ಮನಸ್ಸೆಲ್ಲೋ ಕನಸ್ಸೆಲ್ಲೋ
"ರೀ ತೊಂಬತ್ತೈದು ಸೈಜಿನ ಬ್ರೀೞ್ ಇದೆಯಾ?" ನಿಧಾನವಾಗಿ ಅವನಿಗೆ ಮಾತ್ರ ಕೇಳುವಂತೆ ಹೇಳಿದೆ. ಎಲ್ಲಾ ಸೈಜಿನದ್ದೂ ಇದೆ ಸಾರ್, ಇರಿ ಕೊಡ್ತೀನಿ" ಇದಿರಿಗಿದ್ದ ಹೆಂಗಸರಿಗೆ ಕೇಳಿಸದ ಹಾಗೆ ಮೆಲು ದನಿಯಲ್ಲಿ ಕೇಳಿದ್ದೆನಾದರೂ ಈತನದ್ದು ಕಂಚಿನ ಕಂಠ.ಕೌಂಟರಿನಿಂದ ನನ್ನ ಕಡೆ ಬಂದು ಮೂರ್ನಾಲ್ಕು ಪ್ಲಾಸ್ಟಿಕ್ ಕವರಿನಲ್ಲಿದ್ದುದನ್ನು ತಂದು ತೋರಿಸಿದ. ನನಗೆ ಸಂಷಯ ಬಂದು "ಇದು ಗಂಡಸರದ್ದೇ ತಾನೇ?" ಕೇಳಿದೆ."ಹೋ" ತನ್ನ ಕೈ ತೆಗೆದು ಹಣೆಯ ಮೇಲಿರಿಸಿ ಬಡಿದುಕೊಂಡ ಆತ ತಾನು ತೆಗೆದುದೆಲ್ಲವನ್ನೂ ಆರಾಮವೆಂಬಂತೆ ಅಲ್ಲಿಯೇ ಇರಿಸಿ, ಅಲ್ಲಿಂದ ಮತ್ತೊಂದು ಕಡೆ ನಡೆದ, ಅಲ್ಲಿಂದಲೇ ಗಟ್ಟಿಯಾಗಿ " ಸಾರ್, ತೋಳಿಲ್ಲದ್ದು ಬೇಕೋ ಅಥವಾ ತೋಳಿದ್ದದ್ದು ಬೇಕೋ?" ನನಗೆ ಈಗ ನಿಜವಾಗಿಯೂ ಕೋಪ ಬಂತು" ನಾನು ಕೇಳಿದ್ದು ತೊಂಬತ್ತೈದು ಸೈಜಿನ ಅಂಡರ್ವೇರ್ ಅಂದರೆ ಒಳ ಚಡ್ಡಿ" ನಾನೂ ಗಟ್ಟಿಯಾಗೇ ಹೇಲಿದೆ, ನನ್ನ ಪಕ್ಕದಲ್ಲಿ ಯಾರಿದ್ದರೆ ಎಂಬುದೂ ಮರೆತು.ಕಿಸಕ್ಕನೆ ನಕ್ಕ ಸದ್ದು ಕೇಳಿತು." ಸಾರಿ ಸಾರ್, ನನಗೆ ಇವತ್ತು ನಿಜವಾಗಿಯೂ ಏನಾಯಿತೆಂತಲೇ ತಿಳಿಯದು, ತಗೊಳ್ಳಿ ನೀವು ಕೇಳಿದ ಸೈಜೇ, ಇದರಲ್ಲಿ ಕಿಸೆ ಇರುವುದು ಬೇಕಾ ನಾರ್ಮಲ್ ಆಗಿರೋದು ಬೇಕಾ ಸಾರ್?"
"ನಾರ್ಮಲ್ ಆಗಿರೋದೇ ಕೊಡಿ ಸಾಕು ಬಿಡಿ, ಅಲ್ಲಿಡುವಷ್ಟು ದುಡ್ಡೇನೂ ನನ್ನಲ್ಲಿಲ್ಲ " ಎಂದೆ.
Comments
ಉ: ಮನಸ್ಸೆಲ್ಲೋ ಕನಸ್ಸೆಲ್ಲೋ