ಮರುಳು
ಚಿಣ್ಣನಾ ಮುಂಗುರುಳು ಸೆಣಸಿರಲು ಮುದದಿಂದ
ಬಣ್ಣಬಣ್ಣದ ನವಿಲ ಗರಿಯ ಕೂಡೆ
ಕಣ್ಣನೆವೆಯಿಕ್ಕದೆಲೆ ನೋಡುತ್ತ ಬಗೆಗೊಂಡು
ಸಣ್ಣವನ ಗೀಳಿನಲೆ ಮರುಳಾದೆನು!
ಸಂಸ್ಕೃತ ಮೂಲ ( ವೇದಾಂತ ದೇಶಿಕರ ಗೋಪಾಲ ವಿಂಶತಿಯ ಹತ್ತನೇ ಪದ್ಯ ) :
ಅನಿಮೇಷ ನಿಷೇವಣೀಯಮಕ್ಷ್ಣೋಃ
ಅಜಹತ್ಯೌವನಮವಿರಸ್ತು ಚಿತ್ತೇ |
ಕಲಹಾಯಿತ ಕುಂತಲಂ ಕಲಾಪೈಃ
ಕರಣೋನ್ಮಾದಕ ವಿಭ್ರಮಂ ಮಹೋ ಮೇ ||
-ಹಂಸಾನಂದಿ
ಚಿತ್ರಕೃಪೆ: ’ದ ಹಿಂದೂ’ ದಿನಪತ್ರಿಕೆಯ ವ್ಯಂಗ್ಯಚಿತ್ರ ಕಲಾವಿದ ಶ್ರೀ ಕೇಶವ್ ವೆಂಕಟರಾಘವನ್
Rating