ಭ್ರಷ್ಟಾಚಾರವ ಮಟ್ಟ ಹಾಕಲು ?

ಭ್ರಷ್ಟಾಚಾರವ ಮಟ್ಟ ಹಾಕಲು ?

ಭ್ರಷ್ಟಾಚಾರವ ಮಟ್ಟ ಹಾಕಲು ?

ಭ್ರಷ್ಟಾಚಾರವ ಮಟ್ಟ ಹಾಕಲು ಪ್ರಧಾನಿಯ ಬಳಿಯಲಿ ಮಂತ್ರದಂಡವಿಲ್ಲ.
ಹಾಗೆಂದವರೇ ಹೇಳಿದರಲ್ಲ.
ಭ್ರಷ್ಟಾಚಾರವ ಮಟ್ಟ ಹಾಕಲು ಸೋನಿಯಳಿಗೆ ಮೈ ಚೆನ್ನಾಗಿಲ್ಲ
ಅಮೇರಿಕೆಯಲ್ಲೇ ಉಳಿದಿಹಳಲ್ಲ.
ಭ್ರಷ್ಟಾಚಾರವ ಮಟ್ಟ ಹಾಕಲು ಕೇಂದ್ರ ಸಂಪುಟಕೆ ಮನಸೇ ಇಲ್ಲ.
ವಕ್ತಾರರು ಅದ ಹೇಳುವರಲ್ಲ.
ಭ್ರಷ್ಟಾಚಾರವ ಮಟ್ಟ ಹಾಕಲು ರಾಷ್ಟ್ರಪತಿಗಳು ಸೂಚಿಸಲಿಲ್ಲ.
ಇಲ್ಲೀ ತನಕ ಹೇಳಿಯೇ ಇಲ್ಲ.
ಭ್ರಷ್ಟಾಚಾರವ ಮಟ್ಟ ಹಾಕಲು ಬಿ.ಜೆ.ಪಿ.ಯಲಿ ಸಹಮತವಿಲ್ಲ.
ಅವರಿಗೆ ಬುಡವೇ ಕೊಳೆತಿಹುದಲ್ಲ.
ಭ್ರಷ್ಟಾಚಾರವ ಮಟ್ಟ ಹಾಕಲು ಲೋಕಪಾಲವೇ ಬೇಕಾಗಿಲ್ಲ.
ಎಂದೂ ಕೆಲವರು ಹೇಳುವರಲ್ಲ.
ಭ್ರಷ್ಟಾಚಾರವ ಮಟ್ಟ ಹಾಕಲು ರಾಜಕಾರಣಿಗೆ ಪುರುಸೊತ್ತಿಲ್ಲ.
ಭ್ರಷ್ಟತೆಗೇ ಹೊತ್ತು ಸಾಲುತ್ತಿಲ್ಲ.
ಅಣ್ಣಾ ಹಜಾರೆ ಸೋಲುತ್ತಿಲ್ಲ.

                                    - ಸದಾನಂದ


Rating
No votes yet

Comments