ಮನದ ಕೂಗು

ಮನದ ಕೂಗು

ಅರಿವು ತಿಳಿವುಗಳೆಂದು
ಅಲುಗಾಡದಿರು ಓ ಮನವೇ
ಅರಿತಾಗಲೇ ಬರುವುದು ನಿನಗೆ
ತಿಳಿವಳಿಕೆಯ ಅರಿವು

ಅವ ಜ್ಞಾನಿ ನಾ ಜ್ಞಾನಿ
ಎಂದು ಆಗದಿರು ನೀ
ಅಜ್ಞಾನಿ ಅರಿತುಕೋ ಒಮ್ಮೆ ಓ ಮನವೇ,
ಉಳೂವವನಿಗೆ ಗೊತ್ತು ಉಳುವ ಜ್ಞಾನ
ಆಳುವವನಿಗೆ ಆಡಲಿತದ ಜ್ಞಾನ
ಅವರವರ ಕರ್ಮದಲ್ಲಿ ಅವರು ಜ್ಞಾನಿಯೇ ಎಂದು

ಸರ್ವರ ಮುಂದೆ ಎಂದಿಗೂ
ಹೇಳದಿರು ನಾ ಸರ್ವಜ್ಞನೆಂದು
ಅರಿತುಕೋ ಓ ಮನವೇ
ಸರ್ವವ ಅರಿತವನಲ್ಲ ಸರ್ವಜ್ಞ
ಸರ್ವರಳೊನ್ದಾಗಿ ಸರ್ವರ ಅರಿತವನೇ
ನಿಜವಾದ ಸರ್ವಜ್ಞ

ನಸು ನಕ್ಕು ,ಪೂರ್ಣವಿರಾಮವಿಟ್ಟು
ನಿರ್ಜಲವಾಗದಿರು ಓ ಮನವೇ
ಅರಿತುಕೋ ಒಮ್ಮೆ ನೀ
ಕುಹುಕಕ್ಕೂ ಎಡೆಮಾಡಿಕೊಡುವುದು
ಈ ನಗುವೆಂಬುದು

ದಾರಿಯೊಳ್ ಬರುವ
ಕಲ್ಲು ಮುಳ್ಳುಗಳಿಗೆ ಅಂಜದಿರು
ಓ ಮನವೇ ,ಅರಿತುಕೋ ನೀ ಒಮ್ಮೆ
ಸಾವಿರ ಉಳಿ ಏಟು ತಿಂದ ಕಲ್ಲೇ
ಶಿಲ್ಪವಾಗುವುದೆಂದು .

Rating
No votes yet

Comments