ಮಂಗಳೂರಿನಲ್ಲಿ ಐತಿಹಾಸಿಕ ಯುವ ದರ್ಶನ
ಅಬ್ಭಾ...! ಒಂದು ಕರಪತ್ರವಿಲ್ಲ, ಒಂದು ಫ್ಲೆಕ್ಸ್ ಇಲ್ಲ, ಒಂದು ಬಂಟಿಂಗ್ಸ್ ಇಲ್ಲ, ಆದರೆ ಮನೆ ಮನೆಗೆ ಹೋಗಿ ಯುವಕರನ್ನು ಮಾತನಾಡಿಸಿ ಮಹಾ ಸಾಂಘಿಕ್ ಗೆ ಹೊರಡಿಸುವ ಕೆಲಸ ಮಾತ್ರ ಯಜ್ಞ ದಂತೆ ನಡೆದಿತ್ತು. RSS ಕಾರ್ಯಕರ್ತರು ಮನೆ ಮಠ ತೊರೆದರು, ಅವರ ಕಣ್ಮುಂದೆ ಒಂದೇ ವಿಚಾರ ಫೆಬ್ರವರಿ 3ಕ್ಕೆ ಒಂದು ಲಕ್ಷ ಯುವಕರನ್ನು ಸೇರಿಸಬೇಕು. ಎಲ್ಲರೂ ಮಂಗಳೂರು ಮತ್ತು ಮಡಕೇರಿ ಜಿಲ್ಲೆಯವರು ಮಾತ್ರ. ನೋಡುವುದಕ್ಕೆ ಹೋಗಿದ್ದ ನಮ್ಮಂತವರೂ ಸಾವಿರಾರು ಮಂದಿ ಇದ್ದೆವು. ಮಹಾ ಸಾಂಘಿಕ್ ನಡೆಯುವ ಸ್ಥಳಕ್ಕೆ ಹೋಗುವ 15 ಕಿಲೋ ಮೀಟರ್ ರಸ್ತೆ ತುಂಬ ಹೊರಟಿದ್ದ ಸ್ವಯಂಸೇವಕರ ಜನಸಾಗರ ಮತ್ತು ಸಾವಿರಾರು ವಾಹನಗಳನ್ನು ನೋಡಿ ನಮ್ಮ ಕಾರ್ ಚಾಲಕ ಸುನಿಲ್ ಹೇಳಿದ "ನಾವು ಅಲ್ಲಿ ತಲುಪುವ ಹೊತ್ತಿಗೆ ಭಾಷಣ ಮುಗಿದು ಹೋಗಿರುತ್ತೆ.! RSS ಕಾರ್ಯಾಲಯ ಸಂಘನಿಕೇತನದಿಂದ ಸುಮಾರು 15 ಕಿಲೋ ಮೀಟರ್ ದೂರದ ಕಾರ್ಯಕ್ರಮದ ಮೈದಾನ ಕ್ಕೆ ಮೂರು ಗಂಟೆ ಮುಂಚೆ ಹೊರಟಿದ್ದ ನಮ್ಮ ಸ್ಥಿತಿ ಇದು. ಹೌದು ನಾವೇನೋ ಸರಿಯಾಗಿ ತಲುಪಿದೆವು. ಆದರೆ ಮಡಕೇರಿಯ ಸ್ವಯಂ ಸೇವಕರು ಮೈದಾನ ತಲುಪುವಾಗ ಸಮಾರಂಭ ಮುಗಿದಿತ್ತು. ಅವರೂ ಕೂಡ ಸಮಯಕ್ಕೆ ಸರಿಯಾಗಿಯೇ ಹೊರಟಿದ್ದರು. ಆದರೂ ಜನ ಸಾಗರದ ಮಧ್ಯೆ ಗಂಟೆಗೆ ಎರಡು ಕಿಲೋ ಮೀಟರ್ ದೂರ ಕಾರ್ ಸಾಗಲು ಕಷ್ಟವಾಗುತ್ತಿತ್ತು. ನಾನಂತೂ ಕಾರ್ ನಿಂದ ಇಳಿದು ಜನಸಾಗರದ ಮಧ್ಯೆ ನಡೆದೇ ಕಾರ್ಯಕ್ರಮ ಸ್ಥಳ ಸೇರಿದೆ. ಅಲ್ಲಿನ ಕಾರ್ಯಕ್ರತರ ಪರಿಶ್ರಮ ಕೇಳಿದರೆ ಮೈ ಝುಮ್ ಎನ್ನುತ್ತೆ. ಒಬ್ಬ ಕಾರ್ಯಕರ್ತನಂತೂ ಮನೆ ಬಿಟ್ಟು 84 ದಿನಗಳಾಗಿದೆಯಂತೆ. ನಿನ್ನೆ ರಾತ್ರಿಯೂ ಹೋಗಿರಲಾರ. ಇವತ್ತು ಹೋಗಬಹುದೇನೋ..!
ಇದು ಎಲ್ಲರಿಗೂ ತಕ್ಕ ಉತ್ತರವೇ ಹೌದು. ಸರಸಂಘಚಾಲಕರೇ ಹೇಳಿದಂತೆ RSS ಗೆ ಶಕ್ತಿ ಪ್ರದರ್ಶನ ಮಾಡಬೇಕಾದ ಅವಶ್ಯಕತೆ ಇಲ್ಲ. ಆದರೂ ಬೆಳೆಯುತ್ತಿರುವ ಸಂಘದ ಶಕ್ತಿ ಗೋಚರವಾಗದೆ ವಿಧಿ ಇಲ್ಲ.
ಕಾಂಗ್ರೆಸ್ ನವರ ಕಾಲ್ನಡಿಗೆಯಾಗಲೀ BJP ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳ ಕಾರ್ಯ ವೈಖರಿಗೂ ಸಂಘದ ಕಾರ್ಯ ಪದ್ದತಿಗೂ ಅಜಗಜಾಂತರ.
ಸಂಘದ ಕಾರ್ಯಕರ್ತನ ಹೃದಯಲ್ಲಿ ಒಂದೇ ವಿಚಾರ-ತಾಯಿ ಭಾರತಿಯ ಗೌರವ ಉಳಿಸಲು ನನ್ನ ಜೀವವನ್ನು ಒತ್ತೆ ಇಟ್ಟಾದರೂ ಹಗಲಿರಳು ಶ್ರಮಿಸಬೇಕು. ಅಷ್ಟೆ...ಅಷ್ಟೆ...ಅಷ್ಟೆ... ಬೇರೇನೂ ಚಿಂತೆ ಇಲ್ಲ. "ಸದೃಢ ಭಾರತವನ್ನು ಕಟ್ಟಲು ನಾವು ಮೀಸಲು"..ಇಷ್ಟೇ ಸ್ವಯಂಸೇವಕರ ವಿಚಾರ. ಅದರಂತೆ ಅವರ ಎಲ್ಲಾ ಕಾರ್ಯಶೈಲಿ. ವಿವೇಕಾನಂದರು ಬಯಸಿದ್ದು ಇಂತಹ ನೂರು ಜನ ಯುವಕರನ್ನು RSS ಆದರೋ ಅಂತಹ ಲಕ್ಷ್ಜ-ಲಕ್ಷ ಯುವಕರನ್ನು ಬೆಳೆಸುತ್ತಿದೆ. ದುಷ್ಟ ಶಕ್ತಿಗಳ ಎದೆ ನಡುಕ ಉಂಟಾಗುವಂತೆ ಬೆಳೆಯುತ್ತಲೇ ಇದೆ.
Comments
ಭವಿಷ್ಯದಲ್ಲಿ ಏನಾಗಬಹುದೆಂಬ
ಭವಿಷ್ಯದಲ್ಲಿ ಏನಾಗಬಹುದೆಂಬ ಚಿಂತೆಗೆ............ಉತ್ತರ .... ಈ ಸಂಘ ಪರಿವಾರ. ಯುವ ಶಕ್ತಿಯ ಮುಂದೆ ಈ ಜಾತ್ಯಾತೀತ ಡೋಂಗಿಗಳ ಬಣ್ಣ ಬಯಲಾಗಬೇಕು. ಉತ್ತಮ ಪ್ರಯತ್ನ. ಇದು ಎಲ್ಲ ಕಡೆ ನಡೆಯಲೆಂದು ಆಶಿಸುತ್ತೇನೆ. ಧನ್ಯವಾದಗಳು ಶ್ರೀಧರರೆ..................
In reply to ಭವಿಷ್ಯದಲ್ಲಿ ಏನಾಗಬಹುದೆಂಬ by Prakash Narasimhaiya
ಧನ್ಯವಾದಗಳು ಪ್ರಕಾಶ್, ವ್ಯಕ್ತಿ
ಧನ್ಯವಾದಗಳು ಪ್ರಕಾಶ್, ವ್ಯಕ್ತಿ-ವ್ಯಕ್ತಿಗಲನ್ನು ಜೋಡಿಸುವ ಸಂಘದ ಕೆಲಸವಾದರೋ ಎಲೆಮರೆಕಾಯಿಯಂತೆ ನಡೆಯುತ್ತಲೆ ಇರುತ್ತದೆ. ಒಮ್ಮೊಮ್ಮೆ ಅದರ ದರ್ಶನ ಸಮಾಜಕ್ಕಾಗುತ್ತದೆ.
ಯಡಿಯೂರಪ್ಪನವರಿಗೆ ಆರ್ಎಸ್ಎಸ್
ಯಡಿಯೂರಪ್ಪನವರಿಗೆ ಆರ್ಎಸ್ಎಸ್ ಬೆಂಬಲ ಕೊಟ್ಟಿದ್ದರೆ ಅವರು ರಾಜ್ಯದ ಮುಂಖ್ಯಮಂತ್ರಿಯಾಗಿರುತ್ತಿದ್ದರು ಅಥವಾ ಬಿಜೆಪಿ ರಾಜ್ಯಾಧ್ಯಕ್ಷರಾಗಿರುತ್ತಿದ್ದರು !! ಅವರಿಗೆ ಆರ್ಎಸ್ಎಸ್ ಬೆಂಬಲ ಕೊಟ್ಟಿದೆ ಎನ್ನುವುದು ಹುರುಳಿಲ್ಲದ ಆಪಾದನೆ ಅಷ್ಟೇ ..
In reply to ಯಡಿಯೂರಪ್ಪನವರಿಗೆ ಆರ್ಎಸ್ಎಸ್ by hvravikiran
ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಪ್ರತಿಕ್ರಿಯೆಗಾಗಿ ಧನ್ಯವಾದಗಳು ರವಿಕಿರಣ್.
In reply to ಪ್ರತಿಕ್ರಿಯೆಗಾಗಿ ಧನ್ಯವಾದಗಳು by hariharapurasridhar
ಆರ್ ಎಸ್ ಎಸ್ ಬಗ್ಗೆ ಹಲವು ಬಾರಿ
ಆರ್ ಎಸ್ ಎಸ್ ಬಗ್ಗೆ ಹಲವು ಬಾರಿ ಪತ್ರಿಕೆ-ದೃಶ್ಯ ಮಾಧ್ಯಮಗಳಲ್ಲಿ ಓದಿರುವೆ ಕೇಳಿರುವೆ-ಹಾಗೆಯೇ ಆ ಸಂಘಟನೆ ಮೇಲಿನ ಕೆಲವು ಅಪವಾದಗಳು-ಆರೋಪಗಳು ಇತ್ಯಾದಿ ಬಗ್ಗೆಯೂ ಕೇಳಿರುವೆ...
ಅದೆಲ್ಲದರ ಹೊರತಾಗಿ ಆ ಸಂಘಟನೆಯ ಶಿಸ್ತು-ತಾಳ್ಮೆ-ಪರಿಶ್ರಮ-ಸಮಯ ಪಾಲನೆ-ಸಂಘಟನೆ-ಅದರ ಸೇವೆ ಇತ್ಯಾದಿ ಗಮನಿಸಿ ಅಚ್ಚರಿ ಆಗಿದೆ..!!
ರಾಜಕಾರಣಿಗಳು-ಜನಪ್ರಿಯತೆ ಬಯಸುವವರು ಹಣ ಕೊತ್ತೋ ಆಮಿಷ ಆಶೆ ತೋರಿಸಿಯೂ ಹಲ ಸಹಸ್ರ ಜನರನ್ನು ಸೇರಿಸಲು ಹೆಣಗಾಡುತ್ತಿರುವ ಈ ಸಂದರ್ಭಗಳಲ್ಲಿ-ಬಹುಪಾಲು ನಾವೆಲ್ಲಾ ಸ್ವಾರ್ಥಿಗಳಾಗಿ ನಮ್ ನಮ್ ಕೆಲಸದಲ್ಲಿ ಮೈ ಮರೆತು ಬಿಡುವಿಲ್ಲದವರ ಹಾಗೆ ಇರುವಾಗ ಅಸ್ಟು ಲಕ್ಷಗಟ್ಟಲೆ ಜನ ಶಿಸ್ತುಬದ್ಧವಾಗಿ ಶಾಂತಿಯಿಂದ -ಕರೆದಾಗಲೆಲ್ಲ ಓಗೊಟ್ಟು ಬರುವುದು ಕಂಡಾಗ ಅಬ್ಬಾ..! ಅನಿಸುವುದು.
ದೇಶ ಸೇವೆಯೇ ಈಶ ಸೇವೆ ಎನ್ನುವುದು ಆರ್ ಎಸ್ ಎಸ್ ಮಟ್ಟಿಗೆ ನಿಜ..
ಆ ಬಗ್ಗೆ ನಿಮ್ಮ ಈ ಸಂಕ್ಷಿಪ್ತ ಸಚಿತ್ರ ಬರಹ ಇಷ್ಟ ಆಯ್ತು...
ಶುಭವಾಗಲಿ..
\।
In reply to ಆರ್ ಎಸ್ ಎಸ್ ಬಗ್ಗೆ ಹಲವು ಬಾರಿ by venkatb83
ಧನ್ಯವಾದಗಳು ವೆಂಕಟ್ ಅವರೇ.
ಧನ್ಯವಾದಗಳು ವೆಂಕಟ್ ಅವರೇ. ಅದೊಂದು ದೇವದುರ್ಲಭ ಸನ್ನಿವೇಶ.
In reply to ಆರ್ ಎಸ್ ಎಸ್ ಬಗ್ಗೆ ಹಲವು ಬಾರಿ by venkatb83
ಧನ್ಯವಾದಗಳು ವೆಂಕಟ್ ಅವರೇ.
ಧನ್ಯವಾದಗಳು ವೆಂಕಟ್ ಅವರೇ. ಅದೊಂದು ದೇವದುರ್ಲಭ ಸನ್ನಿವೇಶ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ನೈತಿಕ ಪೋಲೀಸ್ಗಿರಿ ಮಾಡುವವರಿಗೆ , ಸಂವಿಧಾನಬಾಹಿರವಾಗಿ ಕಾನೂನನ್ನು ಕೈಗೆತ್ತಿಕೊಳ್ಳುವ ವ್ಯಕ್ತಿಗಳಿಗೆ ಈ ಸಂಘಟನೆಯಿಂದಲೇ ಪ್ರೇರಣೆ ದೊರಕುತ್ತಿರುವುದು ಎಂಬುದರಲ್ಲಿ ಸಂಶಯವಿಲ್ಲ. ಕೆಲದಿನಗಳ ಹಿಂದೆ ನಡೆದ ಸಮಾವೇಶಕ್ಕೂ ರಾಜ್ಯದ ಸರ್ಕಾರೀ ಯಂತ್ರದ ವ್ಯಾಪಕ ದುರುಪಯೋಗ ನಡೆಸಲಾಗಿದೆ. ಹಲವಾರು ಸರ್ಕಾರೀ ಬಸ್ಸುಗಳನ್ನು ಸಮಾವೇಶಕ್ಕಾಗಿ ಕಳುಹಿಸಿದುದರಿಂದ ಮರುದಿನ ಹಲವು ಸರ್ಕಾರೀ ಬಸ್ಸುಗಳು ಬರದೆ ಶಾಲೆಗೆ ಹೋಗುವ ಹಳ್ಳಿಗಾಡಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವ ಸನ್ನಿವೇಶ ನಿರ್ಮಾಣವಾಗಿತ್ತು. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೂ ಸಮಾವೇಶದ ದಿನ ಭಾರೀ ತೊಂದರೆಯಾಗಿತ್ತು. ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಿ ಆಯ್ಕೆಯಾಗದ ಸಂಘ ಪರಿವಾರದ ಜನರು ಜನರಿಂದ ಆಯ್ಕೆಯಾದ ಸರ್ಕಾರದ ಮೇಲೆ ಸಂವಿಧಾನಬಾಹಿರವಾಗಿ ನಿಯಂತ್ರಣ ಇರಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಮಾಡಿದಂತೆ ಆಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಒಂದು ರೀತಿಯ ಸರ್ವಾಧಿಕಾರಿ ಧೋರಣೆಗೆ ಸಂಘದ ಪ್ರೋತ್ಸಾಹ ಇದ್ದೇ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಸಂಘದ ಇಂಥ ಧೋರಣೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ ಹೋಗಿದೆ. ಇದು ಹೊರಗಿನ ಜನರಿಗೆ ಗೊತ್ತಾಗುವುದಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ.
In reply to ದಕ್ಷಿಣ ಕನ್ನಡ ಜಿಲ್ಲೆಯಲ್ಲಿ by anand33
[ಹಲವಾರು ಸರ್ಕಾರೀ ಬಸ್ಸುಗಳನ್ನು
[ಹಲವಾರು ಸರ್ಕಾರೀ ಬಸ್ಸುಗಳನ್ನು ಸಮಾವೇಶಕ್ಕಾಗಿ ಕಳುಹಿಸಿದುದರಿಂದ] ಇದೊಂದು ಅಪ್ಪಟ ಸುಳ್ಳು ಎಂದು ಹೇಳದೆ ವಿಧಿಇಲ್ಲ. ಸಮಾವೇಶದಲ್ಲಿ ಒಂದೂ ಸರ್ಕಾರೀ ಬಸ್ ಕಾನಲಿಲ್ಲ.ಅಷ್ಟೇ ಅಲ್ಲ, ಇಡೀ ಟ್ರಾಫಿಕ್ ವ್ಯವಸ್ಥೆಯನ್ನು ನೂರಾರು ಜನ ಕಾರ್ಯಕರ್ತರು ಅಚ್ಚು ಕಟ್ಟಾಗಿ ನಿಯಂತ್ರಿಸಿದರು. ತಮ್ಮ ತಮ್ಮ ವ್ಯವಸ್ಥೆಯಲ್ಲಿ ಅಲ್ಲಿ ಬಂದು ಸೇರಿದ ಲಕ್ಷಾಂತರ ಸ್ವಯಂ ಸೇವಕರ ಧ್ಯೇಯ ನಿಷ್ಠೆಯನ್ನು ವಿರೋಧಿಗಳೂ ಮೆಚ್ಚಲೇ ಬೇಕು.
ಶ್ರೀಧರ್ ಸರ್,
ಶ್ರೀಧರ್ ಸರ್,
ನಮ್ಮ ಮರುಪ್ರತಿಕ್ರಿಯೆಯ ಮೂಲಕ ಈ ಲೇಖನವನ್ನು ನೋಡಿದೆ; ಏಕೆಂದರೆ ಸುಮಾರು ದಿವಸಗಳಿಂದ ನನಗೆ ಸಂಪದ/ಇಂರ್ಟ್ನೆಟ್ ನೋಡುವುದು ಕಾರ್ಯ ಒತ್ತಡದಿಂದ ದುರ್ಲಭವಾಗಿತ್ತು. ಒಳ್ಳೆಯ ವಿಚಾರವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಸಂಘದ ಬೆಂಬಲವನ್ನು ಪಡೆದ ಅನೇಕ ರಾಜಕೀಯ ನಾಯಕರು ಭ್ರಷ್ಟರಿರಬಹುದು; ಆದರೆ ಸಂಘವೇ ಭ್ರಷ್ಟವಲ್ಲ ಎನ್ನುವುದು ಅನೇಕರಿಗೆ ತಿಳಿಯ ಬೇಕಾಗಿದೆ. ಸಂಘದ ಸ್ವಯಂ ಸೇವಕರೊಬ್ಬರು ಒಬ್ಬ ಮುಸಲ್ಮಾನ ಹಿರಿಯನನ್ನು ಸಂಘದ ಕುರಿತ ಅವನ ಅಭಿಪ್ರಾಯವನ್ನು ಕೇಳಿದಾಗ ಅವನು ಹೇಳಿದನಂತೆ, "ಸ್ವಾಮಿ ಜನ ಹಣ್ಣಿದ್ದ ಮರಕ್ಕೇ ಕಲ್ಲು ಹೊಡೆಯುವುದು".
ಶ್ರೀಧರ್ ಸರ್,
ಶ್ರೀಧರ್ ಸರ್,
ನಮ್ಮ ಮರುಪ್ರತಿಕ್ರಿಯೆಯ ಮೂಲಕ ಈ ಲೇಖನವನ್ನು ನೋಡಿದೆ; ಏಕೆಂದರೆ ಸುಮಾರು ದಿವಸಗಳಿಂದ ನನಗೆ ಸಂಪದ/ಇಂರ್ಟ್ನೆಟ್ ನೋಡುವುದು ಕಾರ್ಯ ಒತ್ತಡದಿಂದ ದುರ್ಲಭವಾಗಿತ್ತು. ಒಳ್ಳೆಯ ವಿಚಾರವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಸಂಘದ ಬೆಂಬಲವನ್ನು ಪಡೆದ ಅನೇಕ ರಾಜಕೀಯ ನಾಯಕರು ಭ್ರಷ್ಟರಿರಬಹುದು; ಆದರೆ ಸಂಘವೇ ಭ್ರಷ್ಟವಲ್ಲ ಎನ್ನುವುದು ಅನೇಕರಿಗೆ ತಿಳಿಯ ಬೇಕಾಗಿದೆ. ಸಂಘದ ಸ್ವಯಂ ಸೇವಕರೊಬ್ಬರು ಒಬ್ಬ ಮುಸಲ್ಮಾನ ಹಿರಿಯನನ್ನು ಸಂಘದ ಕುರಿತ ಅವನ ಅಭಿಪ್ರಾಯವನ್ನು ಕೇಳಿದಾಗ ಅವನು ಹೇಳಿದನಂತೆ, "ಸ್ವಾಮಿ ಜನ ಹಣ್ಣಿದ್ದ ಮರಕ್ಕೇ ಕಲ್ಲು ಹೊಡೆಯುವುದು".