ಮನೆಯನೆಂದು ಕಟ್ಟದಿರು

ಮನೆಯನೆಂದು ಕಟ್ಟದಿರು

 

ರಾಷ್ಟ್ರಕವಿ ಕುವೆಂಪು ರವರ ಈ ರಚನೆ ಎಲ್ಲರಿಗು ಪರಿಚಿತ.

 

ಓ ನನ್ನ ಚೇತನ ಆಗು ನೀ ಅನಿಕೇತನ

ರೂಪ ರೂಪಗಳನು ದಾಟಿ ಕೋಟಿ ನಾಮಗಳನು ಮೀಟಿ ಎದೆಯ ಬಿರಿಯೆ ಭಾವದೀಟಿ

ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ

ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು

ಅನಂತ ತಾನನಂತವಾಗಿ ಆಗುತಿಹನೆ ನಿತ್ಯಯೋಗಿ ಅನಂತ ನೀ ಅನಂತವಾಗು ಆಗು ಆಗು ಆಗು ಆಗು

 

ಇಲ್ಲಿ ಕವಿವಾಣಿ - " ಮನೆಯನೆಂದು ಕಟ್ಟದಿರು" ಈ ಮಾತು ಬಹಳ ಪ್ರಸಿದ್ದಿ. ಈ ಸಾಲು ಎಷ್ಟೇ ಅರ್ಥವಾಗಿದ್ದರು, ಎಲ್ಲರು ಮನೆ ಕಟ್ಟುವ ಕನಸು ಕಾಣ್ತಾರೆ. ಕವಿಯ ಈ ಸಾಲಿನ ಅರ್ಥ - ಮನೆಯೊಂದನ್ನು ಕಟ್ಟಿ ನಿನ್ನೆಲ್ಲ ಶಕ್ತಿಗಳನ್ನು ಅಲ್ಲಿಯೇ ಶೇಖರಿಸಬೇಡ ಅಲ್ಲಿಯೇ ನೆಲೆಸಬೇಡ, ಈ ಜಗತ್ತು ವಿಶಾಲವಾದದ್ದು ನಮ್ಮೆಲ್ಲ ಚೇತನವನ್ನು ಎಲ್ಲಡೆ ಹರಡಬೇಕು ಎಂದು ಅರ್ಥ ಕೊಟ್ಟಿದ್ದಾರೆ. ಆದರೆ, ಹಿರಿಯರು ಮಾತು (ಗಾದೆ) "ಮನೆ ಕಟ್ಟಿ ನೋಡು" - ಇದರ ಅರ್ಥ, ಮನೆ ಕಟ್ಟಲು ನಾವು ಹಾಕುವ ಪರಿಶ್ರಮ ನಮ್ಮ ಯೋಚನಾಶಕ್ತಿಯನ್ನು ಮೀರಿಸುತ್ತದೆ.  ಮೇಲೆರಡು ಸಾಲುಗಳನ್ನು ಗಮನಿಸಿದರೆ ನಮ್ಮಲ್ಲಿ ದ್ವಂದ್ವ ಸೃಷ್ಟಿಸುತ್ತದ್ದೆ. ಈ ಎರಡು ಸಾಲುಗಳ ಅರ್ಥ ಬೇರೆ ಮತ್ತು ಸಂದರ್ಭ ತಕ್ಕಂತೆ.

 

ನನ್ನ ವಿಚಾರ ಏನಂದ್ರೆ - ಒಂದು ಮನೆ ಕಟ್ಟೋದು ತುಂಬಾ ಕಷ್ಟಕರವಾದ ಸಂಗತಿ. ಇನ್ನು ಬೃಹತ್ ಬೆಂಗಳುರುನಲ್ಲಂತೂ ಅತಂತ್ಯಂತ ಕಠಿಣ. ಈ ದುಬಾರಿ ಜಗತ್ತಲ್ಲಿ , ಬೆಂಗಳುರುನಲ್ಲಿ "Independent House " ಮಾಡೋದು ಅದು ಸ್ವತಂತ್ರವಾಗಿ ನಿಭಾಯಿಸೋದು ಅಂದ್ರೆ ಸುಲಭದ ಮಾತಲ್ಲ. ಅದು ಹೇಗೋ ಒಂದು ಮನೆ ಆಯಿತು ಅಂದ್ರೆ ಇನ್ನು ಬ್ಯಾಂಕಲ್ಲಿ ಸಾಲಕ್ಕೆ ನಿಲ್ಲಬೇಕು. ಇನ್ನು ಮನೆ ಸಾಲ ಅಂದ್ರೆ ೧೦-೧೫-೨೦ ವರ್ಷ ಕಟ್ಟಬೇಕು , ಅದಕ್ಕೆ ಒಳ್ಳೆ ಬ್ಯಾಂಕ್ ಆಯ್ಕೆ ಮಾಡಬೇಕು, ಒಳ್ಳೇದು ಅಂದ್ರೆ ಅವರದೆ ನೂರೆಂಟು ನಿಯಮಗಳು. ಅದು ಹೇಗೋ ಮಾಡಿ ಮುಗಿಸಿದರೆ. ಮನೆ ಬಂದ ಖುಷಿ ಆದ್ರೆ ಅರ್ಧ ಸಂಬಳದಲ್ಲಿ ಜೀವನ ಮುಂದುವರಿಸಬೇಕು.  ಮನೆಯಾದಮೇಲೆ ಇನ್ನು ಅದಕ್ಕೆ  ಒಳಭಾಗದ ಖರ್ಚುವೆಚ್ಚಗಳು. ಮತ್ತೆ ಅದಕ್ಕೆ ಈ ಅರ್ಧ ಸಂಬಳದಲ್ಲಿ ಯೋಜನೆ ಮಾಡಬೇಕು. ಇಷ್ಟೆಲ್ಲಾ ಮಾಡೋ ಮಧ್ಯ ಬೇರೆ ಯಾವದು ಯೋಜನೆ ಇಲ್ಲದಿದ್ದರೆ ನೋಡಿ ಬದುಕು ಚಂದ. ಆದರೆ "ಮಾನವನ ಆಸೆಗೆ ಕೊನೆಯೆಲ್ಲಿ"  ಎಂಬಂತೆ ಆಸೆಗಳ ಕಟ್ಟಡ ಯಾವಾಗಲು ಕಟ್ಟುತ ಇರ್ತಿವಿ ನಾವು, ಇದರಿಂದ ಏನು ಅನಿಸುತ್ತೆ ಅಂದ್ರೆ - " ಮನೆಯನೆಂದು ಕಟ್ಟದಿರು" - ಯಾಕೆಂದರೆ ಇದರಿಂದ ನಿನ್ನೆಲ್ಲ ಶಕ್ತಿ ಅದ್ರಲ್ಲಿ ಕೂಡಿ ಹಾಕ್ತ ಇದ್ದೀಯ. ಸದ್ಯಕ್ಕೆ ಈ ಮಾತು ಸತ್ಯ ಬೆಂಗಳೂರಲ್ಲಿ ಸ್ವಂತ ಮನೆ ಬ್ಯಾಂಕ್ ಸಾಲದಿಂದ ಕೊಂಡರೆ , ನಮ್ಮೆಲ್ಲ ಸಂಬಳ ಶಕ್ತಿಯನ್ನು ಅದರಲ್ಲಿ ಕೂಡಿ ಹಾಕಿದಂತೆ. ಮನೆ ಇರಲ್ಲಿಲ್ಲ ಅಂದ್ರೆ ನಿಮ್ಮೆಲ್ಲ ಶಕ್ತಿ ಅಂದ್ರೆ ಸಂಬಳವನ್ನು ಬೇರೆ ಎಲ್ಲಕಡೆ ಹರಡಬಹುದು .

 
Rating
Average: 5 (2 votes)

Comments

Submitted by H A Patil Thu, 10/04/2012 - 12:07

ಮೇಡಂ ವಂದನೆಗಳು
' ಮನೆಯನೆಂದೂ ಕಟ್ಟದಿರು ' ಸರಳ ಆದರೆ ಅಷ್ಟೆ ಅರ್ಥಪೂರ್ಣ. ಕುವೆಂಪುರವರ ಕವನದ ಆಶಯ ಮತ್ತು ಅದು ಹೊರಡಿಸುವ ಧ್ವನಿ ಬೇರೆಯೆ ಆದರೂ ತಾವು ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಯೊಂದನ್ನು ಹೊಂದುವ ಕಷ್ವನ್ನು ಸರಳವಾಗಿ ಸೊಗಸಾಗಿ ಮಿತವಾಗಿ ಹೇಳಿ ದ್ದೀರಿ, ಲೇಖನ ಸಕಾಲಿಕವಾಗಿದೆ. ಧನ್ಯವಾದಗಳು.