ಮರೆತು ಬಿಡು

ಮರೆತು ಬಿಡು

ಮೌನದ ಕೊಂಡಿಯದು,
ಮನಸ್ಸಿನ ಮಂಡಿಗೆಯದು,
ಅಳುವಿಲ್ಲ, ನಗುವಿಲ್ಲ,
ಮಾತಂತೂ ಮೊದಲೇ ಇಲ್ಲ,
ಹತ್ತಾಯ್ತು ಮತ್ತೈದಾಯ್ತು,
ಹದಿನೈದಕ್ಕೂ ಆರದ
ಗಾಯದ ಮನಸ್ಸುಗಳು,
ಉಂಡು ಮಲಗುವ ಮುನ್ನ
ಕಳಚಿದ್ದ ಕಗ್ಗಂಟು ಎಷ್ಟೋ,
ಈಗೇಕೆ ಈ ಪರಿ,
ಉಣ್ಣಲೂ ಒಲ್ಲೆ,
ಮಲಗಲೂ ಒಲ್ಲೆ,
ಬಿಚ್ಚಲೂ ಒಲ್ಲೆ ಮನದಾಳದ ಗಂಟ,
ಮುಗಿದಿವೆ ಕ್ರಿಯೆಗಳು, ಕರ್ಮಗಳು,
ಮುಗಿಯುತ್ತಿವೆ ಸಾಂತ್ವನದ ನುಡಿಗಳು,
ಮರೆಯುತ್ತಿವೆ ದೂರದ ಮನಸ್ಸುಗಳು,
ಸಾವಿನ ತೇರಲ್ಲಿ ಯಾರದೂ ತಪ್ಪಿಲ್ಲ,
ಯಾರದೂ ಒಪ್ಪಿಲ್ಲ,
ಅವನ ಆಜ್ಞೆಯಂತೆ ಆಡುವ
ನಾನೊಂದು ಬೊಂಬೆ,
ಇನ್ನಾದರೂ ಮರೆಯೆ
ನನ್ನೀ ಸಾವಿನ ನೋವ!

 

 

Rating
No votes yet

Comments