ಮನೆಯನೆಂದು ಕಟ್ಟದಿರು
ರಾಷ್ಟ್ರಕವಿ ಕುವೆಂಪು ರವರ ಈ ರಚನೆ ಎಲ್ಲರಿಗು ಪರಿಚಿತ.
ಓ ನನ್ನ ಚೇತನ ಆಗು ನೀ ಅನಿಕೇತನ
ರೂಪ ರೂಪಗಳನು ದಾಟಿ ಕೋಟಿ ನಾಮಗಳನು ಮೀಟಿ ಎದೆಯ ಬಿರಿಯೆ ಭಾವದೀಟಿ
ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ
ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು
ಅನಂತ ತಾನನಂತವಾಗಿ ಆಗುತಿಹನೆ ನಿತ್ಯಯೋಗಿ ಅನಂತ ನೀ ಅನಂತವಾಗು ಆಗು ಆಗು ಆಗು ಆಗು
ಇಲ್ಲಿ ಕವಿವಾಣಿ - " ಮನೆಯನೆಂದು ಕಟ್ಟದಿರು" ಈ ಮಾತು ಬಹಳ ಪ್ರಸಿದ್ದಿ. ಈ ಸಾಲು ಎಷ್ಟೇ ಅರ್ಥವಾಗಿದ್ದರು, ಎಲ್ಲರು ಮನೆ ಕಟ್ಟುವ ಕನಸು ಕಾಣ್ತಾರೆ. ಕವಿಯ ಈ ಸಾಲಿನ ಅರ್ಥ - ಮನೆಯೊಂದನ್ನು ಕಟ್ಟಿ ನಿನ್ನೆಲ್ಲ ಶಕ್ತಿಗಳನ್ನು ಅಲ್ಲಿಯೇ ಶೇಖರಿಸಬೇಡ ಅಲ್ಲಿಯೇ ನೆಲೆಸಬೇಡ, ಈ ಜಗತ್ತು ವಿಶಾಲವಾದದ್ದು ನಮ್ಮೆಲ್ಲ ಚೇತನವನ್ನು ಎಲ್ಲಡೆ ಹರಡಬೇಕು ಎಂದು ಅರ್ಥ ಕೊಟ್ಟಿದ್ದಾರೆ. ಆದರೆ, ಹಿರಿಯರು ಮಾತು (ಗಾದೆ) "ಮನೆ ಕಟ್ಟಿ ನೋಡು" - ಇದರ ಅರ್ಥ, ಮನೆ ಕಟ್ಟಲು ನಾವು ಹಾಕುವ ಪರಿಶ್ರಮ ನಮ್ಮ ಯೋಚನಾಶಕ್ತಿಯನ್ನು ಮೀರಿಸುತ್ತದೆ. ಮೇಲೆರಡು ಸಾಲುಗಳನ್ನು ಗಮನಿಸಿದರೆ ನಮ್ಮಲ್ಲಿ ದ್ವಂದ್ವ ಸೃಷ್ಟಿಸುತ್ತದ್ದೆ. ಈ ಎರಡು ಸಾಲುಗಳ ಅರ್ಥ ಬೇರೆ ಮತ್ತು ಸಂದರ್ಭ ತಕ್ಕಂತೆ.
ನನ್ನ ವಿಚಾರ ಏನಂದ್ರೆ - ಒಂದು ಮನೆ ಕಟ್ಟೋದು ತುಂಬಾ ಕಷ್ಟಕರವಾದ ಸಂಗತಿ. ಇನ್ನು ಬೃಹತ್ ಬೆಂಗಳುರುನಲ್ಲಂತೂ ಅತಂತ್ಯಂತ ಕಠಿಣ. ಈ ದುಬಾರಿ ಜಗತ್ತಲ್ಲಿ , ಬೆಂಗಳುರುನಲ್ಲಿ "Independent House " ಮಾಡೋದು ಅದು ಸ್ವತಂತ್ರವಾಗಿ ನಿಭಾಯಿಸೋದು ಅಂದ್ರೆ ಸುಲಭದ ಮಾತಲ್ಲ. ಅದು ಹೇಗೋ ಒಂದು ಮನೆ ಆಯಿತು ಅಂದ್ರೆ ಇನ್ನು ಬ್ಯಾಂಕಲ್ಲಿ ಸಾಲಕ್ಕೆ ನಿಲ್ಲಬೇಕು. ಇನ್ನು ಮನೆ ಸಾಲ ಅಂದ್ರೆ ೧೦-೧೫-೨೦ ವರ್ಷ ಕಟ್ಟಬೇಕು , ಅದಕ್ಕೆ ಒಳ್ಳೆ ಬ್ಯಾಂಕ್ ಆಯ್ಕೆ ಮಾಡಬೇಕು, ಒಳ್ಳೇದು ಅಂದ್ರೆ ಅವರದೆ ನೂರೆಂಟು ನಿಯಮಗಳು. ಅದು ಹೇಗೋ ಮಾಡಿ ಮುಗಿಸಿದರೆ. ಮನೆ ಬಂದ ಖುಷಿ ಆದ್ರೆ ಅರ್ಧ ಸಂಬಳದಲ್ಲಿ ಜೀವನ ಮುಂದುವರಿಸಬೇಕು. ಮನೆಯಾದಮೇಲೆ ಇನ್ನು ಅದಕ್ಕೆ ಒಳಭಾಗದ ಖರ್ಚುವೆಚ್ಚಗಳು. ಮತ್ತೆ ಅದಕ್ಕೆ ಈ ಅರ್ಧ ಸಂಬಳದಲ್ಲಿ ಯೋಜನೆ ಮಾಡಬೇಕು. ಇಷ್ಟೆಲ್ಲಾ ಮಾಡೋ ಮಧ್ಯ ಬೇರೆ ಯಾವದು ಯೋಜನೆ ಇಲ್ಲದಿದ್ದರೆ ನೋಡಿ ಬದುಕು ಚಂದ. ಆದರೆ "ಮಾನವನ ಆಸೆಗೆ ಕೊನೆಯೆಲ್ಲಿ" ಎಂಬಂತೆ ಆಸೆಗಳ ಕಟ್ಟಡ ಯಾವಾಗಲು ಕಟ್ಟುತ ಇರ್ತಿವಿ ನಾವು, ಇದರಿಂದ ಏನು ಅನಿಸುತ್ತೆ ಅಂದ್ರೆ - " ಮನೆಯನೆಂದು ಕಟ್ಟದಿರು" - ಯಾಕೆಂದರೆ ಇದರಿಂದ ನಿನ್ನೆಲ್ಲ ಶಕ್ತಿ ಅದ್ರಲ್ಲಿ ಕೂಡಿ ಹಾಕ್ತ ಇದ್ದೀಯ. ಸದ್ಯಕ್ಕೆ ಈ ಮಾತು ಸತ್ಯ ಬೆಂಗಳೂರಲ್ಲಿ ಸ್ವಂತ ಮನೆ ಬ್ಯಾಂಕ್ ಸಾಲದಿಂದ ಕೊಂಡರೆ , ನಮ್ಮೆಲ್ಲ ಸಂಬಳ ಶಕ್ತಿಯನ್ನು ಅದರಲ್ಲಿ ಕೂಡಿ ಹಾಕಿದಂತೆ. ಮನೆ ಇರಲ್ಲಿಲ್ಲ ಅಂದ್ರೆ ನಿಮ್ಮೆಲ್ಲ ಶಕ್ತಿ ಅಂದ್ರೆ ಸಂಬಳವನ್ನು ಬೇರೆ ಎಲ್ಲಕಡೆ ಹರಡಬಹುದು .
Comments
#ಮನೆಯನೆಂದೆಂದೂ.. ಕಟ್ಟದಿರಿ.
ನಿಜ ಹೇಳಿದ್ರಿ ಮಾನಸ ಅವ್ರೆ...
ಆರಾಮಾಗಿ P.G ಯಲ್ಲಿ ಸ್ಟೇ ಆದ್ರೆ ಆಯ್ತು...ಅಲ್ವಾ?
ಗುಡ್ ಒನ್ +೧
In reply to #ಮನೆಯನೆಂದೆಂದೂ.. ಕಟ್ಟದಿರಿ. by vidyakumargv
PG alli esht dina anta irokke
PG alli esht dina anta irokke agutte. eshte adru mane irbeku. adare mane madodu eshtu khasta anta adakke kai hakidmele gotaythu. innu time beku ardha samblakke adjust madkolokke.
ಮೇಡಂ ವಂದನೆಗಳು
ಮೇಡಂ ವಂದನೆಗಳು
' ಮನೆಯನೆಂದೂ ಕಟ್ಟದಿರು ' ಸರಳ ಆದರೆ ಅಷ್ಟೆ ಅರ್ಥಪೂರ್ಣ. ಕುವೆಂಪುರವರ ಕವನದ ಆಶಯ ಮತ್ತು ಅದು ಹೊರಡಿಸುವ ಧ್ವನಿ ಬೇರೆಯೆ ಆದರೂ ತಾವು ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಯೊಂದನ್ನು ಹೊಂದುವ ಕಷ್ವನ್ನು ಸರಳವಾಗಿ ಸೊಗಸಾಗಿ ಮಿತವಾಗಿ ಹೇಳಿ ದ್ದೀರಿ, ಲೇಖನ ಸಕಾಲಿಕವಾಗಿದೆ. ಧನ್ಯವಾದಗಳು.