"ಮಮ್ತಾ" ಎನ್ನುವ ಚಿತ್ರದ  ಲತಾದೀದಿ ಯವರ ಗೀತೆಯ ಅದ್ಭುತ ಪ್ರಸ್ತುತಿ  !

"ಮಮ್ತಾ" ಎನ್ನುವ ಚಿತ್ರದ  ಲತಾದೀದಿ ಯವರ ಗೀತೆಯ ಅದ್ಭುತ ಪ್ರಸ್ತುತಿ  !

ಈಗ  ಈ ವೀಡಿಯೊದಲ್ಲಿ ಕಾಣಿಸಿಕೊಳ್ಳುವ  ದಿಗ್ಗಜ  ಸಂಗೀತಕಲಾವಿದರು  ಭಾರಿ ಸುಸಜ್ಜಿತ ಆರ್ಕೆಸ್ಟ್ರಾ ಸೆಟ್ ನಲ್ಲಿ ಸೆಲೆಬ್ರಿಟಿಗಳಾದ

ಹರಿಹರನ್, ಶುಭಾ ಮುದ್ಗಲ್, ಉಷಾ ಊಧಪ್ ಮತ್ತು ಹಲವು ಯುವ ಸಂಗೀತ ಪ್ರತಿಭೆಗಳ ಜೊತೆಗೂಡಿ ಸಂಭ್ರಮದಿಂದ  ಹಾಡಿರುವ ಸಾಮೂಹಿಕ ಗೀತೆಯಾಗಿರುವುದನ್ನು ಕಾಣುತ್ತೇವೆ.  

೧೯೬೩ ರಲ್ಲಿ ಬಂಗಾಳಿ ನಿರ್ದೇಶಕ, ನಿರ್ಮಾಪಕ, ಅಸಿತ್ ಸೇನ್  ಮೊದಲು ಬಂಗಾಳಿ ಭಾಷೆಯಲ್ಲಿ "ಉತ್ತರ ಫಾಲ್ಗುಣಿ "ಎಂಬ ಚಿತ್ರ ನಿರ್ಮಿಸಿದ್ದರು. ಅದರಲ್ಲೂ ಮುಖ್ಯ ಭೂಮಿಕೆಯಲ್ಲಿ ಸುಚಿತ್ರ ಸೇನರೇ ಅಭಿನಯಿಸಿದ್ದರು  ಈಗ ೧೯೬೬ ರ  ಅದೇ ಚಿತ್ರದ ಪುನರ್ ನಿರ್ಮಾಣವನ್ನು  ಹಿಂದಿ ಭಾಷೆಯಲ್ಲಿ ಮಮ್ತಾ  ಎನ್ನುವ ಹೆಸರಿನಲ್ಲೇ ಅಸಿತ್  ಸೇನರೇ ನಿರ್ಮಿಸಿದರು. ಚಿತ್ರಸಂಗೀತ ರೋಷನ್ ರವರಿಂದ, ಮಜರು ಸುಲ್ತಾನ್ ಪುರಿ ಗೀತರಚನೆ ಮಾಡಿದರು. ನಿಹಾರ್ ರಂಜಾನ್ ಗುಪ್ತ, ಹಾಗು ಕೃಷನ್ ಚಂದರ್ ಚಿತ್ರಕತೆಯನ್ನು ಬರೆದರೂ. ಸುಚಿತ್ರ ಸೇನ್ ದ್ವಿಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಮಾಧ್ಯಮವರ್ಗದ ಸಮುದಾಯದ ಸುಖ, ಸಂತೋಷ ತಲ್ಲಣ ಗಳನ್ನು ಪ್ರತಿಬಿಂಬಿಸುವ ಚಿತ್ರವಾಗಿದೆ. ಈ ಫಿಲಂ ನಲ್ಲಿ ಬರುವ ಗೀತೆಗಳನ್ನು ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಕಂಠದಾನ ಮಾಡಿದ್ದಾರೆ. 'ರಹೇನ ರಹೇ ಹಮ್', ಎಂಬ ಅಮರ ಗೀತೆಯನ್ನು ಹಾಗೂ 'ಛುಪಾಲೋ ಯೂ ದಿಲ್ ಮೇ ಪ್ಯಾರ್ ಮೇರಾ', ಗೀತೆಯನ್ನು ಹೇಮಂತ್ ಕುಮಾರ್  ಜೊತೆ ಹಾಡಿ ಧ್ವನಿಮುದ್ರಿಸಿದ್ದರು. 
 
ರಹೇ ನ ರಹೇ ಹಮ್ ಮೆಹ್ಕಾ ಕರೇಗಾ 
ಬನ್ ಕೆ ಕಲಿ ಬನ್ ಕೆ ಸಬ ಬಾಗೆ 
ವಫಾ ಮೇ ರಹೇ ನ ರಹೇ ಹಮ್
Rating
Average: 4 (1 vote)