ಮನಸ್ಸುಗಳ ಕಿತ್ತಾಟದಲ್ಲಿ ನೆನ್ನೆ ನಾ ಮಾಡಿದ ತಪ್ಪು

ಮನಸ್ಸುಗಳ ಕಿತ್ತಾಟದಲ್ಲಿ ನೆನ್ನೆ ನಾ ಮಾಡಿದ ತಪ್ಪು

ನೆನ್ನೆ ನಾ ಮಾಡಿದ ತಪ್ಪು

ನೆನ್ನೆ ಗುರುವಾರ ಸಂಜೆ ಆಫೀಸಿನಿಂದ ಹೊರಟೆ..ಹೋ ನಾಳೆ ಶುಕ್ರವಾರಕ್ಕೆ ಹೂವು, ತರಕಾರಿ ತಗುಬೇಕು ಎಂದು ದಿನಾ ತೆಗೆದುಕೊಳ್ಳುವ ಗಾಡಿ ಹತ್ತಿರ ನಡೆದೆ ಯಾಕೊ ಗಾಡಿ ಇನ್ನು ಬಂದಿರಲಿಲ್ಲ..ಛೆ ಮತ್ತೆ ಬರ್ಬೇಕಾಗುತ್ತೆ ಯಾಕೊ ಇವ್ರು ಬಂದೆ ಇಲ್ವಲ್ಲ ಅಂತ ಮನೆ ಯತ್ತ ಹೆಜ್ಜೆ ಹಾಕಿದೆ........ಮನೆಯಲ್ಲಿ ಪತಿದೇವರು ಆಗ್ಲೆ ದೂರದರ್ಶನ ವೀಕ್ಷಿಸುತ್ತ ಶ್ರೀ ರಂಗನಾಥನಂತೆ ಮಲಗಿದ್ದರು ( ದಿನಾ ಅದೆ ಕಥೆ ಪುಣ್ಯವಂತರು) ಬೇಗ ಬೇಗ ಎಲ್ಲ ಕೆಲಸವನ್ನು ಮುಗಿಸಿ ಹೂವು ತರುವುದು ನೆನೆದು ಮತ್ತೆ ಹೊರಟೆ ೫ ನಿಮಿಷದ ನಡುಗೆ ಗಾಡಿ ಬಂದಿದೀಯ ಅಂತ ಬಗ್ಗಿ ನೋಡಿದೆ ಬಂದಿತ್ತು..ಅಬ್ಬ ಸಧ್ಯ ಅಂದು ಅತ್ತ ಕಡೆ ಹೆಜ್ಜೆ ಹಾಕಿದೆ ಹಾಗೆ ಪಕ್ಕದಲ್ಲೆ ಇದ್ದ ಮಾರುತಿ ದೇವಸ್ಥಾನಕ್ಕೆ ನಮಸ್ಕಾರ ಹಾಕೋಣವೆಂದು ಒಳಹೊಕ್ಕು ನಮಸ್ಕರಿಸಿ ಹೊರ ಬಂದೆ ಹಾಗೆ ಕಣ್ಣು ಅಲ್ಲೆ ಮಾರುತ್ತಿದ್ದ ಒಬ್ಬ ತಾತನ ದೊಡುಮಲ್ಲಿಗೆ ಹೂವಿನ ಕಡೆ ಹೋಯಿತು ಒಂದು ಮನಸ್ಸು ಹೇ ಹೂವು ಚೆನಾಗಿದೆ ಇಲ್ಲೆ ತಗಂಬೋದು ಅಂತು ಇನ್ನೊಂದು ಮನಸ್ಸು ಬೇಡ ಬೇಡ ಯಾವಾಗ್ಲು ತಗೊಳೊ ಹತ್ರಾನೆ ತಗೊಳನ ಅಲ್ಲೆ ಚೆನಾಗಿರುತ್ತೆ ಒತ್ತಾಗಿ ಕಟ್ಟಿರ್ತಾಳೆ...ಈ ಹೊಯ್ದಾಟದಲ್ಲಿ ಮೊದಲ ಮನಸಿಗೆ ಹೂಗುಟ್ಟಿ ತಾತನ ಹತ್ತಿರ ಹೋಗೆ ಎಷ್ಟು ತಾತ ಎಂದೆ ೨೦ ರೂಪಾಯಿಗೆ ೩ ಮಳ ಅಂತು ಇನ್ನೊಂದು ಮನಸ್ಸು ಬೇಡ ಬೇಡ ಅಲ್ಲೆ ಚೆನಾಗಿರುತ್ತೆ ದುಡ್ಡು ಕಡಿಮೆ ಇರುತ್ತೆ ಎಳೆಯುತಿತ್ತು.. ಸರಿ ಅದರ ಮಾತಿಗೆ ಹೂಗುಟ್ಟಿ ಅತ್ತ ಎರಡು ಹೆಜ್ಜೆ ಹಾಕಿದೆ ಆ ತಾತ ಬಿಡಲೆ ಇಲ್ಲ ಬಾರಮ್ಮ ಬಾರಮ್ಮ ಎಷ್ತು ಬೇಕು ಹೇಳು ಕಡಿಮೆ ಹಾಕ್ಕೊಡ್ತೀನಿ ೫ ರೂಪಾಯಿ ಮಳ ತಗಳಮ್ಮ ಒತ್ತಾಯ ಮಾಡಿತು...ಸರಿ ಅದಕ್ಕು ತಲೆ ದೂಗಿ ೬ ಮಳ ಕೊಡು ಎಂದು ದುಡ್ಡು ಕೊಟ್ಟೆ..ಹೂವನ್ನು ಕೈ ಯಿಂದಲು ಮುಟ್ಟದೆ ತಾತ ತರಕಾರಿ ತಗೊಬೇಕು ಬರ್ತಾ ಇಸ್ಕೊತೀನಿ ಎಂದು ಅತ್ತ ನಡೆದೆ.........ತರಕಾರಿ ತಗೊಂಡೆ ಸ್ವಲ್ಪ ಪುಡಿ ಹೂಗಳ ಅಗತ್ಯವು ಇತ್ತು ಅದಕ್ಕೆ ಅದುನ್ನು ತೆಗೆದು ಕೊಂಡೆ ಕಣ್ಣು ಮತ್ತೆ ಕಟ್ಟಿದ ಹೂವಿನಡೆಗೆ ಹೋಯಿತು ..ಒಯ್ಯ್ಯಾ ಹೂ ಎಷ್ಟು ಚೆನ್ನಾಗಿದೆ ಒತ್ತಾಗಿ ( ಯಾವಾಗಲು ನಾನು ತೆಗೆದುಕೊಳ್ಳುವುದು ಅಲ್ಲೆ) ದೊಂಡುಮಲ್ಲಿಗೆ ಮಧ್ಯ ಮಧ್ಯ ಹಾಕಿ ಕಟ್ಟಿದ ಕನಕಾಂಬರ, ಪತ್ರೆ...ಮನಸ್ಸು ತಡಿಲೆ ಇಲ್ಲ ಎರಡನೆ ಮನಸ್ಸು ಮೊದಲ ಮನಸನ್ನು ಅಣಕಿಸುವಂತೆ ನನ್ ಮಾತು ಕೇಳ್ದ್ಯ ಇಲ್ಲೆ ಚೆನಾಗಿರುತ್ತೆ ಅಂತ ಸುಮ್ನೆ ಅಲ್ಲಿ ತಗೊಂಡೆ.........ಮೊದಲ ಮನಸ್ಸು ತನ್ನ ತಪ್ಪನ್ನು ಒಪ್ಪಿಕೊಂಡಂತೆ ಛೆ !! ಹೌದಲ್ವ ಇಲ್ಲೆ ತಗೊಬೇಕಾಗಿತ್ತು ಅವಸರ ಮಾಡ್ಕೊಂಬಿಟ್ಟೆ.....ಜೊತೆಗೆ ಒಂದು ಸಲಹೆನು ಕೊಡ್ತು......ಇಲ್ಲೆ ಹೂ ತಗೊಂಬಿಡು ತಾತನತ್ರ ಒಂದೆರಡು ರೂಪಾಯಿ ಬಿಟ್ಟು ದುಡ್ಡು ವಾಪಸ್ ತಗಂಡ್ರಾಯ್ತು....ಸರಿ ಇಬ್ಬರ ಮಾತಿಗು ಹೂ ಗುಟ್ಟಿ ಹಾಗೆ ಮಾಡಿ ತಾತನತ್ತಿರ ಅಳುಕುತ್ತಲೆ ಹೆಜ್ಜೆ ಹಾಕಿದೆ ಆಗಲೆ ಮನಸ್ಸುಗಳೆರಡು ಹೊಯ್ದಾಡಲಾರಂಬಿಸಿದವು....ಅಳುಕುತ್ತಲೆ ತಾತ ಹೂನ ನಾನು ಅಲ್ಲೆ ತಗಂಬಿಟ್ಟೆ ತುಂಬಾ ಚೆನಾಗಿತ್ತಲ್ಲಿ ...........ತಾತ ಒಂದೆ ಸಾರಿ ದುರುಗುಟ್ಟಿ ನನ್ನನ್ನೆ ನೋಡಿತು ನಾನು ಆ ಹೂವನ್ನು ಚೆನಾಗಿತ್ತಲ್ಲಿ ಅಂತ ಪ್ರಶಂಶೆ ಮಾಡಿದ್ದುಕ್ಕೊ ಏನೋ ತಾತನಿಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು ಅಂತ ಕಾಣುತ್ತೆ...........ಯಾವ್ದಮ್ಮ ಹೂ ಚೆನಾಗಿರೋದು ತನ್ನ ಹೂಗಳನ್ನು ಕೈಯಲ್ಲಿ ಇಡಿಯುತ್ತ ಇದ್ರುಕ್ಕಿಂತ ಹೂ ಬೇಕ ನಾವು ಕಟ್ಟಿರೋದುಕ್ಕಿಂತ ಚೆನಾಗ್ ಕಟ್ಟೀದಾರ ..ಹಿಂಗ ವ್ಯಾಪಾರ ಮಾಡದು...ಯಾರರ ಹಿಂಗೆ ವ್ಯಾಪಾರ ಮಾಡದು ನೋಡಿದೀರ..........ತನ್ನ ಸಹಸ್ರ ನಾಮಾರ್ಚನೆ ಶುರುಮಾಡಿಕೊಂಡಿತು ನನಿಗು ಸುತ್ತ ಮುತ್ತಲಿನ ಜನವೆಲ್ಲ ನನ್ನನ್ನೆ ದುರುಗುಟ್ಟಿ ನೋಡುತ್ತಿರುವ ಅನುಭವ......ಮನಸ್ಸುಗಳೆರಡು ತಾವೇನು ತಪ್ಪೆ ಮಾಡಿಲ್ಲಅನ್ನುವಂತೆ ಬೇಕಾಗಿತ್ತ ಇಂಥ ಅವಮಾನ ಎಂದು ನನ್ನನ್ನೆ ಅಣುಕಿಸುತಿದ್ದವು..........ತಾತ ಕೊನೆಗೆ ತನ್ನ ಸಿಟ್ಟನ್ನೆಲ್ಲ ಹೊರ ಹಾಕಿ ಸಮಾಧಾನ ಆದ ಮೇಲೆ ಗೊಣ ಗೊಣ ಎನ್ನುತ್ತಲೆ ದುಡ್ಡನ್ನು ಕೈಗಿತ್ತಿತು....... ಬದುಕಿದೆಯ ಬಡ ಜೀವವೆ ಎಂದು ದೇವಸ್ಥಾನದ ಒಳಗೋಗಿ ದೇವರೆ ನನ್ನ ತಪ್ಪನ್ನು ಕ್ಷಮಿಸಪ್ಪ ಅಂತ ಮತ್ತೊಮ್ಮೆ ನಮಸ್ಕರಿಸಿ ಮನೆಯತ್ತ ಹೆಜ್ಜೆಹಾಕಿದೆ...................

Rating
No votes yet

Comments