ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

ಮಂಗಳೂರಿನ ಪಬ್ ಮೇಲೆ ದಾಳಿ, ಯುವತಿಯರ ಮೇಲೆ ಥಳಿತ ಎಲ್ಲ ಖಂಡನೀಯ. ಆದರೆ ಮಾಧ್ಯಮಗಳು ಅದಕ್ಕೆ ಕೊಟ್ಟ ಪ್ರಾಮುಖ್ಯತೆ ಮಾತ್ರ ಅತಿಯಾಯಿತೆಂದು ಅನ್ನಿಸುವುದಿಲ್ಲವೇ?
- ಈ ಹಿಂದೆ ರಕ್ಷಾಣಾ ವೇದಿಕೆಯವರು ನಡೆಸಿದ ಇದೇ ರೀತಿಯ ದಾಳಿಗಳನ್ನು ಟಿವಿ೯ ಪ್ರಸಾರ ಮಾಡಿರುವುದನ್ನು ನಾನು ನೋಡಿದ್ದೇನೆ. ಅದು ಟಿವಿ೯ ಬಿಟ್ಟು ಇನ್ನೆಲ್ಲೂ ಪ್ರಸಾರವಾದಂತಿಲ್ಲ. ಎನ್ ಡಿ ಟಿ ವಿ, ಸಿ ಎನ್ ಎನ್ ಐಬಿಎನ್ ಗಳು ಅದನ್ನು ತಾಲಿಬಾನೀಕರಣವೆಂದು ಪರಿಗಣಿಸಿಲ್ಲ, (ಯಾಕೆಂದರೆ ಅವರ ಕ್ಯಾಮರಾ ಮೆನ್ ಅಲ್ಲಿರಲಿಲ್ಲ?) http://thatskannada.oneindia.in/news/2007/05/07/pub_culture_protest.html
http://kannada.webdunia.com/newsworld/news/regional/0811/01/1081101017_1.htm
- ಅಷ್ಟೊಂದು ವೀಡಿಯೋ ತೆಗೆದ ಮಾಧ್ಯಮದವರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಸ್ನಿಸಿದ್ದಕ್ಕೆ ಸಿಕ್ಕಾಪಟ್ಟೆ ಉಗೀತಿದ್ರು ಅವರು.
- ತಡೆಯಲು ಸಾದ್ಯವಾಗದಿದ್ದರೆ ಇರಲಿ, ಕಡೇ ಪಕ್ಷ ಪೋಲಿಸಿಗೆ ತಿಳಿಸುವುದು ಮಾಧ್ಯಮದ ಕರ್ತವ್ಯವಲ್ಲವೇ?
- ರಾಮಸೇನೆ ಸಂಘಪರಿವಾರದ್ದೇ ಎಂಬ ಥರ ಎಲ್ಲಾ ಮಾಧ್ಯಮದವರೂ ಬಿಂಬಿಸುತ್ತಿದ್ದಾರೆ. ಭಜರಂಗದಳದ ’ಮೃದುತ್ವ!’ವನ್ನು ವಿರೋಧಿಸಿ ಮುತಾಲಿಕ್ ಹೊಸ ಪಕ್ಷ, ಸಂಘಟನೆ ಕಟ್ಟಿರುವುದು ಮಾಧಮದವರಿಗೆ ತಿಳಿಯುವಷ್ಟು ಅವರ ನೆಟ್-ವರ್ಕ್ ಇಲ್ಲವೇ?
- ಸರಕಾರ ಘಟನೆಗೆ ಕಾರಣವಾದವರನ್ನು ಬಂಧಿಸಲು ತಿಳಿಸಿದೆ, ಪೋಲಿಸರೂ ಸಾಕಷ್ಟು ಜನರನ್ನು ಬಂಧಿಸಿದ್ದಾರೆ. ಸರಕಾರ ಇನ್ನೇನು ಮಾಡಬೇಕಿತ್ತು? ಕುಮಾರ ಮುಖ್ಯಮಂತ್ರಿಯಾಗಿದ್ದರೆ ಈಗ ರಾಜೀನಾಮೆ ಕೊಡುತ್ತಿದ್ದರೇ?
- ಕುಡಿದು ವಾಹನ ಚಲಾಯಿಸಿ ನಾಲ್ಕು ಜನರನ್ನು ಕೊಂದ ಘಟನೆ ಎಷ್ಟು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ?

Rating
No votes yet

Comments