ಮಂಜಿನ ತೆರೆ
"ಗುಡ್ ಮಾರ್ನಿಂಗ್ ವೀಕ್ಷಕರೆ, ನಾನು ನಿಮ್ಮ ಪ್ರೀತಿಯ ಸಂಗೀತಾ. ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸೋಕೆ,ನಿಮ್ಮ ಸಂತಸಾನ ನಮ್ಮ ಜೊತೆ ಹಂಚಿಕೊಳ್ಳೊಕೆ ತೆರೆ ಮೇಲೆ ಕಾಣ್ತಿರೋ ನಂಬರಿಗೆ ಕರೆ ಮಾಡಿ ನಂಜೊತೆ ಮಾತಾಡಿ.ಬನ್ನಿ ಇವತ್ತಿನ ಮೊದಲನೆ ಕರೆನಾ ಯಾರು,ಎಲ್ಲಿಂದ ಮಾಡ್ತಿದಾರೆ ಅಂತ ಕೇಳೋಣ ಹಲೋ......"ಸಹನಾ ಟಿ.ವಿ ಆನ್ ಮಾಡಿದಾಗ ವಿ.ಜೆ ಒಂದೇ ಉಸಿರಿನಲ್ಲಿ ಮಾತಾಡ್ತಾ ಇದ್ದಳು. ಮೊದಲೇ ಕೋಪದಲ್ಲಿದ್ದವಳು ಹೆಸರಿಗೆ ತಕ್ಕುದಾದ ಸಹನೆಯನ್ನುಮರೆತು ಸಿಡಿಮಿಡಿಗೊಳ್ಳುತ್ತಾ ಒಳಗೆ ಹೋಗಿ ತನಗಿಂತಲೂ ಸ್ವಲ್ಪ ಹೆಚ್ಚೇ ಎತ್ತರವಾಗಿದ್ದ ಫ್ರಿಡ್ಜ್ ತೆಗೆದು ಕೈಗೆ ಸಿಕ್ಕಿದ ಚಾಕೊಲೇಟ್ ಹಿಡಿದು ಟಿ.ವಿ ಮುಂದೆ ಕುಳಿತಳು. ಹೀಗೆ ಚಾನೆಲ್ ಬದಲಿಸುತ್ತಿರುವಾಗ ಒಂದು ಜಾಹೀರಾತು ಅವಳ ಮನಸ್ಸನ್ನು ತಟ್ಟಿತು. "ಅಮ್ಮ ನೀನು ಎಲ್ಲರ ಬಗ್ಗೆನೂ ಕೇರ್ ತಗೋತಿಯಾ, ಆದ್ರೆ ನಿನ್ನ ಬಗ್ಗೆ ಗಮನಾನೇ ಕೊಡಲ್ವಲ್ಲ?!" ಅನ್ನೋ ಸಂಭಾಷಣೆ ಕಿವಿಗೆ ಬಿದ್ದಾಗ ಕಲ್ಲಿನಂತಾಗಿದ್ದ ಅವಳ ಮನಸ್ಸು ಕೈಯಲ್ಲಿದ್ದ ಚಾಕೊಲೇಟ್ ನ ಹಾಗೆ ಕರಗಲು ಶುರುವಾಯ್ತು. ಕಣ್ಣುಗಳು ಕಲರ್ ಟಿ.ವಿ ನೋಡ್ತಾ ಇದ್ದರೂ ಮನಸ್ಸು ಮಾತ್ರ ಎಲ್ಲೋ ಕಳೆದುಹೋಗಿತ್ತು.
ಸಹನಾ ಸಹನೆ ಕಳೆದುಕೊಂಡು ಮುಖ ಊದಿಸಿಕೊಳ್ಳೋಕೆ ಕಾರಣ ಇಷ್ಟೆ.ಅವಳ ಅಮ್ಮ ಮಮತಾ.ಹೆಸರಿಗೆ ತಕ್ಕ ಹಾಗೆ ಮಮತಾಮಯಿ(ಅಮ್ಮ ಅಂದ್ಮೇಲೆ ಮಮತೆ ಬಗ್ಗೆ ಹೇಳ್ಬೇಕಾ),ಹಾಗೆನೇ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಉದ್ಯೋಗಿ. ತಮ್ಮ ಕಾರ್ಯಕ್ಷೇತ್ರದಲ್ಲಿ ಎಷ್ಟೇ ಚಾಣಾಕ್ಷತೆಯನ್ನು ಹೊಂದಿದ್ದರೂ, ಆಫೀಸ್ ಕೆಲಸ ಬಿಟ್ಟು ಬೇರೆಲ್ಲೇ ಹೋಗಬೇಕಾದ್ರು ಸಮಾಜಕ್ಕೆ ಹೆದರಿಯೋ ಅಥವಾ ಒಂಟಿತನಕ್ಕೆ ಬೇಸತ್ತೋ ಮಗಳ ಸಾಮೀಪ್ಯವನ್ನು ಬಯಸುವವರು. ಇನ್ನು ಮಗಳೋ ವಯೋಸಹಜವಾದ ಚಾಂಚಲ್ಯವನ್ನು ಹೊಂದಿದವಳು.ಮಾರುತಕ್ಕೆ ಸಿಲುಕಿದ ನೌಕೆಯಂತೆ ಒಮ್ಮೆ ಹಾಗೆ,ಒಮ್ಮೆ ಹೀಗೆ ಎನ್ನುವ ಮನಸ್ಥಿತಿಯನ್ನು ಹೊಂದಿದವಳು.ಅಮ್ಮ ಜೊತೆಗೆ ಬಾ ಎಂದು ಕರೆದಾಗ ಒಮ್ಮೆ ಕಣ್ಣರಳಿಸಿ ಹೂಂ ಗುಟ್ಟಿದರೆ,ಮತ್ತೊಮ್ಮೆ ಕಣ್ಣು ಕೆಂಪಗಾಗಿಸಿಕೊಳ್ಳುವವಳು. ಇಂದಿನ ಅವಳ ಹುಸಿಗೋಪಕ್ಕೂ ಇಂತದ್ದೇ ಒಂದು ಸನ್ನಿವೇಶ ಕಾರಣವೆಂದು ಬೇರೆ ಹೇಳಬೇಕಿಲ್ಲ.
ಏನೇನೋ ಯೋಚನೆಗಳಲ್ಲಿ ಮುಳುಗಿದ್ದ ಸಹನ ವಾಸ್ತವತೆಗೆ ಬಂದದ್ದು ಅವರಮ್ಮ ಬಂದು ಬಾಗಿಲು ತಟ್ಟಿದಾಗಲೇ.ಅಲ್ಲಿಯವರೆಗೆ ಗೊಂದಲದ ಗೂಡಾಗಿದ್ದ ಅವಳ ಮನಸ್ಸು ಅಮ್ಮನ ಮುಖ ನೋಡಿದ ತಕ್ಷಣ ಗುಬ್ಬಚ್ಚಿ ಹಾಗೆ ರೆಕ್ಕೆ ಬಿಚ್ಚಿ ಹಾರತೊಡಗಿತು. ಅವಳ ಕೈಯಲ್ಲಿ ಕರಗಿದ ಚಾಕೊಲೇಟ್ ನ ನೋಡಿ ಮಮತಾ" ಏನೇ ಇದು ಕೈಯೆಲ್ಲಾ ಚಾಕೊಲೇಟ್ ಮಾಡ್ಕೊಂದಿಯಾ ಮಗು ಥರಾ, ಸರಿಯಾಗಿ ಚಾಕೊಲೇಟ್ ತಿನ್ನೋಕೂ ಬರಲ್ವಾ!" ಅಂದಿದ್ದೇ ತಡ, ಸಹನಾಳ್ ಭಾವನೆಗಳ ಕಟ್ಟೆಯೊಡೆಯಿತು.ಅಮ್ಮನ ಕಾರುಣ್ಯ ತುಂಬಿದ ಕಣ್ಣುಗಳನ್ನು ನೋಡ್ತಾ " ಅಮ್ಮ, ನಾನು ನಿನ್ನ ಮಗಳಲ್ವಾ? ಮತ್ತೆ ನಿನ್ನಲ್ಲಿರೋ ಸಹನೆ,ತಾಳ್ಮೆ ನನಗ್ಯಾಕೆ ಇಲ್ಲ! ನೀನು ನನಗಾಗಿ ಏನೆಲ್ಲಾ ಮಾಡ್ತಿಯಾ ! ನಾನು ಕಣ್ಣು ಬಿಡುವಾಗಿನಿಂದ ಹಿಡಿದು ಮತ್ತೆ ನಾನು ಕಣ್ಮುಚ್ಚಿ ಕನಸಲ್ಲಿ ಕರಗಿಹೋಗುವವರೆಗೂ ನನ್ನ ಜೊತೆಯಲ್ಲಿಯೇ ಇರ್ತೀಯಾ. ನನ್ನ ಪ್ರತಿಯೊಂದು ಮಾತಿಗೂ ಮನಸ್ಪೂರ್ವಕವಾಗಿ ಸ್ಪಂದಿಸ್ತಿಯಾ. ಆದ್ರೆ ನಾನು ಮಾತ್ರ ಯಾವಾಗಲೂ ನನ್ನ ಬಗ್ಗೆನೇ ಯೋಚಿಸ್ತಾ ಇರ್ತೀನಿ.ನಾನಾಯ್ತು,ನನ್ನ ಫ್ರೆಂಡ್ಸ್, ನನ್ನ ಸಂತೋಷ ಅಂತಾನೇ ಯೋಚಿಸ್ತಾ ಇರ್ತೀನಿ.ನಿನ್ನ ಮನಸ್ಸಿಗೆ ನೋವಾಗೋ ಹಾಗೆ ಮಾತಾಡಿದ್ದಕ್ಕೆ ಕ್ಷಮಿಸ್ತೀಯಾ ಅಮ್ಮ ಪ್ಲೀಸ್. ಮತ್ತೆ ಈ ಥರ ಆಗದೇ ಇರೋ ಹಾಗೆ ನಡೆದುಕೊಳ್ತೀನಿ " ಅಂತ ಅಮ್ಮನ ಮುಂದೆ ಗೋಗರೆಯುತ್ತಾಳೆ. ಆದ್ರೆ ಮಮತಾ ಪುಟ್ಟ ಮಗುವನ್ನು ಸಂತೈಸುವ ಹಾಗೆ ಮಾತಾಡುತ್ತಾ" ಅದೇನು ಮಾತು ಅಂತ ಆಡ್ತೀಯಾ ಕಣೆ, ಅಮ್ಮ ಮಗಳ ಮಧ್ಯೆ ಸಾರಿ ಕೇಳಿ ಒಪ್ಪಂದ ಆಗೋದು ಏನಿರುತ್ತೆ? ಇನ್ನೊಂದ್ಸಲ ಇಂಥ ಮಾತಾಡಿದರೆ ಕೆನ್ನೆಗೊಂದು ಕೊಡ್ತೀನಿ ನೋಡು " ಅಂತ ಹುಸಿಗೋಪ ತೋರಿಸ್ತಾಳೆ. ಆಗ ಸಹನಾ ನನಗೆ ಹೊಡಿತೀಯಾ ಅಮ್ಮ ಎಂದು ಪೆಚ್ಚಾಗಿ ಕೇಳಿದ್ದಕ್ಕೆ ,ಮುಗುಳ್ನಗೆ ತುಂಬಿದ ಮುಖದಿಂದ ಕೊಡ್ತೀನಿ ಅಂದದ್ದು ಪೆಟ್ಟು ಅಲ್ಲಮ್ಮ ,ಪ್ರೀತಿಯ ಕಂದನಿಗೆ ಒಂದು ಸಿಹಿಮುತ್ತು ಎಂದಾಗ ಇಬ್ಬರ ನಡುವಿನ ಮಂಜಿನ ತೆರೆ ಕರಗಿ ಸಂಭ್ರಮದ ಸೇತುವೆ ತೆರೆದುಕೊಳ್ಳುತ್ತದೆ.
ಹೌದಲ್ವಾ ಸ್ನೇಹಿತರೇ, ನಾವು ತುಂಬಾ ಸಲ ಫ್ರೆಂಡ್ಸು,ಪಾರ್ಟಿ,ಕೆಲಸ,ಕಾಲೇಜು ಅಂತ ಫ್ರೆಂಡ್ ,ಗೈಡ್,ಫಿಲಾಸಫರ್ ಗಿಂತಲೂ ಹೆಚ್ಚಿನ ಸ್ಥಾನವನ್ನು ನಮ್ಮ ಜೀವನದಲ್ಲಿ ತುಂಬುವ ತಾಯಿಯನ್ನು ಮಾತಾಡಿಸೋಕೂ ಸಮಯ ಇಲ್ದಿರೋ ಥರ ಮಾಡ್ಕೊಂಡಿರ್ತೀವಿ. ಆದ್ರೆ, ನಮ್ಮಿಂದ ಕೇವಲ ಪ್ರೀತಿ,ನಮ್ಮ ಮುಖದಲ್ಲಿ ನಗು,ನಮ್ಮ ಯಶಸ್ಸು ಬಯಸೋ ಆ ದೇವತೆಗೆ ಒಂದಷ್ಟು ಪ್ರೀತಿ, ಒಂದಿಷ್ಟು ಕಾಳಜಿ,ನಮ್ಮ ಮನಸ್ಸಿನಲ್ಲಿ ಒಂದು ಒಳ್ಳೆ ಜಾಗ, ಅವಳ ಮನಸ್ಸಿಗೆ ನೆಮ್ಮದಿ,ಅಮ್ಮಾ ನಾನಿನ್ನ ಜೊತೆಗೆ ಇದ್ದೀನಿ,ಇರ್ತೀನಿ ಅನ್ನೋ ಧೈರ್ಯ ಕೊಟ್ಟ್ರೆ ನಮ್ಮ ಜೀವನಾನೂ ಸಾರ್ಥಕ ಅನಿಸೊಲ್ವಾ? ಹೌದು ಸ್ನೇಹಿತರೆ ನಾವು ಅಮ್ಮನಿಗೆ ಹ್ಯಾಪಿ ಮದರ್ಸ್ ಡೇ ಅಂತ ವಿಶ್ ಮಾಡೊದಲ್ಲದೆ ಹ್ಯಾಪಿ ಫ್ರೆಂಡ್ಷಿಪ್ ಡೇ ಅಂತಾನೂ ವಿಶ್ ಮಾಡ್ಬೇಕಲ್ವಾ(ಮಾಡ್ಬಹುದಲ್ವಾ)?!
Comments
ಉ: ಮಂಜಿನ ತೆರೆ: ಅಮ್ಮ ಎನ್ದರೆ..........
In reply to ಉ: ಮಂಜಿನ ತೆರೆ: ಅಮ್ಮ ಎನ್ದರೆ.......... by venkatb83
ಉ: ಮಂಜಿನ ತೆರೆ: ಅಮ್ಮ ಎನ್ದರೆ..........
ಉ: ಮಂಜಿನ ತೆರೆ
In reply to ಉ: ಮಂಜಿನ ತೆರೆ by asuhegde
ಉ: ಮಂಜಿನ ತೆರೆ
In reply to ಉ: ಮಂಜಿನ ತೆರೆ by veena wadki
ಉ: ಮಂಜಿನ ತೆರೆ
In reply to ಉ: ಮಂಜಿನ ತೆರೆ by asuhegde
ಉ: ಮಂಜಿನ ತೆರೆ
ಉ: ಮಂಜಿನ ತೆರೆ
In reply to ಉ: ಮಂಜಿನ ತೆರೆ by makara
ಉ: ಮಂಜಿನ ತೆರೆ
In reply to ಉ: ಮಂಜಿನ ತೆರೆ by makara
ಉ: ಮಂಜಿನ ತೆರೆ:
In reply to ಉ: ಮಂಜಿನ ತೆರೆ: by venkatb83
ಉ: ಮಂಜಿನ ತೆರೆ: