ಮನೆಯಲ್ಲಿ ದು:ಖಕ್ಕೆ ಕಾರಣ?

ಮನೆಯಲ್ಲಿ ದು:ಖಕ್ಕೆ ಕಾರಣ?

ಅಥರ್ವವೇದದ ಒಂದು ಮಂತ್ರ ಹೀಗಿದೆ.

ಅಸೌ ಯೋ ಅಧರಾದ್ ಗೃಹಸ್ತತ್ರ ಸನ್ತ್ವರಾಯ್ಯ: |

ತತ್ರ ಸೇದಿರ್ನುಚ್ಯತು ಸರ್ವಾಶ್ಚ ಯಾತು ಧಾನ್ಯ:

[ಅಥರ್ವ :೨-೧೪-೩]

ಯ:=ಯಾವ

 ಗೃಹ: =ಮನೆಯು

ಅಧರಾದ್= ಅಂಧಕಾರಬಂಧುರವಾಗಿ ,ಜಾರಿ ಬಿದ್ದ ಸ್ಥಿತಿಯಲ್ಲಿ ಇರುವುದೋ,

ತತ್ರ=ಅಲ್ಲಿ

ಸರ್ವಾ:= ಎಲ್ಲಾ 

ಯಾತುಧಾನ್ಯ:=ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು,ರೋಗಗಳು,

ಅರಾಯ್ಯ:=ಮನುಷ್ಯರ ಧನ ಸಂಪತ್ತುಗಳನ್ನು ,ಶೋಭೆಯನ್ನೂ ಹರಣ ಮಾಡುವಂತಹವು

ಸನ್ತು=ಇರಬಲ್ಲವು,

ತತ್ರ-ಅಲ್ಲಿ

ಸೇದಿ:=ದು:ಖಗಳು

ನೀ ಉಚ್ಚ್ಯತು=ಯಾವಾಗಲೂ ಇರುತ್ತವೆ

 

ಭಾವಾರ್ಥ: ಸತ್ಪುರುಷರಿಲ್ಲದ,ಸತ್ ಕ್ರಿಯೆಗಳು ನಡೆಯದ ,ಸಜ್ಜನರು ಬಾರದ,ವಿದ್ಯೆ ವಿಜ್ಞಾನಗಳಿಲ್ಲದ ಮನೆಗಳು ಸಕಲ ಅನರ್ಥಗಳಿಗೂ ನಿಲಯಗಳಾಗುತ್ತವೆ, ಅಲ್ಲಿ ದುಷ್ಟರು,ವಿಷಕೀಟಗಳು,ವಿವಿಧ ವ್ಯಾಧಿಗಳು, ಅನೇಕ ಆಪತ್ತುಗಳು ದು:ಖಗಳು ನೆಲಸಲು ಅವಕಾಶವಾಗುತ್ತದೆ.ಇದರಿಂದ ಅಲ್ಲಿ ಒಳ್ಳೆಯವರು ಇರಲಾರರು.ಸಾದುಸತ್ಪುರುಷರ ಸಮಾಗಮ ,ಸತ್ಕರ್ಮಗಳು ನಡೆಯುವ ಗೃಹಗಳು ಸುಖದಾಯಕವಾಗಿ ಇರಬಲ್ಲವು.

ಆಧಾರ: ವೇದೋದಯ ಪ್ರತಿಷ್ಟಾನ ಪ್ರಕಟಿತ  ಶ್ರೀ ವಾ.ವೀ.ವೆಂ-ಅವರ "ಅಥರ್ವ ವೇದ ಶತಕ"

 

Rating
No votes yet

Comments