ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.

ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.

ನಿನ್ನೆ ನನ್ನ ಹೆಂಡತಿಗೆ ಒಂದು ಈ ಮೇಲು ಬಂದಿತ್ತು. ಅವಳು ಅದನ್ನು ಓದಿ ನನಗೆ ಹೇಳಿದ್ದರೂ ಸಾಕಿತ್ತು. ಆದರೆ ಫಾರ್ವರ್ಡ್ ಮಾಡಿದ್ದಳು. ಓದಿದೆ, ನಂತರ ಅದನ್ನು ನೆನೆಸಿಕೊಂಡರೂ ಸಾಕು ಮನಸ್ಸಿಗೆ ಅತೀವ ಕಸಿವಿಸಿಯಾಗುವುದು.

ಆಸ್ಪತ್ರೆಯೊಂದರಲ್ಲಿ ಚಿಕ್ಕ ಪೋರನೋರ್ವ ಮೃತನಾದನಂತೆ. ಆಸ್ಪತ್ರೆಗೆ ದಾಖಲಾದ ಕಾರಣವೇನೆಂದರೆ ಮುಖದಲ್ಲಿ ನವೆಯಾಗುತ್ತಿತ್ತು. ಆದರೆ ತುರಿಸಿಕೊಂಡರೆ ನವೆಯಾಗುತ್ತಿದ್ದ ಭಾಗಕ್ಕೆ ಸಂವೇದನೆಗಳು ತಲುಪುತ್ತಿರಲಿಲ್ಲ. ಎಕ್ಸ್-ರೇ ಮಾಡಿಸಿದಾಗ ಜೀವಂತವಾಗಿದ್ದ ಇರುವೆಗಳು ಗುಂಪು ಗುಂಪಾಗಿ ಕಾಣಿಸಿವೆ! ಈ ಇರುವೆಗಳು ಅತ್ತಿತ್ತ ತಿರುಗುತ್ತಲೇ ಇದ್ದುದರಿಂದ ಡಾಕ್ಟರರಾದರೂ ಆಪರೇಷನ್ನನ್ನು ಹೇಗೆ ಮಾಡಿಯಾರು? ನರಳುತ್ತಿದ್ದ ತರಳನ ಜೀವವು ಮುಕ್ತಿಗೆ ಶರಣಾಗಿದೆ :(
ಸರ್ಜನ್ನರ ಅಭಿಪ್ರಾಯದ ಮೇರೆಗೆ, ಪ್ರಾಯಶಃ ಆ ಹುಡುಗ ಸಿಹಿತಿಂಡಿಯನ್ನು ತಿನ್ನುತ್ತಲೇ ನಿದ್ರೆ ಹೋಗಿದ್ದಾನೆ, ರಾತ್ರಿ ಇರುವೆಗಳು ಆ ಸಿಹಿಗೆ ಆಕರ್ಷಿತವಾಗಿ ಬಂದು ಕಿವಿಯ ಬಳಿಗೂ ಅಂಟಿಕೊಂಡಿದ್ದ ತಿನಿಸಿಗಾಗಿ ಬಂದು ಕಿವಿಯ ಮುಖಾಂತರ ಮೆದುಳಿಗೆ ಪ್ರವೇಶಿಸಿ ಅಲ್ಲಿಯೇ ತಮ್ಮ ಕಾರ್ಯವನ್ನು ಮುಂದುವರೆಸಿವೆ.

ತುರಿಸಿಕೊಳ್ಳಲೂ ಆಗದಂತಹ ಅಸಹಾಯಕತೆಗೆ ಸಿಲುಕಿದ ಬಾಲಕನಂತಹುದೇ ಸ್ಥಿತಿಯೊಂದು ತೈವಾನಿನ ಆಸ್ಪತ್ರೆಗೆ ದಾಖಲಾದ ದುರ್ದೈವಿಯೋರ್ವನಿಗೆ ಬಂದೊದಗಿ ಆತನೂ ಯಮಪಾಶಕ್ಕೆ ಸಿಲುಕಿದ ದಾರುಣ ಘಟನೆಯೂ ಸಹ ಈಮೇಲಿನಲ್ಲಿತ್ತು. ಮೇಲೆ ವಿವರಿಸಿದಂತಹುದೇ ಘಟನೆಯಲ್ಲಿ ಆತ ಮೃತನಾದ ನಂತರ ಆಟಾಪ್ಸಿಯಲ್ಲಿ ಗೊತ್ತಾಗಿದ್ದೇನೆಂದರೆ ಆತನ ಮೆದುಳನ್ನು ಇರುವೆಗಳು ಚೂರು ಚೂರೇ ತಿನ್ನುತ್ತಿದ್ದುದು...

ಮಕ್ಕಳು ಮಾತ್ರವಲ್ಲ ಯಾರೇ ಆಗಲಿ, ಮಲಗುವಾಗ ಕಿವಿಗೆ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು. (ಮೂಗಿನ ಹೊರಳೆಗಳಿಗೆ ಇಟ್ಟುಕೊಳ್ಳುವ ಪ್ರಯೋಗ ಬೇಡ :) ಮಕ್ಕಳಿಗೆ ಸಿಹಿ ತಿನ್ನಿಸಿದ ನಂತರ ಒಂಚೂರು ಜಾಗ್ರತೆ ವಹಿಸಿಕೊಂಡರೆ ಇನ್ನೂ ಒಳ್ಳೆಯದು.

ಎನಗಿಂತ ಕಿರಿಯರಿಲ್ಲ.
ರಘುನಂದನ ಶರ್ಮ

Rating
No votes yet

Comments