ಮನ ಮಿಡಿದ ಕಥೆ

ಮನ ಮಿಡಿದ ಕಥೆ

ಒಮ್ಮೊಮ್ಮೆ ಹಾಗೆಯೇ ,
ಯಾವುದೋ ಒಂದು ಭಾವದ ತಂತು,ಎಲ್ಲೋ ಸವಿದ ತಿಂಡಿಯ ರುಚಿ,ಎಲ್ಲೋ ಕೇಳಿದ ಸುಮಧುರ ಹಾಡು ಅಥವಾ ಮನ ಮೀಟ್ಡ ಕೆಲವು ಸಾಲು,ಹೃದಯ ತಟ್ಟಿದ ಕಥೆ ,ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ.ದಿನವಿಡೀ ಅದರದೇ ಗುಂಗು.
ಜರ್ಮನೀ ಯ ಒಂದು ಪಾರ್ಕ್‌ನಲ್ಲಿ ಒಂದು ಮುಂಜಾನೆ ಹಾಗೆಯೇ ವಿಹರಿಸುತ್ತಿದ್ದೆ, ಅಲ್ಲೊಬ್ಬ ಬಲ್ಲೋನು ಮಾರುವ ನಿಂತಿದ್ದ .ಅವನ ಸುತ್ತಲೂ ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಅವರಿಗೆ ಇಷ್ಟವಾದ ಬಣ್ಣದ ಬಲ್ಲೋನುಗಳ ಹುಡುಕಾಟದಲ್ಲಿದ್ದರು.ಆಗ ತಕ್ಷಣ ನನ್ನ ಮನಸಿಗೆ ಹಿಂದೆ ಕಸ್ತೂರಿಯಲ್ಲಿ ಓದಿದ ಕಥೆ ಜ್ನಾಪಕಕ್ಕೆ ಬಂದಿತು.

ಹೀಗೆ ಒಬ್ಬ ತಂದೆ ತನ್ನ ಪುಟ್ಟ ಮಗನೊನ್ದಿಗೆ ಪಾರ್ಕ್ ನಲ್ಲಿ ಅಡ್ದಾಡುತ್ತಿದ್ದ. ಆಗ ಕುರುಚಲು ಗಡ್ಡ ದ ,ಬಟ್ಟೆ ಮಾಸಿದ ವ್ಯಕ್ತಿಯೊಬ್ಬ ಬಲ್ಲೋನು ಮಾರುತ್ತ ಬಂದ.ಬಲ್ಲೋನು ಕಂಡಾಕ್ಷಣ ಮಗ ತನಗೆ ಬಲ್ಲೋನು ಬೇಕೆಂದು ತಂದೆಯನ್ನು ಪೀಡಿಸತೊಡಗಿದ.
ತಂದೆ ಮಗನಿಗೆ ಹೇಳುತ್ತಾ ಹಾಗೆಲ್ಲಾ ಕಂಡಿದ್ದೆಲ್ಲ ಬೇಕೆಂದು ಕೇಳಬಾರದು ಎಂದು ತಿಳಿಹೇಳುತಿದ್ದ,ಮಗನ ಹಟ ಜೋರಾಯಿತು,ತಂದೆಗೆ ತಡೆಯಲಾಗದೇ ಒಂದೆಟು ಬಿಗಿದ.ಮಗನ
ಕಣ್ಣು ಹನಿಗೂಡಿದವು.
ತಂದೆಗೆ ಪಿಕ್ಚೆನಿಸಿತು, ಮಗನಿಗೆ ಬಲ್ಲೋನು ಬೇಡವೆಂದು ತಿಳಿಹೇಳುತಿದ್ದರೂ ಅಲ್ಲಿಯೇ ನಿಂತಿದ್ದ ಬಲ್ಲೋನು ಮಾರುವತನಿಗೆ ತನ್ನ ಆಕ್ಷೇಪ ವ್ಯಕ್ತಪಡಿಸಿದ , ಆಗ ಬಲ್ಲೋನು ಮಾರುವಾತ ನುಡಿದ.
"ಸರ್ ಬೇಜಾರು ಮಾಡಿಕೊಳ್ಳಬೇಡಿ,ನಿಮ್ಮಂತೋರ ಮಕ್ಕಳು ಅತ್ತರೇನೇ ನಮ್ಮಂತೋರ ಮಕ್ಕಳು ಒಂದು ಹೊತ್ತು ಊಟ ಮಾಡಿ ನಕ್ತಾವೇ."
ಆಗ ತಂದೆಯ ಮನಸ್ಸಿಗೆ ಖೇದವೆನಿಸಿತು, ಹತ್ತರ ನೋಟು ಆತನ ಕೈಳಿಡುತ್ತಾ ಮಗನಿಗೆ ಎಲ್ಲಾ ಬಣ್ಣಗಳ ಬಲ್ಲೋನು ಕೋಡೆಂದ.
ಮಗನ ಮುಖ ಬಲ್ಲೊನ್ನನ್ತೆ ಅರಳಿತು.
ಕಥೆಯ ಗುಂಗಿನಿಂದ ಹೊರಬಂದು ಮಕ್ಕಳನ್ನು ನೋಡಿದೆ. ಅವು ಆಗಲೇ ತಮ್ಮ ಬಣ್ಣದ ಬಲ್ಲೊನಿನನ್ತೆ ಹಾರುತ್ತಿದ್ದವು.

ನಿಮ್ಮ
ಭಾರ್ಗವ.

Rating
No votes yet

Comments