಟಿದೀಯಾ ನಿಂಗೆ" ಎಂದರು
"ಇಲ್ಲಾರಿ ಈಗ ತಾನೆ ನಿಮಗೆ ಕೊಟ್ಟೆ, ಬೇಕಾದ್ರೆ ನೋಡಿ ಅಲ್ಲಿ ಮೊಬೈಲ್ ಇಲ್ಲ" ಎಂದು ನಾನು ಕೈ ತೋರಿದತ್ತ ಮೊಬೈಲ್ ಹಾಗೆ ಇತ್ತು
ಕೆಲಸದ ಹುಡುಗಿ ಸಹಾ
"ಇಲ್ಲ ಆಂಟಿ ಅಂಕಲ್ ಈಗ ತಾನೆ ಬಂದಿರೋದು" ಎಂದಳು
ಇವರು "ಅದಕ್ಕೆ ಜಾಸ್ತಿ ಯೋಚಿಸಬೇಡ ಅನ್ನೋದು , ಸ್ವಲ್ಪ ಮನಸ್ಸು ಫ್ರ್ರಿಯಾಗಿ ಇಟ್ಕೋ " ಎಂದು ಹೇಳಿ ಹೊರಟರು
ಹಾಗಿದ್ದರೆ ನನಗೆ ಆಗಿದ್ದು ಏನು
ಕೆಲವು ಕ್ಶಣಗಳ ಮುಂಚೆ ನಡೆವ ಘಟನೆ ನನ್ನ ಮನಸಿಗೆ ಬಂತೇ
ಇದು ನಿಜವೇ
ನಂಗೆ ಮೈಯ್ಯ ರೋಮಗಳೆಲ್ಲ ನಿಮಿರುತಿದೆ
ಈಗಲೊ ಸಹಾ

ಇದು ಹೀಗೆ ಯಾಕೆ
ನಿಮ್ಮಲ್ಲಿ ಯಾರಿಗಾದರೂ ಹೀಗೆ ಆಗಿದೆಯೇ.

ನನಗೆ ಹಲವು ಬಾರಿ ಈಗ ನಡೆಯುತ್ತಿರುವ ಘಟನೆಗಳು ಈಗಾಗಲೆ ನಡೆದಂತೆ ಭಾಸವಾಗುತ್ತವೆ.
ಒಂದು ಸೆಕೆಂಡಿನ ಮುಂಚೆ ಹೀಗೆ ಆಗಬಹುದೆಂದು ತಿಳಿಯುತ್ತದೆ
ಇದು ಯಾಕೆ
ವಿಶ್ಲೇಷಣೆ ಸಾಧ್ಯವೇ?

Rating
No votes yet

Comments