ಮನೆಗೆ ಬಂದ ಇಂಟರ್ ನೆಟ್ಟು , ನಿಜವಾದ ಭವಿಷ್ಯ ?

ಮನೆಗೆ ಬಂದ ಇಂಟರ್ ನೆಟ್ಟು , ನಿಜವಾದ ಭವಿಷ್ಯ ?

ಅಂತೂ ಇಂತು ಬ್ರಾಡ್ ಬ್ಯಾಂಡ್ ಸಂಪರ್ಕ ಮನೆಗೆ ಬಂತು !

ಹೋದ ವರ್ಷಾನೇ ಕಂಪ್ಯೂಟರ್ ಟೇಬಲ್ ತಕೊಂಡಿದ್ದೆ !
ಹೋದ ತಿಂಗಳು ಕಂಪ್ಯೂಟರ್ ತಕೊಂಡೆ !
ಮೊನ್ನೆ ಬ್ರಾಡ್ಬ್ಯಾಂಡ್ ಸಂಪರ್ಕ ಸಕ್ರಿಯ ಆಯ್ತು!

ಹೇಗಿದೆ ಪ್ರಗತಿಯ ಗತಿ(ವೇಗ)?

ನನ್ನ ಮನಸ್ಸಿನ ಒಂದುಭಾಗ ಭವಿಷ್ಯ ಮೊದಲಾದವನ್ನು ನಂಬುವುದರ ವಿರುದ್ಧ ಬಂಡೆದ್ದರೂ ಇನ್ನೊಂದು ಭಾಗ ಕುತೂಹಲ , ನಿರೀಕ್ಷೆ , ಬದುಕಿನ ದಿಕ್ಕು , ಹೊಸ ಕನಸು, ವಿಚಾರಗಳಿಗಾಗಿ ಭವಿಷ್ಯವನ್ನು ಓದ ಹಚ್ಚುತ್ತದೆ . ಕೆಲವು ಮುಖ್ಯ ಘಟನೆಗಳು ನಿಜವಾಗಿದ್ದೂ ಇದೆ . ನಿಜವಾಗದ್ದನ್ನ ಖಂಡಿತಾ ಮರೆತಿರ್ತೀನಿ ! ಈ ವರ್ಷದ ರಾಶಿ ಭವಿಷ್ಯದಲ್ಲಿ - You will be activating the internet , the mother of all comunications, Your other main occupation, preoccupation , interest and focus will be the cyberworld, information technology ; you are reaching out on a scale that is truly global in communication' ಅಂತ ಇತ್ತು .

ಮೊನ್ನೆ ಹಾಕಿದ ಸರಳ ಕನ್ನಡಪದಗಳ ಪಟ್ಟಿಯೊಂದಕ್ಕೆ ಒಂದೇ ದಿನದಲ್ಲ್ಲಿ ನಲ್ವತ್ತು ಪ್ರತಿಕ್ರಿಯೆಗಳು ; ಎಲ್ರೂ ಹುರುಪಿನಿಂದ ಪಾಲ್ಗೊಳ್ಳುತ್ತಿದ್ದೇವೆ; ಅದೂ ಜಗತ್ತಿನ ನಾನಾ ಮೂಲೆಗಳಿಂದ.

ಇರಲಿ ನೋಡೋಣ. ಅಂದ ಹಾಗೆ ಇಂಟರ್ನೆಟ್ , ಪೀಸೀ ನಲ್ಲಿ ಲೈನಕ್ಸ್ ಅನ್ನೂ ಇಟ್ಕೊಂಡಿದ್ದೀನಿ , ವಿಂಡೋಸೂ ಇದೆ .. ಗ್ವಾಡಿ ಕಟ್ಟಿ ತಟ್ಟಿ ಒದ್ರಾತೂ ಅಂತ! ಆ ವಿಶ್ಯ ಮತ್ತೆ ಯಾವಾಗಾದ್ರೂ ಬರೀತೀನಿ!

Rating
No votes yet

Comments