ಮರಳಿ ಮನಕೆ

ಮರಳಿ ಮನಕೆ

ಮರಳಿ ಮನಕೆ

ಅಂದು ನಾನು ನಾನಗಿದ್ದೆ
ಮೌನ ಗೂದಾಗಿದ್ದೆ , ಮನದ ಮುಗಿಲಾಗಿದ್ದೆ
ಇಂದೆನಾದೆನು ...?
ನನ್ನ ನಾನು ಮರೆತೆನು ,
ಹಣದ ಬಲೆಗೆ ಬಿದ್ದು ಹಾಳಾದೆನು
ನನ್ನ-ನನ್ನವರ ಮರೆತು ಮುಗಿಯದ ಮಾತಾದೆನು

ಈ ನನ್ನವರಿಲ್ಲದ ಜಗದಲಿ
ನನ್ನವರ ಹುಡುಕಿ ಸುಸ್ಥಾದೇನು
ಸಿಗದ ಪ್ರೀತಿ -ವಲವಿಗಾಗಿ ಬೆಂದೆನು
ಇ ಜೀವದ ಜೀವಕೆ ಜೋತು ಬಿದ್ದು ,ಬರಗೆಟ್ಟು ಹೋದೆನು

ಇಲ್ಲಿ ಎಲ್ಲಿ ನನ್ನವರು ?.
ನನ್ನ ಉಸಿರಲ್ಲಿ ಉಸಿರಾದವರು ...
ಇ ಬಾಳಿಗೆ ಬೆಳಕು ನೀಡಿದವರು
ನನ್ನ ಆತ್ಮದ ಜ್ಯೋತಿ ಬೆಳಗಿದವರು
ಎಲ್ಲಿ ಅವರು, ನನ್ನ ನನ್ನಾಗಿಸಿದವರು ....

ಇನ್ನೇನಿದ್ದರೂ ಅವರು ಕೇವಲ ಮರೀಚಿಕೆ .............

Rating
No votes yet

Comments