ಮನದೊಡತಿ
ಮನದೊಡತಿ
ಮನದೊಡತಿಯ ನೆನಪೇ ಎನ್ನ ಮನದ ಅಲಂಕಾರ
ನನ್ನಾಕೆಯ ಧ್ವನಿಯ ಗುಂಗೇ ಮನಕೆ ಮಾಧುರ್ಯ
ನನ್ನ ಕರುಳ ಕುಡಿಯ ಹೊತ್ತಿರುವಾಕೆಗೆ ವಿರಹದ
ನೋವು ಸೋಕದಿರಲಿ, ನಾ ಮರಳುವೆ ಮನದನ್ನೆ
ನೀನಾಡುವ ಎರಡು ಜೀವಗಳ ಉಸಿರಿನ ಬಿಸಿ
ಅನುದಿನವು ನನ್ನ ಸೋಕುವುದೆಂದು ಮರೆ ಯದಿರು
ನೀ ಆಡುವ ಪ್ರತಿ ಉಸಿರಿನಲು ನಿನ್ನ ಹೃದಯ
ಬಡಿತ ಕೇಳುವುದೆಂದು ಮರೆಯದಿರು ಮನದನ್ನೆ
ನಿನ್ನೀ ಮನದ ತಳಮಳ ನನ್ನ ಹೃದಯದ ಪ್ರತಿ
ಬಡಿತಕ್ಕು ಬಂದು ತಲುಪುದೆಂದು ನೀ ತಿಳಿದಿರು
ವಿರಹದ ಬೇನೆಯಲಿರುವ ನಿನ್ನ ಪ್ರೀತಿಗೆ ಕರಗಿ
ಕಾಲನೇ ನಿನ್ನ ನೋವನು ಬೇಗ ನಲಿವಾಗಿಸುವನು
ನಿನ್ನ ಮನದ ಕೂಗಿಗೆ ಸಪ್ತಸಾಗರದ ದೂರವನ್ನು
ಕ್ಷಣಿಕದಲಿ ದಾಟಿ ಬಂದು ಸೇರುವೆ ಮನದೊಡತಿ
ನೀನೆಂದು ಮರುಗಬೇಡ, ವಿರಹದಲಿ ಬೇಯಬೇಡ
ನಿನಗಾಗಿ ಮರಳಿ ಬರುವೆ, ಸಂತಸವ ಹೊತ್ತಿ ತರುವೆ
- ತೇಜಸ್ವಿ ಎ ಸಿ
ಲಂಡನ್, ಯು.ಕೆ
Rating
Comments
ಉ: ಮನದೊಡತಿ
In reply to ಉ: ಮನದೊಡತಿ by makara
ಉ: ಮನದೊಡತಿ
ಉ: ಮನದೊಡತಿ
In reply to ಉ: ಮನದೊಡತಿ by ksraghavendranavada
ಉ: ಮನದೊಡತಿ
ಉ: ಮನದೊಡತಿ@ ತೇಜಸ್ವಿ ಅವ್ರೇ
In reply to ಉ: ಮನದೊಡತಿ@ ತೇಜಸ್ವಿ ಅವ್ರೇ by venkatb83
ಉ: ಮನದೊಡತಿ@ ತೇಜಸ್ವಿ ಅವ್ರೇ