ಮರೆಯದ ಹಾಡುಗಳು

ಮರೆಯದ ಹಾಡುಗಳು

ಪಿ.ಸುಶೀಲಾ ನಾ ಮೆಚ್ಚಿದ ಗಾಯಕಿ.

ಅವರು ಅಸಂಖ್ಯಾತ ಕನ್ನಡ ಹಾಡು ಹಾಡಿದ್ದಾರೆ... ನನಗೆ ತೀರ ಆಪ್ತವಾದ ನಾಲ್ಕು ಹಾಡುಗಳ ಬಗ್ಗೆ ಹೇಳುವೆ.

೧) " ಯಾವ ಜನ್ಮದ ಎಳೆಯೊ ಕಾಣೆನು....."
ಚಿತ್ರ ’ಮಹಾತ್ಯಾಗ’. ಈ ಹಾಡು ಬರೆದವರು ವೀಸಿ. ಸಂಗೀತ ರಾಜನ್ ನಾಗೇಂದ್ರ.
ಈ ಹಾಡಿನಲ್ಲಿ ಒಂದು ಸಾಲು ಬರುತ್ತದೆ " ದಿಕ್ಕು ದಿಕ್ಕಿಗೂ ಹರಡಿ ಹಬ್ಬಿತು ಹಸಿರು ಹುಚ್ಚನ್ನೆರಚಿತು...." ಎಂತಹ ಅದ್ಭುತ ಕಲ್ಪನೆ
ಸುಶೀಲಾ ರ ವಿಶೇಶ ಅಂದರೆ ಕಂಚಿನ ದನಿ. ಈ ಹಾಡು ಆ ಮಹಾಗಾಯಕಿ ಹಾಡಿದ ಹಾಡುಗಳಲ್ಲಿ ನನಗೆ ಪರಮಾಪ್ತ್ ....

೨) "ವಿರಹ ನೂರು ನೂರು "
ಚಿತ್ರ " ಎಡಕಲ್ಲು ಗುಡ್ಡದ ಮೇಲೆ..." ಈ ಹಾಡು ಬರೆದವರು ವಿಜಯನಾರಸಿಂಹ. ಸಂಗೀತ ರಂಗರಾವ್.

ಮೇಲಿನ ಗೀತೆಗೆ ಹೋಲಿಸಿದರೆ ತೀರ ವಿರುದ್ಫ ಭಾವ ಈ ಗೀತೆಯಲ್ಲಿದೆ. ಆದರೆ ಸುಶೀಲಾ ಅವರು ಗಿಏತೆಗೆ ನ್ಯಾಯ ಒದಗಿಸಿದ್ದಾರೆ
ಇದರಲ್ಲಿ ಒಂದು ಹೆಣ್ಣು ತನ್ನ ನೋವು ನಿವೆದಿಸಿಕೊಳ್ಳುತ್ತಿದ್ದಾಳೆ. "ಅಹ..ಆಹಾ ....ಅಹಾ " ಈ ಸಾಲು ಸುಶೀಲಾ ಅವರ ದನಿಯಿಂದ
ಬಂದ ರೀತಿ ಈ ಗೀತೆ ಅಮರ ಗೀತೆಯಾಗಿಸಿದೆ.

೩) " ಬಂದೇ ಬರತಾವ ಕಾಲ"
ಚಿತ್ರ "ಸ್ಪಂದನ " ರಚನೆ ಎನ್.ಎಸ್.ಎಲ್ ಭಟ್ಟ ಸಂಗೀತ; ಅಶ್ವಥ.
ಈ ಹಾಡು ಸಹ ಒರ್ವ ಹೆಣ್ಣಿನ ಭಾವನೆಗಳ ಕುರಿತಾದ್ದುದು. ಒಂದು ನಿರೀಕ್ಶೆ ಇದೆ ನಾಳೆ ತನ್ನದಾಗಿರುತ್ತದೆ ಎನ್ನುವ ಹಂಬಲ.
"ಮಾಗಿಯ ಎದೆ ತೂರಿ ಕೂಗಿತೋ ಕೋಕಿಲ " . ಒಂದು ಆಫಬೀಟ್ ಸಿನೇಮಾ ಅದು. ಸುಶೀಲಾ ಹಾಡು ಅದನ್ನು ಸದಾ
ನೆನಪಾಗಿಸುತ್ತದೆ.

೪) ಇವ ಯಾವ ಊರಿನ ಮಾವ"
ಚಿತ್ರ " ಕಾಡುಕುದುರೆ " ರಚನೆ ಕಂಬಾರ್, ಸಂಗೀತನೂ ಅವರದೇ..
ಬಹುಶ ಈ ಹಾಡು ಹಾಡಿದಾಗ ಸುಶೀಲಾ ಅವರಿಗೆ ವಯಸ್ಸು ಆಗಿರಲು ಸಾಕು. ಆದರೆ ಈ ಹಾಡಿಗೆ ಬೇಕಾದ ಮಾದಕತೆ,
ತುಂಟತನ ಜೀವಂತ ವಾಗಿವೆ. "ಹುಬ್ಬಿನ ಕುಡಿ ಹಾರಿಸುವ ...." ಸಾಲನ್ನು ಗಮನಿಸಿ.

ಮೊನ್ನೆ ಈ ಟಿವಿ ಯ "ಎದೆ ತುಂಬಿ ಹಾಡಿದೆನು" ದಲ್ಲಿ ಅವರನ್ನು ನೋಡಿದಾಗ ಮೇಲಿನ ಹಾಡು ನೆನಪಾದವು.

Rating
No votes yet

Comments