ಮನದ ಹನಿಗಳು
ಕಣ್ಣ ರೆಪ್ಪೆಯ ಅಂಚಿನ ತುದಿಯಲ್ಲಿ
ಕಾದು ನಿಂತಿವೆ ಕಣ್ಣ ಹನಿಗಳು
ತುಟಿಯಂಚಲಿ ಆಡದೆ ಉಳಿದಿವೆ
ನೂರಾರು ಒಳ ಮನಸಿನ ಮಾತುಗಳು
ಕೇಳುವ ಪ್ರಮೇಯ ನಿನಗಿಲ್ಲ
ಹೇಳುವ ಸಮಯ ಈಗಲ್ಲ......................
ಚಿಂತಿಸು ಒಮ್ಮೆ ಒಂದು ಸಾರೀ...ಸಾರೀ.....ಓ ನಾರಿ
ಅರಿವಾಗದೆ ಹುಟ್ಟಿದ ಚಿಲುಮೆ ಈ ಪ್ರೇಮ
ಅರಿವಾಗಿ ಬಿಡುವಾಗ..ಏಕೆ ಈ ನೋವೆಂಬ ಕ್ಷಾಮ
ಕ್ಷಣಕೊಮ್ಮೆ ಕೆಣಕುವ ನಿನ್ನ ನೆನಪು
ಮಿತಿಮಿರಿದರೆ ನಾನು ಕೂಡ ಬರಿ ನೆನಪು!!!!!!!
ಅದು ಮಿತಿಮಿರುವ ಮುನ್ನ,ಬಂದು ಕೂಡು ಎನ್ನ,
ನಡುವೆ ಮೂಡಿತು,ಅಪನಂಬಿಕೆಯೆಂಬ ಅಪಸ್ವರ
ಬಿರುಕಾಯಿತು ನಮ್ಮ ಇಬ್ಬರ ಸ್ನೇಹಸ್ವರ
ಚಿಂತಿಸು ಒಮ್ಮೆ ಒಂದು ಸಾರೀ...ಸಾರೀ.....ಓ ನಾರಿ
ದೂರದ ಗೆಳೆತನದ ಪ್ರೀತಿ
ಬೇಕು ನಂಗೆ ಗೊತ್ತಿಲ್ಲದ ರೀತಿ
ಹತ್ತಿರದ ಪ್ರೀತಿಯ ಗೆಳೆತನ
ಬೇಡ ನಂಗೆ ಗೊತ್ತಿರುವ ರೀತಿ
ಒಂದು ನಾಣ್ಯದ ಎರಡು ಮೊಗ
ಗೆಳೆತನ-ಪ್ರೀತಿ.....ಇದರಲ್ಲಿ
ಕಳಕೊಂಡಿದ್ದು,ಗೆಳತನ,
ಗಳಿಸಬೇಕು ನಿನ್ನಯ ಪ್ರೀತಿ...
ಎರಡು ಇಲ್ಲದೇ ಹರಿದ ನೋಟಿನಂತಾಗಿದೆ
ನನ್ನ ಬದುಕಿನ ರೀತಿ.............
ಚಿಂತಿಸು ಒಮ್ಮೆ ಒಂದು ಸಾರೀ...ಸಾರೀ.....ಓ ನಾರಿ
ಒಮ್ಮೆ ವೀಕ್ಷಿಸು ನನ್ನ ವಿಶಾಲ ಹೃದಯವ
ಅದರಲ್ಲಿ ನೀ ಕಾಣುವೆ ನನ್ನ ಶುದ್ದ ಪ್ರೇಮವ
ನಿನ್ನ ಅಂಬರದ ಹೃದಯದ ಅರಮನೆಯಲ್ಲಿ
ಆಡಂಬರದ ಪ್ರೀತಿ ಬೇಕಾಗಿಲ್ಲ...
ನಿಸ್ಟುರದ ಗೆಳೆತನ ಇಷ್ಟವಿಲ್ಲ..
ಚಿಂತಿಸು ಒಮ್ಮೆ ಒಂದು ಸಾರೀ...ಸಾರೀ.....ಓ ನಾರಿ
ನನ್ನ ಮನದ ಅರಸಿಗೆ ನಾ ಅರ್ಹನಲ್ಲ....
ಈ ಅರ್ಹನಲ್ಲದವನ ಅಹವಾಲು ಕೇಳುವ
ಕಡಿವಾಣದ ಮನಸು ನಿಂದಲ್ಲ್ಲ
ಆದರೆ ನನಗೇಕೆ ಈ ಬೇಗೆ
ಬೆಳಗ್ಗೆನೆ ಬಂತು ನಿನ್ನ ಬಗ್ಗೆ........
ಚಿಂತಿಸು ಒಮ್ಮೆ ಒಂದು ಸಾರೀ...ಸಾರೀ.....ಓ ನಾರಿ
Comments
ಉ: ಮನದ ಹನಿಗಳು
In reply to ಉ: ಮನದ ಹನಿಗಳು by venkatesh
ಉ: ಮನದ ಹನಿಗಳು