ಮನುಷ್ಯರೇ ಹೀಗೆ ಭ್ರಮಾಲೋಕದಲ್ಲಿ...
ಮನುಷ್ಯರಲ್ಲಿ ಅಬಾಲ ವೃದ್ಧರಾಗಿ ಭ್ರಮಾಲೋಕದಲ್ಲಿ ಬದುಕುವವರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ;ಹೆಚ್ಚುತ್ತಲೇ ಇದ್ದಾರೆ!! ಅದಕ್ಕೇ ಹ್ಯಾರಿ ಪಾಟರ್ ನಂಥ ಭ್ರಮಾಲೋಕವನ್ನೇ ಸೃಷ್ಟಿಸುವ ಮಹಾನ್ ಲೇಖಕರು ಅದನ್ನೇ ಮಸಾಲೆ ಮಾಡುವ ಸಿನಿಮಾದವರು, ಕೋಟಿಗಟ್ಟಲೆ ದುಡ್ಡು ಮಾಡುತ್ತಿರುವುದು. ಇಂಥವರ ನಡುವೆ ಮಹಾನ್ ದಾರ್ಶನಿಕರಾದ ಬಸವಣ್ಣನವರಂಥವರನ್ನೂ ಹಾ.....ಕ್ಕೆ ಹುಟ್ಟಿದವರೆಂದು ಬರೆದು ದುಡ್ಡು ಮಾಡಿಕೊಂಡು ಇದೀಗ ಪುಸ್ತಕ ಹಿಂದೆ ಪಡೆದಿದ್ದೇನೆ ಎನ್ನುವವ ಬಂಜಗೆರೆಯಂಥ ಮಹಾನ್ ಲೇಖಕರೂ ಇದ್ದಾರೆ. ಇಳಿವಯಸ್ಸಿನಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ ಕೆಣಕುವಂಥ ಪುಸ್ತಕ ಬರೆದ ಎಸ್.ಎಲ್ ಭೈರಪ್ಪನವರು ಅದೇ ಬಗೆಯಲ್ಲಿ ದುಡ್ಡು ಮಾಡಿ "ಸಾರ್ಥಕ್ಯ" ಪಡೆದವರೇ ಆಗಿದ್ದಾರೆ.
ಇಂಥವರ ನಡುವೆ ವಾಸ್ತವ ಚಿತ್ರಣ ನೀಡುವ, ಬದುಕಿಗೆ ಉಪಯುಕ್ತವೆನಿಸುವ, ಉದ್ಯೋಗಕ್ಕೆ ದಾರಿಯಾಗುವ ಪ್ರಾಮಾಣಿಕತೆಯಿಂದ ಬದುಕು ಸಾಗಿಸಲು ನೆರವಾಗುಂಥ ಪುಸ್ತಕಗಳು ಮೊಲೆ ಗುಂಪಾಗುತ್ತವೆ. ಹಾಗೆ ಉತ್ತಮವಾದುದನ್ನು ಬರೆದ ಎಷ್ಟೋ ಲೇಖಕರನ್ನು ಯಾರು ಗುರುತಿಸುತ್ತಾರೆ. ಬಂಜೆಗೆರೆಯವಂಥರನ್ನು ತತ್ ಕ್ಷಣ ಗುರುತಿಸಿ “ಪ್ರಚಾರ” ಕೊಡುತ್ತಾರೆ. ಯಾಕೆಂದರೆ, ಪತ್ರಿಕೆಗಳೂ ಚೆನ್ನಾಗಿ ದುಡ್ಡು ಮಾಡಲು ಇಂಥ ಮಸಾಲೆ ವಿಷಯವೇ ಬೇಕಲ್ಲ! ಪಾಪ ಆ ಪ್ರಾಮಾಣಿಕ ಲೇಖಕ ಒಳ್ಳೆಯದನ್ನು ಬರೆದೂ ತನಗೆ ಯಾರೂ ಪ್ರಚಾರ ಕೊಡದೇನೆ, ಆ ಪ್ರಯತ್ನ ಮಾಡಿ ಸೋತು ಸ್ವತಃ ಹಣ ಮಾಡಲು ಗೊತ್ತಿಲ್ಲದೇನೆ ತಿಳಿಗೇಡಿಯಂತೆ ಕಾಣಿಸುವುದೂ ಉಂಟಲ್ಲ ಹೌದು, ಜ್ಞಾನಿಗಳೆಲ್ಲ ಹುಚ್ಚರಂತೆಯೆ ಕಾಣುತ್ತಾರೆಂತೆ! ತಿಳಿಗೇಡಿಗಳ ನಡುವೆ ಒಬ್ಬ ತಿಳುವಳಿಕೆ ಇರುವಾತ ಹುಚ್ಚನೇ . ಆದರೆ, ಇಂಥ ಹುಚ್ಚರಾದ ಸಾಹಿತಿಗಳು, ವಿಜ್ಞಾನಿಗಳೇ ಈ ಪ್ರಪಂಚಕ್ಕೆ ಒಳಿತನ್ನೇ ಕೊಟ್ಟು ಹೋಗುವವರೂ ಎಲ್ಲ ಕಾಲಕ್ಕೂ ಇರುತ್ತಾರೆ.
ಎಲ್ಲ ಕಾಲಕ್ಕೂ ಪರಮ ಪಾಪಿಗಳಿಗೆ ಸುಭಿಕ್ಷವಾದ ಪ್ರಪಂಚದಲ್ಲಿ; ಸತ್ಯ ಬೋಧನೆ ಮಾಡುವವರು ದುಡ್ಡು ಮಾಡುವುದೇ ವಿರಳವಲ್ಲವೇ. ಕಡೆಗಾಲದಲ್ಲಿ ಜೀವನೋಪಾಯಕ್ಕೂ ಅವರ ಬಳಿ ದುಡ್ಡು ಇರುವುದಿಲ್ಲವಲ್ಲ.
ಈ ಪ್ರಪಂಚ ಸುಳ್ಳನ್ನು ನಂಬುವಷ್ಟು ಸತ್ಯವನ್ನು ನಂಬುವುದಿಲ್ಲ. ಆದ್ದರಿಂದಲೆ, ಸತ್ಯವನ್ನು ಮುಚ್ಚಿಟ್ಟು, ಭ್ರಮೆಯನ್ನು ಮೆರೆಸಿ ಹಾಗೆಯೆ ಋಷಿಮೊಲ ಸ್ತ್ರೀಮೊಲಗಳನ್ನು ಕೆದಕಿ,ಭೂತಗಳನ್ನು ವೈಭವೀಕರಿಸಿ, ಬರೆವ ಮಹನೀಯರು ಹೆಚ್ಚುತ್ತಲೆ ಇದ್ದಾರೆ! ಎಂಥ ವಿಚಿತ್ರ ಪ್ರಪಂಚ!! ಈ ಪ್ರಪಂಚದಲ್ಲಿ ಮನುಷ್ಯ ಮನುಷ್ಯನಾಗಿ ಬದುಕುವುದನ್ನು ಇನ್ನೂ ಕಲಿಯಲೇ ಇಲ್ಲವಲ್ಲ...!
Comments
ಉ: ಮನುಷ್ಯರೇ ಹೀಗೆ ಭ್ರಮಾಲೋಕದಲ್ಲಿ...
In reply to ಉ: ಮನುಷ್ಯರೇ ಹೀಗೆ ಭ್ರಮಾಲೋಕದಲ್ಲಿ... by ಶ್ರೀನಿಧಿ
ಉ: ಮನುಷ್ಯರೇ ಹೀಗೆ ಭ್ರಮಾಲೋಕದಲ್ಲಿ...