ಮರೀಚಿಕೆ

ಮರೀಚಿಕೆ

 

ಮರೀಚಿಕೆ

ಕೊಳದ ಕೆಂದಾವರೆಯ ಸುಗಂಧದೊಳು ನೀ
ಭ್ರಮರದ ತುಟಿಯಂಚಿನ ಮಕರ೦ದದೊಳು ನೀ
ಬೆಳದಿಂಗಳಿಳಿದ ಅಂಗಳದ ಛಾಯೆಯೊಳು ನೀ
ಬಳಿ ಸಾಗಿ ನಾ ನೋಡ ಅದೃಶ್ಯ, ಅಸ್ಪಷ್ಟ ನೀ

ತೂಗು ತೊಟ್ಟಿಲ ಮುದ್ದುಕಂದನ ಮುಗ್ದತೆಯೊಳು ನೀ
ಮೂಡಲ ಹೊಸ್ತಿಲ ಬಿರಿದ ಬಣ್ಣದ ರಂಗೊಲಿಯೊಳು ನೀ
ಗೂಡಲಿ ತುತ್ತುಣ್ಣುತಾ ಹಸಿದ ಗುಬ್ಬಿಯ ಚಿಲಿಪಿಲಿಯೊಳು ನೀ
ಬಳಿ ಸಾಗಿ ನಾ ನೋಡ ಅದೃಶ್ಯ, ಅಸ್ಪಷ್ಟ ನೀ

ಮನದೊಳ ಹುಟ್ಟ ಹಲಬಗೆ ಗೊಂದಲಕೆ ಕಾರಣ ನೀ
ಕಂಬನಿಗರೆವ ಕಣ್ಣಕೊಳದೊಳಗಣ ಬಿ೦ಬ ನೀ
ಬಾಡಿದ ಮೊಗದಿ ಮುತ್ತಿಟ್ಟ ಮುಂಗುರುಳ ನವಿರಾದ ಸ್ಪರ್ಶದೊಳು ನೀ
ಈ ಪೆಣ್ಮನಸ್ಸಿನ ಭಾವಗೀತೆಯ ಪಲ್ಲವಿಯೊಳು ನೀ

ಹಿನ್ನುಡಿ : ಹದಿಹರೆಯದ ವಿರಹಿ ಹೆಣ್ಣಿನ ಮನಸ್ಸಿನ ತುಮುಲಗಳು.

 


ನಿಮ್ಮ
ಕಾಮತ್ ಕುಂಬ್ಳೆ

Rating
No votes yet

Comments