ಮತ್ತೊಂದು ವಾರದ DLI ನ ಓದು

ಮತ್ತೊಂದು ವಾರದ DLI ನ ಓದು

ಈ ವಾರ ಐದು ಪುಸ್ತಕಗಳನ್ನಷ್ಟೇ ಓದಿದೆ .

೧) ಮೋಹನ್ ರಾಕೇಶರ ಇನ್ನೊಂದು ಹಿಂದಿ ನಾಟಕದ ಅನುವಾದ - ಅಲೆಗಳಲ್ಲಿ ರಾಜಹಂಸ - ಬುದ್ಧನ ಕುರಿತಾದ ನಾಟಕ .. ಸರಿಯಾಗಿ ನಾಟಕದ ಕಥೆ ಮತ್ತು ಉದ್ದೇಶ ನನಗೆ ಗೊತ್ತಾಗಲಿಲ್ಲ ;
೨) ಮಕ್ಕಳು ಅಡಿಗೆ ಮನೆ ಹೊಕ್ಕರೆ - ಒಂದು ಬೇಂದ್ರೆ ನಾಟಕ - ಇದೂ ಹಾಗೆಯೇ
೩) ಸಂದೇಹ ಸುಂದರಿ - ಎನ್ ನರಸಿಂಹಯ್ಯ - ಒಂದು ಕಾಲದ ಖ್ಯಾತ ಪತ್ತೆದಾರಿ ಕಾದಂಬರಿಕಾರರದು .
೪) ಮಿಸ್ಸಿಂಗ್ ಲಿಂಕ್ - ಮನುಷ್ಯನ ಇತಿಹಾಸದ ಕುರಿತು ತೇಜಸ್ವಿ ಪುಸ್ತಕ - ವೈಜ್ಞಾನಿಕ ವಿಷಯದ ಪುಸ್ತಕ . ನಾನು ಓದಲಿಲ್ಲ .
೫) ಸಾಂಬಶಿವ ಪ್ರಹಸನ - ಕಂಬಾರರ ನಾಟಕ - ಇದರಲ್ಲಿ ನಾನು ಕೇಳಿದ್ದ ಎರಡು ಹಾಡುಗಳಿವೆ . ಒಂದನ್ನ ಬ್ಲಾಗ್ ನಲ್ಲಿ ನಿನ್ನೆ ಹಾಕಿದ್ದೀನಿ .. ಇನ್ನೊಂದನ್ನ ಹಾಕಿದರೆ ಹಾಕೇನು . ಅದೂ ಚೆನ್ನಾಗಿದೆ.

ಈ ನಡುವೆ ಹರಿದಾಸ.ಇನ್ ಗೆ ಪುರಂದರದಾಸರ ಇನ್ನಷ್ಟು ಹಾಡು ಸೇರಿಸಿದ್ದೇನೆ . ನನ್ನ ಹತ್ತಿರ ಇದ್ದ ಸಂಪುಟಗಳ ಪೈಕಿ ಮೊದಲನೇ ಭಾಗದಲ್ಲಿನವು ಎಲ್ಲ ಈಗ ಹರಿದಾಸ.ಇನ್ ನಲ್ಲಿ ಇದ್ದಂತೆ ಆಯಿತು . ಇನ್ನೂ ನಾಲ್ಕು ಭಾಗಗಳಿವೆ . ಅವು ಧಾರವಾಡದಲ್ಲಿವೆ . ಇವತ್ತು ಧಾರವಾಡಕ್ಕೆ ಹೋಗುತ್ತಿದ್ದು ಒಂದು ವಾರ ಅಲ್ಲಿದ್ದು ಮರಳಿ ಬರುವಾಗ ತರುವೆ .
ಬಾಕಿ ಎಲ್ಲ ಹಾಡನ್ನೂ ಈ ವರ್ಷದ ಕೊನೆಯ ಒಳಗೆ ಹರಿದಾಸ.ಇನ್ ನಲ್ಲಿ ಹಾಕಿ ಮುಗಿಸಬೇಕೆಂದು ಮಾಡಿರುವೆ .

ಈ ತಿಂಗಳು ನಾನು ಓದಬೇಕಾದ ಪುಸ್ತಕಗಳನ್ನೆಲ್ಲ ಇಂದೇ ಡೌನ್ಲೋಡ್ ಮಾಡಿಟ್ಟಿರುವೆ ... ದಿನಕ್ಕೊಂದು ಪುಸ್ತಕ ಓದುವ ನನ್ನ ಗುರಿ ತಲುಪುತ್ತಿದ್ದಂತೆ ... ದಿನಕ್ಕೊಂದು ಪುಸ್ತಕ ಕುರಿತು ಬರೆಯ ಬೇಕೆಂದು ಮಾಡಿರುವೆ .

ನೋಡೋಣ ಏನೇನ್ ಮಾಡ್ತೀನೋ ?

Rating
No votes yet

Comments