ಮರುಳು

ಮರುಳು

 

 

ಚಿಣ್ಣನಾ ಮುಂಗುರುಳು ಸೆಣಸಿರಲು ಮುದದಿಂದ

ಬಣ್ಣಬಣ್ಣದ ನವಿಲ ಗರಿಯ ಕೂಡೆ

ಕಣ್ಣನೆವೆಯಿಕ್ಕದೆಲೆ ನೋಡುತ್ತ ಬಗೆಗೊಂಡು

ಸಣ್ಣವನ ಗೀಳಿನಲೆ ಮರುಳಾದೆನು!

 

ಸಂಸ್ಕೃತ ಮೂಲ  ( ವೇದಾಂತ ದೇಶಿಕರ ಗೋಪಾಲ ವಿಂಶತಿಯ ಹತ್ತನೇ ಪದ್ಯ ) :

ಅನಿಮೇಷ ನಿಷೇವಣೀಯಮಕ್ಷ್ಣೋಃ

ಅಜಹತ್ಯೌವನಮವಿರಸ್ತು ಚಿತ್ತೇ |

ಕಲಹಾಯಿತ ಕುಂತಲಂ ಕಲಾಪೈಃ

ಕರಣೋನ್ಮಾದಕ ವಿಭ್ರಮಂ ಮಹೋ ಮೇ ||

 

-ಹಂಸಾನಂದಿ

ಚಿತ್ರಕೃಪೆ: ’ದ ಹಿಂದೂ’ ದಿನಪತ್ರಿಕೆಯ ವ್ಯಂಗ್ಯಚಿತ್ರ ಕಲಾವಿದ ಶ್ರೀ ಕೇಶವ್ ವೆಂಕಟರಾಘವನ್

Rating
No votes yet