ಮತ್ತೊಂದು ಭಾನುವಾರ

ಮತ್ತೊಂದು ಭಾನುವಾರ

ಬೆಂಗಳೂರಲ್ಲಿ ಎಂತಹ ಒಳ್ಳೇ ಹೋಟೆಲಿನಲ್ಲಿ ಚ್ಯಾಟ್ಸ್ ತಿಂದರೂ ಸ್ವಲ್ಪ ದಿನಗಳಲ್ಲೇ sore throat ಗ್ಯಾರಂಟಿ. ಈ ವಾರ ಎರಡು ಮೂರು ಬಾರಿ ಸ್ನೇಹಿತರೊಂದಿಗೆ ಚ್ಯಾಟ್ಸ್ ಪ್ರೋಗ್ರಾಮ್ ಇಟ್ಟುಕೊಂಡದ್ದರಿಂದ ವಾರಾಂತ್ಯ ಬರುವಷ್ಟರಲ್ಲೇ ನೆಗಡಿ, ಜ್ವರ ಶುರು. ಮೊನ್ನೆ ರಾತ್ರಿಯೇ ಅನಿಸಿತ್ತು... ಮುಂದೆರಡು ದಿನ ಕಷ್ಟ ಆಗಬಹುದೆಂದು.

ಎಂದೂ ಬೇಗ ಏಳದವ ಇವತ್ತು ಮುಂಜಾನೆ ಎದ್ದು ಅತ್ತ ದೆಹಲಿಯಲ್ಲಾದ ಬಾಂಬ್ ಸ್ಪೋಟದ ಬಗ್ಗೆ ವಿವಿಧ ಸುದ್ದಿ ಮಾಧ್ಯಮಗಳ ವರದಿ ಓದುತ್ತಿದ್ದೆ. ನಡುನಡುವೆ ಉಪ್ಪುನೀರು gargle ಮಾಡೋದು, pillsಉ ಟಾನಿಕ್ಕು ಪಕ್ಕದಲ್ಲಿಟ್ಟುಕೊಂಡ ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳಲು ಬೇಸರವಾದಾಗ ಸ್ವತಃ ಧೂಳು ಹಿಡಿದುಕೊಂಡಿದ್ದ ವ್ಯಾಕ್ಯೂಮ್ ಹಿಡಿದು ಕಸ ಹೊಡೆದದ್ದು. ಹೊರಗೆ ಹೋಟೆಲಿನಲ್ಲಿ ತಿಂದದ್ದಕ್ಕೆ ಇವೆಲ್ಲದರ ನಡುವೆ ನನಗೇ ನಾನೇ ಬೈದುಕೊಂಡದ್ದು.

ಕಳೆದ ವಾರ ಯವುದೋ ಮೀಟಿಂಗ್ ಅಟೆಂಡ್ ಮಾಡೋದಕ್ಕೆಂದು ಹೋಗುವಾಗ ದಾರೀಲಿ ಸೂಪರ್ ಮಾರ್ಕೆಟ್ಟೊಂದರ ಬಳಿ ಗಾಡಿ ನಿಲ್ಲಿಸಿ ಪೆನ್ನು ತಗೊಂಡು ಹೊರಬರುತ್ತಿರುವ ನನಗೆ ಪಕ್ಕದ ಹೋಟೆಲಿನ ಚ್ಯಾಟ್ ಅಂಗಡಿಯ ಗುರುತು ಹಿಡಿದು ಮಾತನಾಡಿಸಿದ. ಸುಮಾರು ದಿನಗಳಿಂದ ಅತ್ತ ಕಡೆ ಹೋಗಿರಲಿಲ್ಲ.  ಅವನ ಜೊತೆ ಮಾತುಕತೆ ಹೀಗಿತ್ತು:
"ಸಾಬ್ಜೀ, ಚ್ಯಾಟ್ಸ್ ಖಾನಾ ಚೋಡ್ ದಿಯಾ?"
"ನಹೀ ಗುರೂ,  ಚೋಡ್ನೇ ಕೆ ಲಿಯೆ ಏಕ್ ಬಾರ್ ಶಾಯದ್ ಬನಾರಸ್ ಜಾನ ಪಡೇಗಾ"

ಈಗ ಇದೊಂದು ಭಾನುವಾರವೆ ಸಾಕು ಅನ್ನಿಸುತ್ತಿದೆ :P

Rating
No votes yet

Comments