ಮನಸಿನ ನಿಗ್ರಹ (ಶ್ರೀ ನರಸಿಂಹ 50)
ಬೆಳಕಿನ ಕಿರಣಗಳು ಚದುರಿ ಎಲ್ಲಡೆ ಪಸರಿಸಿರುವಂತೆ
ವಿಷಯಾಸಕ್ತಿಯಲಿ ಮನವು ಹೊರಗೆ ತಿರುಗಿಹುದಂತೆ
ಮನಸು ಚಲಿಸುವ ವೇಗವದು ಬೆಳಕಿಗೂ ಮೀರಿದುದು
ಕ್ಷಣಮಾತ್ರದಿ ತಾ ಬಯಸಿದೆಡೆಗೆ ಚಲಿಸುವುದು ಅದು
ಚದುರಿರುವ ಬೆಳಕ ಕಿರಣಗಳ ಒಂದೆಡೆ ಸೇರಿಸಿದಂತೆ
ಶಕ್ತಿಯ ರೂಪದಲ್ಲಿ ಬಳಸಬಹುದದನು ನಿನ್ನಿಚ್ಚೆಯಂತೆ
ಹೊರಗಲೆದಾಡುತಿಹ ಮನವ ನಿಗ್ರಹಿಸಿ ಏಕಾಗ್ರಗೊಳಿಸು
ಪಡೆಯಬೇಕಿರೆ ಆತ್ಮಾನುಭವವ ನೀ ಇದನು ಸಾಧಿಸು
ಮಾಡುವ ಎಲ್ಲ ಸಾಧನೆಗಳು ಮನವ ನಿಗ್ರಹಿಸಲೋಸುಗವೆ
ಶ್ರೀ ನರಸಿಂಹನ ಕೃಪೆ ದೊರೆಯೆ ನೀ ಇದನು ಸಾಧಿಸುವೆ
Rating
Comments
ಚೆನ್ನಾಗಿದೆ ಸತೀಶವ್ರೆ
ಚೆನ್ನಾಗಿದೆ ಸತೀಶವ್ರೆ
ಧನ್ಯವಾದಗಳು ಚೇತನ್ ರವರೇ
ಧನ್ಯವಾದಗಳು ಚೇತನ್ ರವರೇ
....ಸತೀಶ್