ಮರಿಗುಬ್ಬಿ ಮತ್ತು ಶಕ್ತಿಮದ್ದು ಗುರುಗಳು

ಮರಿಗುಬ್ಬಿ ಮತ್ತು ಶಕ್ತಿಮದ್ದು ಗುರುಗಳು

ಇದು ಸುಮ್ನೆ ಬರೀತಿರೋದು, ಇದ್ರಲ್ಲಿ ಯಾವುದೇ ನೀತಿ  ಇಲ್ಲ... ಮೊನ್ನೆ  ಆಫೀಸ್ ಕ್ಯಾಂಟೀನ್ ನಲ್ಲಿ ತಿಂಡಿ ತಿಂತಿದ್ದಾಗ ಮನಸಿಗೆ ಬಂದದ್ದು, ನಾನು ಮತ್ತೆ ರಾಘವ ಕಾಫಿಗೆ  ಹೋದಾಗ ಆ ಕಥೆನ ಮತ್ತಷ್ಟು ಎಳ್ದಿದೀವಿ...

ದಿನಾ ತಿಂಡಿ ತಿನ್ನುವಾಗ ಒಂದು ಗುಬ್ಬಿ ಬಂದು ನನ್ನ ಟೇಬಲ್ ಹತ್ರ ಕೂರ್ತಿತ್ತು, ಈಗೆಲ್ಲಿದಾವೆ ಗುಬ್ಬಿಗಳು ಅನ್ನ ಬೇಡಿ  ಮೈಸೂರಿನ ನಮ್ಮ ಆಫೀಸಿನ ಕ್ಯಾಂಟೀನ್ ನಲ್ಲಿ ತುಂಬಾ ಗುಬ್ಬಿಗಳು ಇದಾವೆ  :) ನಂಗೆ ಅದನ್ನ ಹೆಂಗಾದ್ರೂ ಫ್ರೆಂಡ್ ಮಾಡ್ಕೊಬೇಕೂ ಅಂತ  ಆಸೆ.
ಹಂಗೇ ಸಂಜೆ ಮನೆಗೆ  ಹೋಗೋ ದಾರೀಲಿ  ಶಕ್ತಿಮದ್ದು  ಗುರುಗಳು ಇದಾರಲ್ಲ ಅವ್ರು ಸಿಕ್ಕಿದ್ರು, ಅವರ್ನೂ ಕರ್ಕೊಂಡು ಬೈಕ್ ಅಲ್ಲಿ ಹೋಗ್ಬೇಕಾದ್ರೆ  ಗುಬ್ಬಿ ಬಗ್ಗೆ  ಹೇಳಿದೆ. ಅವ್ರು ಕೆಲವು ಗುಳಿಗೆ ಕೊಡ್ತೀನಿ ಅಂದ್ರು ಅದನ್ನ ಗುಬ್ಬಿಗಳಿಗೆ ಕೊಟ್ರೆ ಅವು ಫ್ರೆಂಡ್ ಆಗ್ಬಿಡ್ತಾವಂತೆ, ನಾನು "ಹೌದಾ!" ಅಂತ  ಕೇಳಿ ಆ ಗುಳಿಗೆಗಳನ್ನ ಇಸ್ಕೊಂಡೆ. ಆಮೇಲೆ ಹಂಗೇ ಮಾತಾಡ್ತಾ ಲಂಬೋದರ ಏನ್ಮಾಡ್ತಿದಾನೆ ಅಂತ ಕೇಳಿದೆ. ಅದಕ್ಕೆ ಅವ್ರು  "ಅವ್ನು ಈಗ ದೊಡ್ಡೊವನಾಗಿದಾನೆ , ಇತ್ತೀಚೆಗೆ ಅದೇನೋ ಪ್ರೋಗ್ರಾಮಿಂಗ್ ಮಾಡ್ತಿರ್ತಾನೆ" ಅಂತ  ಅಂದ್ರು. ಕೊನೆಗೆ ಅವ್ರ ಮನೆ ಹತ್ರ ಡ್ರಾಪ್ ಮಾಡಿ ಸಲ್ಪ ಶಕ್ತಿಮದ್ದು  ಕೊಡ್ತೀರಾ ಅಂತ ಕೇಳಿದೆ, ಅದ್ರುದ್ದು  ಪ್ರೊಡಕ್ಷನ್ ನಿಂತೋಗಿದೆ  ಕಣಪ್ಪಾ   ಇಲ್ಲಾಂದ್ರೆ ಕೊಡ್ತಿದ್ದೆ ಅಂದ್ರು.

ಇವತ್ತು ಅವ್ರು ಕೊಟ್ಟ ಗುಳಿಗೆ ನ  ಡಬ್ಬಿಯಲ್ಲಿ  ಹಾಕಿ ಇಟ್ಟಿದೀನಿ, ನಾಳೆ ಆಫೀಸಿಗೆ ಹೋದಾಗ  ಮರಿಗುಬ್ಬಿಗೆ   ಕೊಟ್ಟು  ನೋಡ್ಬೇಕು  ;)

Rating
No votes yet