ಮತ್ತೊಂದು ವಾರದ ನನ್ನ ಓದು

ಮತ್ತೊಂದು ವಾರದ ನನ್ನ ಓದು

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡು ಓದಿದ ಪುಸ್ತಕಗಳು ಹೀಗಿವೆ.
೧) ಹೋದ ವಾರ ಅರ್ಧ ಓದಿದ್ದ ಕನ್ನಡ-ಸಂಸ್ಕ್ುತ ಕೋಶ ಮುಗಿಸಿದೆ . ಸಂಸ್ಕ್ುತ ಕಲಿಯೋದು ಕನ್ನಡ ಜನಕ್ಕೆ ತುಂಬ ಸುಲಭ . ಏಕೆಂದರೆ ಅಲ್ಲಿನ ನೂರಕ್ಕೆ ತೊಂಬತ್ತೈದು ಕನ್ನಡ ಶಬ್ದಗಳಿಗೆ ಸಂಸ್ಕ್ುತದಲ್ಲೂ ಅವೇ ಶಬ್ದಗಳು! ಇರಲಿ . ನಾನು ಬೆಳೆಸುತ್ತಿರುವ ಸರಳ ಕನ್ನಡ ನುಡಿಗನ್ನಡಿ ಗೆ ಇಲ್ಲಿ ಇನ್ನಷ್ಟು ಶಬ್ದಗಳು ಸಿಕ್ಕವು ! ಮೂರನೇ ಆವ್ುತ್ತಿ ಸದ್ಯದಲ್ಲೇ ತಯಾರುಮಾಡುವೆ. ಹಾದಿನೋಡುತ್ತಿರಿ !
೨) ಅನಂತ ಕಲ್ಲೋಳರ 'ಕರೆ ಮತ್ತು ಇತರ ಕತೆಗಳು ' - ಓದಿದೆ ಪರವಾಗಿಲ್ಲ. ಒಂದು ಕತೆ ಚೆನ್ನಾಗಿದೆ . ಮತ್ತೊಂದು ದಿನ ಹೇಳ್ತೀನಿ.
೩) ಅಶ್ವತ್ಥ ಎಂಬ ಕಥೆಗಾರರ ದೊಡ್ಡ ಸಂಕಲನವೊಂದು ಸೆಕಂಡ್ ಹ್ಯಾಂಡ್ ಅಂಗಡಿಯಲ್ಲಿ ಸಿಕ್ಕಿತ್ತು . ಹಿಂದೊಮ್ಮೆ ಓದಿದ್ದೆ . ಒಂದು ಕತೆ ಮರೆಯಲಾಗದ್ದು ಇತ್ತು . ಆ ಬಗ್ಗೆ ಹಿಂದೊಮ್ಮೆ ಬರೆದಿದ್ದೀನಿ . ಇತರ ಕತೆಗಳೂ ಚೆನ್ನಾಗಿದ್ದವು . ಇನ್ನೊಮ್ಮೆ ಓದಬೇಕು . ಅವರ ಒಂದು ನಾಟಕ - ನಿರ್ಮಲಾ ಇಳಿಸಿಕೊಂಡು ಓದಿದೆ .
೪) ಜಯಂತ ನಾರ್ಳೀಕರ ಅವರ ಕತೆಗಳನ್ನು ಮಯೂರದಲ್ಲಿ ಯಾವಾಗಲಾದರೂ ಓದಿರಬಹುದು . ಅನೇಕ ವೈಜ್ಞಾನಿಕ ಕತೆಗಳನ್ನು ಬರೆದಿದ್ದಾರೆ. ಅವರ ವೈಜ್ಞಾನಿಕ ಕತೆಗಳ ಒಂದು ಸಂಕಲನ ಓದಿದೆ. ಎರಡು ಮೂರು ಕತೆಗಳು ಚೆನ್ನಾಗಿವೆ.
೫) ಸುಮತೀಂದ್ರ ನಾಡಿಗರ 'ತಮಾಶೆ ಪದ್ಯಗಳು' ಚುಟುಕಗಳನ್ನು ಹೊಂದಿದೆ . ಕೆಲವು ಚೆನ್ನಾಗಿವೆ . ಡಿಡಿಲಕ್ ಪದ್ಯಗಳು ಅಂತೇನೋ ಹೆಸರಿನ , ಮಕ್ಕಳ ಪದ್ಯ ಸಂಕಲನ ( ಅದೇನೋ ನಾನ್-ಸೆನ್ಸ್ ರೈಮ್ಸ್ ಅಂತೆ ) ನನ್ನ ಹತ್ತಿರ ಇದೆ . ಅದು ಅವರದೇ ಅಂತ ಕಾಣುತ್ತದೆ . ಆ ಡಿಡಿಲಕ್ ಪದ್ಯಗಳ ಮುನ್ಸೂಚನೆ ಈ ಹಳೆಯ ಪುಸ್ತಕದಲ್ಲಿದೆ .

ಈ ಇಳಿಸಿಕೊಂಡ ಪುಸ್ತಕಗಳಲ್ಲದೆ ,
೬) ಅಂತರ್ಜಾಲದಲ್ಲಿ ವಿಹರಿಸುವಾಗ ರಾಘವೇಂದ್ರ ಖಾಸನೀಸರ ಸಮಗ್ರ ಕತೆಗಳ ಸಂಕಲನ ದ ಬಗ್ಗೆ ನೋಡಿದೆ. ನಾನು ಈ ಪುಸ್ತಕ ಕೊಂಡು ಒಂದು ಸಲ ಓದಿದ್ದೆ . ಇನ್ನೊಮ್ಮೆ ಈ ಕತೆಗಳನ್ನು ತಿರುವಿ ಹಾಕಿದೆ. ಅವರು ಬರೆದಿರೋದು ಇಪ್ಪತ್ತೈದು ಕತೆಗಳಂತೆ . ಈ ಪುಸ್ತಕದಲ್ಲಿ ಒಂಬತ್ತೋ ಹತ್ತೋ ಇವೆ. ಆದರೂ ಹೆಸರು 'ಸಮಗ್ರ' . ಅದು ಏಕೋ ?

೭) ಜನವರಿ 2009 ರ ಮಯೂರ ಅಲ್ಲದೆ , ಇನ್ನೊಂದು ಹಳೆಯ ಮಯೂರ ಇನ್ನೊಂದು ಸಲ ಓದಿ ವಿಲೇವಾರಿಗೆ ಅಂತ ಇಟ್ಟೆ.

ಅರ್ಧ ಆದ ಓದು .
೧) ಪಾ.ವೆಂ. ಅವರ ಪದಾರ್ಥ ಚಿಂತಾಮಣಿ (ಭಾಗ -೨ ) ಓದು ಮುಂದುವರೆಸಲಾಗಿಲ್ಲ .
೨) ಮಾಸ್ತಿ ಅವರ 'ಭಾರತ ತೀರ್ಥ ' ಎಂಬ ಮಹಾಭಾರತದ ಬಗೆಗಿನ ಪುಸ್ತಕ ಇಳಿಸಿಕೊಂಡು ಓದಲಾರಂಭಿಸಿದ್ದೀನಿ.
ಓದಿ ಮುಗಿದ ಮೇಲೆ ಆ ಬಗ್ಗೆ ಬರೆಯುವೆ.
೩) ತೇಜಸ್ವಿ ಅವರ ಕಾಡಿನ ಕತೆಗಳು - ಅರ್ಧ ಓದಿದ್ದೀನಿ . ಇದು ಇಂಗ್ಲೀಶಿನ ಪುಸ್ತಕವೊಂದರ ಭಾವಾನುವಾದ.
೪) ಅವರದೇ 'ಅಬಚೂರಿನ ಪೋಸ್ಟ್ ಆಫೀಸು ಮತ್ತು ಇತರ ಕತೆಗಳು' ಓದಬೇಕೆಂದು ಇಳಿಸಿಕೊಂಡಿದ್ದೀನಿ.
೫)ಕೇಶವ ಮಳಗಿ ಅವರ ಕತೆಗಳ ಪುಸ್ತಕ 'ಮಾಗಿ ಮೂವತ್ತೈದು' ಅರ್ಧ ಓದಿಟ್ಟಿದ್ದೀನಿ .

ಮತ್ತೆ ಮುಂದಿನ ವಾರ ನನ್ನ ಓದಿನ ವರದಿ ಒಪ್ಪಿಸ್ತೀನಿ . ಬರಲೇ ?

Rating
No votes yet