ಮರುಕಥನ - ಕೆ. ಸತ್ಯನಾರಾಯಣ ಅವರ ಕಥೆ 'ಚಿಕ್ಕತಾಯಿ'

ಮರುಕಥನ - ಕೆ. ಸತ್ಯನಾರಾಯಣ ಅವರ ಕಥೆ 'ಚಿಕ್ಕತಾಯಿ'

ಚಿತ್ರ

 

ಒಂದು ಕಚೇರಿ. ಅಲ್ಲಿ ಒಬ್ಬಳು ಮಹಿಳಾ ಉದ್ಯೋಗಿಗೆ ಆಕೆಯ ಬಾಸ್ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ. ಒಂದು ಹಂತದಲ್ಲಿ ಅವಳು ಮೇಲಿನ  ಅಧಿಕಾರಿಗೆ ಈ ಸಂಗತಿಯನ್ನು ತಿಳಿಸಿ ತನ್ನನ್ನು ಬೇರೆಯ ಸೆಕ್ಷನ್ ಗೆ ಹಾಕಲು ಕೇಳಿಕೊಳ್ಳುತ್ತಾಳೆ. ಆ  ಮೇಲಧಿಕಾರಿಗೆ  ಆಕೆಯ ಬಾಸ್ ಬಗ್ಗೆ ತುಂಬಾ ಸಿಟ್ಟು ಬಂದು ಕೇಂದ್ರ ಕಚೇರಿಗೆ ಫೋನ್ ಮಾಡಿ ಆತನನ್ನು ತುಂಬಾ ದೂರಕ್ಕೆ ವರ್ಗ ಮಾಡಿಸುತ್ತಾನೆ. 

 

ಆಮೇಲೆ ನಡೆಯುವುದೇನು?  ಈ ಸಂಗತಿ ತಿಳಿದ ದಿನ ಅವಳು  ಈ ಮೇಲಧಿಕಾರಿಯ ಕ್ಯಾಬಿನ್ನಿಗೆ  ನುಗ್ಗಿ ಕಿರುಚುತ್ತಾಳೆ - "ನಾನು ಕೇಳಿದ್ದು ಏನು? ನೀವು ಮಾಡಿದ್ದೇನು?" 

 

ನಂತರ ಅವಳ ಮಾತಿನಿಂದ ತಿಳಿದದ್ದು - ಅವಳು ಕೇಳಿದ್ದು ಲೈಂಗಿಕ ಕಿರುಕುಳ ಕೊಡುತ್ತಿರುವ ಆ ಬಾಸ್ನ ವಿಭಾಗದಿಂದ ಬೇರೊಂದು  ವಿಭಾಗಕ್ಕೆ ವರ್ಗಾವಣೆ. ಆ ಬಾಸ್ನ ಸಂಸಾರದಲ್ಲಿ ನೂರೆಂಟು ತಾಪತ್ರಯಗಳು ಇವೆ. ಅವನಿಗೆ ತುಂಬಾ ದೂರ ವರ್ಗಾವಣೆ ಆದರೆ ಈ ಎಲ್ಲಾ ಸಮಸ್ಯೆಗಳನ್ನು ನಿರ್ವಹಿಸುವುದು ಯಾರು? ಹೇಗೆ? ಆತನ ಹೆಂಡತಿ-ಮಕ್ಕಳು ಹೆಚ್ಚಿನ ಸಂಕಟಕ್ಕೆ ಸಿಕ್ಕಿಕೊಳ್ಳುತ್ತಾರೆ. ಅವನ ನೀಚತನಕ್ಕೆ ಅವರಿಗೇಕೆ ಶಿಕ್ಷೆ ?

 

ಅವಳು ಹೇಳುತ್ತಾಳೆ - "“ಕೈಮುಗಿದು ಕೇಳಕೊತೀನಿ. ದಯವಿಟ್ಟು ಹೈದ್ರಾಬಾದಿಗೆ ಫೋನ್ ಮಾಡಿ ವರ್ಗವನ್ನು ಕ್ಯಾನ್ಸಲ್ ಮಾಡಿಸಿ. ಇಲ್ಲದಿದ್ದರೆ ನನಗೆ ಮಾತ್ರವಲ್ಲ, ನಿಮಗೂ ಪಾಪ ಸುತ್ತಿಕೊಳ್ಳತ್ತೆ. ಪ್ರಸಾದ್‌ರಾವ್‌ ನೀಚತನಕ್ಕೆ ಮನೆಯವರಿಗೆಲ್ಲ ಏಕೆ ಶಿಕ್ಷೆ? ನಮ್ಮ ನಮ್ಮ ಹಣೆಬರಹವೆಂಬುದು ನರಕವೇ ನಿಜ. ಹಾಗೆಂದು ಎಲ್ಲರ ಬದುಕನ್ನೂ ಈ ನರಕಕ್ಕೆ ಎಳೆಯಬೇಕೆ? ಇಂತಹ ಶಿಕ್ಷೆಯನ್ನು ಜೀಸಸ್ ಒಪ್ಪೋಲ್ಲ. ದಯವಿಟ್ಟು ಈಗಲೇ ಹೈದ್ರಾಬಾದಿಗೆ ಫೋನ್ ಮಾಡಿ. ನಮ್ಮ ನಮ್ಮ ದುರಾದೃಷ್ಟ ಎಂಬುದು ನಮ್ಮ ನಮ್ಮ ನರಕ ಸಾರ್. ಹಾಗಂತ ನಾವು ನರಕವನ್ನು ಹರಡಬಾರದು”

 

ಇದು ಕೆ ಸತ್ಯನಾರಾಯಣ ಅವರು ಬರೆದ ಹೆಗ್ಗುರುತುಗಳು ಎಂಬ ಕಥೆಗಳ ಸಂಕಲನದಲ್ಲಿದೆ. ಅಲ್ಲಿನ ಉಳಿದ ಕಥೆಗಳು ನನಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ ವಾದರೂ ಆ ಪುಸ್ತಕದ ಮುನ್ನುಡಿ ಈ ಬಗ್ಗೆ ತುಂಬಾ ಸಹಾಯ ಮಾಡುತ್ತದೆ. 

 

ಅಲ್ಲಿರುವ ಕಥೆಗಳಲ್ಲಿ ಈ ಕತೆಯನ್ನು ಇಷ್ಟವಾಯಿತು. ನಾನು ಮೊನ್ನೆ ಜಾಕಿಚಾನ್ ಅಭಿನಯದ ನ್ಯೂ ಪೊಲೀಸ್ ಸ್ಟೋರಿ ಎಂಬ ಚಲನಚಿತ್ರದ ಕೊನೆಯಲ್ಲಿ ಬರುವ ಮನ ತಟ್ಟುವ ಒಂದು ದೃಶ್ಯದ ಬಗ್ಗೆ ಬರೆದಿದ್ದೇನಷ್ಟೇ. ಅದು ಕೂಡ ಇದೇ ಮನೋಭಾವನೆಯನ್ನೇ ಪ್ರತಿಬಿಂಬಿಸುತ್ತದೆ. ನೀವು ಅದನ್ನು  ಓದಿರದಿದ್ದರೆ  ಈಗ ಅದನ್ನು ಈ ಕೊಂಡಿಯಲ್ಲಿ ಓದಿ. 

Rating
Average: 4 (1 vote)