ಮರುಕಥನ - ನಂದಾದೀಪ ಎಂಬ ಪುಟ್ಟ ಕತೆ
ಒಬ್ಬ ಶ್ರೀಮಂತನು ತನ್ನ ಮನೆಯಲ್ಲಿ ಒಂದು ಪೂಜೆಯನ್ನು ಇಟ್ಟುಕೊಂಡು ಊರಿನ ಜನರನ್ನು ಕರೆದಿದ್ದನು. ಅಲ್ಲಿ ದೇವರಿಗೆಂದು ಅನೇಕ ದೀಪಗಳನ್ನು ಬೆಳಗಿದ್ದನು. ಬಂದವರ ಮಾತುಗಳ ಸದ್ದಿನಲ್ಲಿ ಅವನು ಅದು ಹೇಗೋ ಬಂದು ಮಾತನ್ನು ಕೇಳಿಸಿಕೊಂಡ . 'ಇದೇ ದೀಪ ಅಲ್ಲಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!'. ಅವನು ಈ ಮಾತಿಗೆ ವಿವರಣೆ ಕೇಳಿದರೆ. 'ಏನಿಲ್ಲ, ಈ ನೀಲಾಂಜನ ಸ್ವಲ್ಪ ಪಕ್ಕಕ್ಕೆ ಇದ್ದರೆ ಚೆನ್ನಾಗಿ ಕಾಣುತ್ತಿತ್ತು' ಎಂದೇನೋ ಸಮಜಾಯಿಷಿ ಹೇಳಿ ಜನ ತಪ್ಪಿಸಿಕೊಂಡರು. ಆದರೆ ಆ ಶ್ರೀಮಂತನು ಅದು ಹೇಗೋ ಆ ಮಾತಿನ ಅರ್ಥವನ್ನು ತಿಳಿದುಕೊಂಡು ಅಲ್ಲಿ ಹತ್ತಿರವಿದ್ದ ಒಂದು ಸಮಸ್ಯಾತ್ಮಕ ತಿರುವಿನಲ್ಲಿ ದೀಪಸ್ತಂಭದ ವ್ಯವಸ್ಥೆಯನ್ನು ಮಾಡಿದನು. ಅಲ್ಲಿ ಸಾಕಷ್ಟು ಬೆಳಕಿಲ್ಲದೆ ಆಗಾಗ ಅಪಘಾತಗಳು ಸಾವುಗಳು ಸಂಭವಿಸುತ್ತಿದ್ದವು.
ಈ ಕಥೆಯನ್ನು ಓದಿದಾಗ ನನಗೆ ಬೇರೆ ಒಂದು ಕಡೆ ಓದಿದ ಒಂದು ಜೈನ ಕಥೆ ನೆನಪಾಯಿತು. ಅದರಲ್ಲಿ ಒಬ್ಬ ರಾಜನ ಮೆರವಣಿಗೆಯ ಸಮಯದಲ್ಲಿ ಅಷ್ಟೆಲ್ಲಾ ಕೋಲಾಹಲ , ಸದ್ದು ಗದ್ದಲದ ನಡುವೆಯೂ ರಾಜನ ರಥದ ಕೆಳಗೆ ಸಿಕ್ಕುಜೀವ ಬಿಡುತ್ತಿರುವ ಒಂದು ಕಪ್ಪೆಯ ಆಕ್ರಂದನವನ್ನು ರಾಜನು ಕೇಳಿ ವೈರಾಗ್ಯ ಹೊಂದಿ ರಾಜ್ಯತ್ಯಾಗ ಮಾಡಿದ್ದ.
ಕೊರಡ್ಕಲ್ ಶ್ರೀನಿವಾಸರಾಯರು ಬರೆದ 'ನಂದಾದೀಪ' ಎಂಬ ಪುಟ್ಟ ಕತೆಗಳ ಸಂಕಲನವು archive.org ಅಂತರ್ಜಾಲ ತಾಣದಲ್ಲಿ ಸಿಕ್ಕಿತು. ಈ ಕಥೆಯು ಆ ಪುಸ್ತಕದಲ್ಲಿ ಮೊದಲನೇ ಕಥೆಯಾಗಿದೆ. ಆ ಪುಸ್ತಕವನ್ನು pustaka.sanchaya.net ತಾಣದಲ್ಲಿ ನಂದಾದೀಪ ಎಂದು ಹುಡುಕಿದರೆ ಸಿಗುತ್ತದೆ. ಇದು 1938 ರಲ್ಲಿ ಪ್ರಕಟವಾಗಿದೆ.