ಮಧುರ ಹಿಂದಿ ಹಾಡು - ಈಗ ನನ್ನ ಕಾಲು ನೆಲದ ಮೇಲಿಲ್ಲ

ಮಧುರ ಹಿಂದಿ ಹಾಡು - ಈಗ ನನ್ನ ಕಾಲು ನೆಲದ ಮೇಲಿಲ್ಲ

ಘರ್ ಚಿತ್ರದ ಈ ಮಧುರ ಗೀತೆಯನ್ನು ಈ ಮುಂದಿನ ಕೊಂಡಿಯಲ್ಲಿ ನೋಡಿ / ಕೇಳಿ - https://youtu.be/MqCzyGLxQeQ

ಅನುವಾದ :-

ಈ ದಿನಗಳಲ್ಲಿ ನನ್ನ ಕಾಲು ನೆಲದ ಮೇಲೆ ಇರುವುದಿಲ್ಲ
ನಾನು ಹಾರುತ್ತಿರುವುದನ್ನು ನೀವು ನೋಡಿರುವಿರಾ ಹೇಳಿ

ನೀನು ಹಿಡಿದಾಗ ನಿನ್ನ ಕೈ ನೋಡಿದ್ದೇನೆ
ಜನ ಹೇಳುವರು ಎಲ್ಲವೂ ಕೈಯ ಗೆರೆಗಳನ್ನು ಅವಲಂಬಿಸಿದೆ
ನಾನು ಕಂಡುಕೊಂಡಿದ್ದೀನಿ ಎರಡು ಭಾಗ್ಯಗಳು ಒಂದುಗೂಡುವುದನ್ನು !

ನಿದ್ದೆಯ ಗುಂಗು, ಮತ್ತೆ ಒಂಥರಾ ಮತ್ತು ಇರುತ್ತದೆ
ಹಗಲಿರುಳು ನನ್ನ ಮನದಲ್ಲಿ ಒಂದೇ ಮುಖ ಕಾಣುತ್ತದೆ
ರೆಕ್ಕೆ ಇರುವ ಕಣ್ಣುಗಳು ಹಾರುತ್ತಿರುವುದನ್ನು
ನೀವು ನೋಡಿರುವಿರಾ ಹೇಳಿ

ಏನಾಗುತ್ತಿದೆ ನಾನರಿಯೆ , ಆದರೆ
ಪ್ರತಿ ವಿಷಯದಲ್ಲೂ ಏನೋ ಆಗುತ್ತಿದೆ
ಹಗಲಲ್ಲಿ ಏನೋ ಆಗುತ್ತದೆ
ಮತ್ತೆ ರಾತ್ರಿಯಲ್ಲಿ ಇನ್ನೇನೋ
ನಾನು ಹಾರುತ್ತಿರುವುದನ್ನು ನೋಡಿದಾಗ
ನೀವು ನನ್ನನ್ನು ಹಿಡಿದುಕೊಳ್ಳಿ

ಮೂಲ ಸಾಹಿತ್ಯ :-

ಆಜ್ ಕಲ್ ಪಾಂವ್ ಜಮೀನ್ ಪರ್ ನಹಿ ಪಡತೆ ಮೇರೆ
ಬೊಲೋ ದೇಖಾ ಹೈ ಕಭಿ ತುಮ್ನೆ ಮುಜೆ ಉಡತೇ ಹುಯೆ

ಜಬ್ ಬಿ ಥಾಮಾ ಹೈ ತೇರಾ ಹಾಥ್ ಕೋ ದೇಖಾ ಹೈ
ಲೋಗ್ ಕಹ್ತೆ ಹೈ ಕಿ ಬಸ್ ಹಾತ್ ಕಿ ರೇಖಾ ಹೈ
ಹಮ್ ನೇ ದೇಖಾ ಹೈ ದೋ ತಕದೀರೋಂ ಕೋ
ಜುಡತೆ ಹುಯೆ

ನೀಂದ್ ಸಿ ರಹತೀ ಹೈ
ಹಲ್ಕಾ ಸಾ ನಶಾ ರಹತಾ ಹೈ
ರಾತ್ ದಿನ್ ಆಂಖೋನ್ ಮೇ
ಇಕ್ ಚೆಹರಾ ಬಸಾ ರಹತಾ ಹೈ
ಪರ್ ಲಗಿ ಆಂಖೋನ್ ಕೋ
ದೇಖಾ ಹೈ ಕಭಿ ಉಡತೆ ಹುಯೆ,
ಬೋಲೋ !

ಜಾನೆ ಕ್ಯಾ ಹೋತಾ ಹೈ ಹರ ಬಾತ್ ಪೆ ಕುಚ್ ಹೋತಾ ಹೈ
ದಿನ್ ಮೇ ಕುಚ್ ಹೋತಾ ಹೈ ಔರ್ ರಾತ್ ಮೇನ್ ಕುಚ್ ಹೋತಾ ಹೈ
ಥಾಮ್ ಲೇನಾ ಜೋ ಕಭೀ ದೇಖೆ ಹಮೆ ಉಡತೆ ಹುಯೆ

Rating
No votes yet