ಮಂಥನ
ನನ್ನ ಈ ಬ್ಲಾಗಿನಲ್ಲಿ ಒಂದಿಷ್ಟು ಸದ್ವಿಚಾರಗಳ ಚಿಂತನ-ಮಂಥನ ನಡೆಯಬೇಕೆಂಬುದು ನನ್ನ ಇಚ್ಛೆ. ನಮ್ಮ ದೇಶದಲ್ಲಿ ಅನೇಕ ಮಹಾಮಹಿಮರು, ಅವದೂತರು, ಸಂತರು, ಜನ್ಮತಾಳಿ ನಮ್ಮ ಭವ್ಯ ಪರಂಪರೆಯನ್ನು ಇನ್ನಷ್ಟು ಮತ್ತಷ್ಟು ಅರಳಿಸಿದ್ದಾರೆ. ಅವರುಗಳ ವಿಚಾರ ಓದಿದಾಗಲೆಲ್ಲಾ ನಿಮ್ಮೊಡನೆ ಹಂಚಿಕೊಳ್ಳುವಾಸೆ. ಇಂದಿನ ಕಾಲಘಟ್ಟಕ್ಕೆ ನಮ್ಮ ಪರಂಪರೆಯನ್ನು ನೆನಪು ಮಾಡಿಕೊಂಡಾಗ ಮಾತ್ರ ನೆಮ್ಮದಿ ದೊರಕೀತು. ಇದೇ ಈ ನನ್ನ" ಬ್ಲಾಗಿನ "ಉದ್ದೇಶ.ಗ್ರಂಥಗಳನ್ನು ಓದಿ ಜ್ಞಾನ ಸಂಪಾದಿಸುವುದು ಒಂದು ಹಂತವಾದರೆ ಜೀವಿತದ ಅವಧಿಯಲ್ಲಿ ಸಮಾಜದ ಮಧ್ಯೆ ಅನುಭವದಿಂದ ಪಡೆಯುವುದು ಸಾಕಷ್ಟಿದೆ. ಅದಕ್ಕೆ ಹೃದಯವಂತಿಕೆ ಬೇಕು, ಸಾಮಾಜಿಕ ಕಳಕಳಿ ಇರಬೇಕು ಅಷ್ಟೆ. ನಾನಂತೂ ಹೆಚ್ಚು ಓದಿದವನಲ್ಲಾ, ಪಂಡಿತನಲ್ಲ. ಆದರೆ ಸಮಾಜದ ಬಗ್ಗೆ ಕಳಕಳಿ ಖಂಡಿತಾ ಇದೆ. ಇದೇ ನನ್ನ ಬಂಡವಾಳ.ನಾನು ಕಂಡಿದ್ದು ಕೇಳಿದ್ದು ಸಮಾಜಕ್ಕೆ ಕಿಂಚಿತ ಒಳ್ಳೆಯದಾಗುವುದಾದರೆ ಅದಕ್ಕೆ ಅಕ್ಷರ ಕೊಡುವ ಪ್ರಯತ್ನ ಮಾಡುವೆ.ನೀವೂ ಸಾತ್ ಕೊಡುವುದಾದರೆ ಜೊತೆಗೆ ಚಿಂತನ ಮಂಥನಕ್ಕೆ ಸದಾ ಸ್ವಾಗತವಿದೆ. ಹರಿಹರಪುರಶ್ರೀಧರ್
Comments
ಉ: ಶಕ್ತಿ ದೇವತೆ ಉಡುಸಲಮ್ಮ
In reply to ಉ: ಶಕ್ತಿ ದೇವತೆ ಉಡುಸಲಮ್ಮ by Rakesh Shetty
ಉ: ಶಕ್ತಿ ದೇವತೆ ಉಡುಸಲಮ್ಮ