ಮರೆಯಬೇಡ ಮನವೇ, ನಿನ್ನ ಮತದ ಮಹಿಮೆಯಾ.....

ಮರೆಯಬೇಡ ಮನವೇ, ನಿನ್ನ ಮತದ ಮಹಿಮೆಯಾ.....

ಚಿತ್ರ

  ಕರ್ನಾಟಕದ ಮತದಾರ ಪ್ರಬುದ್ಧ; ಜಾಣ... ಇತ್ಯಾದಿ ಹೊಗಳಿಕೆಯ ವಿಶ್ಲೇಷಣೆ ಚುನಾವಣೆಯ ನಂತರ ಮಾಧ್ಯಮಗಳಲ್ಲಿ ಬರುವುದು ಸಹಜ. ಅದು, ನಿಜವಾಗಿ, ಅಪ್ರಬುದ್ಧ! ಅಭ್ಯರ‍್ಥಿಯ ಸೋಲು-ಗೆಲವಿನ ಗುಟ್ಟನ್ನು ಕುರಿತೂ ಬೇಕಾದಷ್ಟು ಅನುಕೂಲಸಿಂಧೂ ರೀಲ್ ಬಿಡಲಾಗುತ್ತದೆ. ಆದರೆ, ಆಡಳಿತ ನಡೆಸುವ ಅಥವಾ ಪ್ರತಿಪಕ್ಷವಾಗಿ ಅಂಕುಶ ಹಾಕಬೇಕಾಗಿರುವ ಸದಸ್ಯರುಗಳು ಜಾಣ ಮತದಾರನ ನಿಜವಾದ ಆಯ್ಕೆಯಾಗಿರುವುದಿಲ್ಲ ಎನ್ನುವುದೇ ಅಸಲಿ ಸಂಗತಿ!
 ಇದು, ಕಾಮನ್‌ಸೆನ್ಸ್ ಇರುವ ಎಲ್ಲಾ ಮತದಾನಿಗೆ ಇಷ್ಟೊತ್ತಿಗಾದರೂ ವೇದ್ಯವಾಗಿರಬೇಕಾದ ಅಂಶ. ಇಂಥವರ ಸಂಖ್ಯೆ ಇಲ್ಲವೇ ಇಲ್ವೆನ್ನುವಷ್ಟು ನಿಕೃಷ್ಟವೆನ್ನುವಂತಹ ಫಲಿತಾಂಶ ಹೊರಬರುತ್ತದೆ! ಇದೇಕೆಂದರೆ, ಜಾಣರ ಬಹುಮತವೆನ್ನುವುದು ಹರಿದು-ಹಂಚಿಹೋಗುತ್ತದೆ; ಹಣ, ಹೆಂಡ, ತೋಳ್ಬಲ, ಹುಸಿ ಆವೇಶ, ಅಪಪ್ರಚಾರಗಳಿಗೆ ತಮ್ಮನ್ನೇ ತೆತ್ತುಕೊಳ್ಳುವ ಕಡಿಮೆ ಸಂಖ್ಯೆ  ಜನತೆಯ ಪ್ರತಿನಿಧಿಗಳೇ, ಬಹುತೇಕ, ಸನ್ಮಾನ್ಯ ಶಾಸಕ ಮಹೋದಯರಾಗುತ್ತಾರೆ! ಸ್ಪೀಕರ್ ಎಂಬ ಗೌರವಾನ್ವಿತ ಹುದ್ದೆಯ ಹುಂಬತನ, ದಬ್ಬಾಳಿಕೆ; ಸಭಾಸದರೆನ್ನುವವರ ಅಸಭ್ಯ ವರ‍್ತನೆ, ಪ್ರತಿಪಕ್ಷವೆಂಬ ಅಳ್ಳಟ್ಟೆಯ ಹೊಣೆಗೇಡಿತನ - ಇತ್ಯಾದಿಗಳು ನಾಡಿನ ಬಹುಸಂಖ್ಯೆಯ ಪ್ರಜ್ಞಾವಂತ ಮತದಾರರ ಆಸೆಯ ಆಯ್ಕೆಯಾಗಿರುತ್ತದೆಯೇ?
 ನಾಡಿನಲ್ಲಿ ಬುದ್ಧಿವಂತ ಮತದಾರ ಜನತೆ ಬಹುಸಂಖ್ಯೆಯಲ್ಲಿದೆಯೇ? ಇದ್ದರೆ, ಅವರು ಪಕ್ಷೇತರರು ಮತ್ತು ಹುಸಿ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳನ್ನು ಕ್ಯಾರೆ ಎನ್ನಬಾರದು; ವ್ಯಕ್ತಿ ಯಾರಾದರಾಗಲಿ, ಪಕ್ಷದ ಕಡೆಗೇ ಕಣ್ಣಿಟ್ಟಿರಬೇಕು; ಅದರಲ್ಲೂ ಎನ್‌ಡಿಎ, ಯುಪಿಎ ಎಂಬ ಬೆರಕೆಯನ್ನೂ ಧಿಕ್ಕರಿಸಿ ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಮಾತ್ರವೇ ಒಂದನ್ನು ತೀರ್ಮಾನಿಸಬೇಕು; ತೀರ್ಮಾನದ ಪಕ್ಷ ಕಣದಲ್ಲಿಲ್ಲದಿದ್ದರೆ, ಮತದಾನದಿಂದಲೇ ಹಿಂದೆಸರಿಯಬೇಕು.
 

Rating
No votes yet

Comments

Submitted by venkatb83 Fri, 04/12/2013 - 17:53

"ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಮಾತ್ರವೇ ಒಂದನ್ನು ತೀರ್ಮಾನಿಸಬೇಕು; ತೀರ್ಮಾನದ ಪಕ್ಷ ಕಣದಲ್ಲಿಲ್ಲದಿದ್ದರೆ, ಮತದಾನದಿಂದಲೇ ಹಿಂದೆಸರಿಯಬೇಕು."

+1

ಈ ಹಾಳು ರಾಜಕೀಯ ಸಾಕಾಗಿದೆ ..!
ದಿನಕ್ಕೊಂದು ಹಗರಣ -ನಿರುದ್ಯೋಗ -ಸಮಸ್ಯೆ ,ಛೀ ಥೂ /..!!
ಇದ್ನೆಲ್ಲ ಯಾರ್ ಸರಿ ಮಾಡ್ತಾರೋ?
ಆ ಕಲ್ಕಿ ಯಾವಾಗ್ ಬರ್ತಾನೋ ..!!
ಹೀಗೆ ಬಹುಪಾಲು ನಾವೆಲ ಒಂದಲ್ಲ ಒಂದು ಸಾರಿ ಹೇಳಿಯೇ ಇರ್ತೀವಿ ...!!
ಹೀಗೆ ಹೇಳುವವರಲ್ಲಿ ಬಹುಪಾಲು ಜನ ವಿದ್ಯಾವಂತರು ಇರುವರು -ಮತದಾನ- ಅದರ ಉಪಯುಕ್ತತೆ ಅವಶ್ಯಕತೆ ಎಲ್ಲ ಗೊತಿದ್ದೂ ಮತದಾನ ಮಾಡದ ಹಲವು ಜನ ಇರುವರು ;( (

>>> ಮೊನ್ನೆ ನಾ ಕೆಲಸ ಮಾಡುವ ಆಫೀಸಿಗೆ ಹತ್ತಿರದ ಬಸ್ಸು ರೈಲು ಬುಕ್ ಮಾಡುವ ಏಜೆಂಟ್ ಹತ್ತಿರ ೫ ಜನ ಪಶ್ಹಿಮ ಬಂಗಾಳದವರು ಬಂದಿದ್ದರು -ಅವರು ಮುಂದಿನ ದಿನಗಳಲಿ ಅಲ್ಲಿ ಬರುವ ಯಾವ್ದೋ ಒಂದು ಎಲೆಕ್ಷನ್ಗೆ ಊರಿಗೆ ಹೋಗುವವರಿದ್ದರು, ಆ ದಿನ ಅಲ್ಲಿ ತಲುಪಲು ತಮ್ಮ ಮತ ಚಲಾಯಿಸಲು ಅಲ್ಲಿಗೆ ಹೋಗಬಹುದಾದ ಯಾವುದೇ ಟ್ರೇನು ಸಿಕ್ಕರೆ ತಿಳಿಸಲು ಹೇಳಿದರು , ಮಾಮೂಲಾಗಿ ಯೋಚಿಸಿದ ನಾವು ಬಹುಶ ಹಣ ಕೊಟ್ಟು ಅಲ್ಲಿ ವೋಟ್ ಹಾಕಿಸಿಕೊಳ್ಳಲು ಯಾರೋ ರಾಜಕಾರಣಿ ಪ್ರಯತ್ನಿಸಬಹುದು ಎಂದುಕೊಂಡೆವು ಆ ಬಗ್ಗೆ ಅವರಿಗೆ ಕೇಳಿದೆವು-
ಅದ್ಕೆ ಅವರು ವೋಟ್ ಹಾಕೋದು ನಮ್ಮ ಹಕ್ಕು , ನಾವ್ ಎಲಿಯೆ ಇದ್ದರೋಒ ಆ ದಿನ ಊರ್ಗೆ ಹೋಗಿ ವೋಟ್ ಹಾಕುವೆವು -ಅದ್ಕೆ ಹಣ ಏನೂ ತೆಗೆದುಕೊಳ್ಳೋದಿಲ್ಲ -ಅದರ ಅವಶ್ಯಕತೆಯೂ ನಮಗಿಲ್ಲ ಎಂದರು , ಅದೇ ಸಮಯದಲ್ಲಿ ಅಲ್ಲಿ ಕೂತಿದ್ದ ಇನ್ನೊಬ್ಬ ವಿದ್ಯಾವಂತ ಯುವಕ ನಕ್ಕು ತ ಇದ್ವರ್ಗೂ ವೋಟು ಹಾಕಿಲ್ಲ ಎಂದ ;((

ಆಗ್ಗಾಗೆ ಏನೋ ಗೊಣಗುತ್ತ ಅಸಹಾಯಕಾರಂತೆ ಮಾತಾಡುವ ಬದಲಿಗೆ ಈ ಚುನಾವಣೆಯಲ್ಲಿ ಸರತಿಯಲ್ಲಿ ನಿಂತು ಮತದಾನ ಮಾಡಿ ಯೋಗ್ಯ ಅರ್ಹರನ್ನು ಚುನಾಯಿಸುವ -

ಮತದಾನವನ್ನು ಕಡ್ಡಾಯ ಮಾಡುವ ಅವಶ್ಯಕತೆ ಇದೆ ಎನಿಸುತ್ತಿದೆ ...

ಶುಭವಾಗಲಿ ...

\।

Submitted by ಆರ್ ಕೆ ದಿವಾಕರ Sun, 04/14/2013 - 09:13

In reply to by venkatb83

ನನ್ನ ಬರಹವನ್ನೂ ಗಮನಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ವೆಂಕಟ್‌ಬಿ ಅವರೇ. ಮತದಾನ ಕಡ್ಡಾಯ ಮಾಡುವ ಕಾಯ್ದೆಯಾಗಬೇಕು. ಅದು ಬುದ್ಧಿವಮತರೆನಿಸಿಕೊಳ್ಳ ಬಯಸುವ ಎಲ್ಲರ ಸಾರ್ವಜನಿಕ ’ಜಪ’ ಆಗಿದೆ. ’ಜಪ’ ಎಂದರೆ, ಬೇರೆಯವರಿಗೆ ಕಾಣುವಂತೆ ನಾಲಗೆ-ತುಟಿ ಆಡಿಸುವುದಷ್ಟೆ, ತಾನೇ? ಅದಕ್ಕೊಂದು ಅರ್ಥವಿದೆ; ಅದನ್ನು ಮನನ ಮಾಡಬೇಕೆಂಬ ಸಂಕಲ್ಪವೇನೂ ಇಲ್ಲವಲ್ಲಾ! ಸರತಿ ಸಾಲಿನಲ್ಲಿ ನಿಲ್ಲೋಣ; ಬೆರಳ ತುದಿಗೆ ಶಾಯಿ ಹಾಕಿಸಿಕೊಳ್ಳೋಣ; ಒಳಗೆ ಹೋದ ನಂತರ ಯಾವ ಗುಂಡಿ ಒತ್ತಬೇಕು? ’ಯೋಗ್ಯ’ರಿಗೆ; ’ಅರ್ಹ’ರಿಗೆ. OK, ಅದೂ ಆಯಿತು. ವೋಟು ಹಾಕುವ ಎಲ್ಲರಿಗೆ ಅವರವರದೇ ’ಅರ್ಹರೂ, ’ಯೋಗ್ಯ’ರೂ ಇರುತ್ತಾರೆ; ಹೆಂಡ ಕುಡಿಸಿ, ಕಂತೆ ತುರಿಕಿದ ’ತಕ್ಷಣದ ’ಮಹತ್ಮ’ರೂ ಆ ಪೈಕಿ ಇರುತ್ತಾರೆ. ಯಾರು ಹೆಚ್ಚು ಕುಡಿಸುತ್ತರೊ, ಯಾರು ಹೆಚ್ಚು ಎರಚುತ್ತಾರೋ ಅವರು ಗೆಲ್ಲತ್ತಾರೆ. ಜಿದ್ದಾಜಿದ್ದಿನ ಪೈಪೋಟಿ ಎಂದರೆ ಇದೇ! ಈ ಮಾರೀಜಾತ್ರೆಯಲ್ಲಿ, ’ನಿಮ್ಮ’ ಅರ್ಹರು, ಯೋಗ್ಯರು ಎಲ್ಲಿ ಹೋಗುತ್ತಾರೆ? ವಿಧಾನಸೌಧದ ಕಾಂಪೌಂಡ್‌ ಅದರೂ ಮುಟ್ಟುವುದು ಅವರಿಂದ ಸಾಧ್ಯವಾಗುತ್ತದೆಯೇ? Right thinking ಎಂದುಕೊಳ್ಳುವ ಶೇ. 60ಕ್ಕೂ ಹೆಚ್ಚಿನ ನಮ್ಮ-ನಿಮ್ಮೆಲ್ಲರ ವೋಟಿನ ಹಣೆಪಾಡೂ ಅಷ್ಟೆ; ಹರಿದು ಹಂಚಿಹೋಗುತ್ತದೆ; ವೋಟು ಸೀಟಾಗುವುದಿಲ್ಲ. ಸೀಟು ಗಿಟ್ಟಿಸಿದವರು, ಹೂಡಿದ ಬಂಡವಾಲದ ಐದರಷ್ಟು, ಹತ್ತರಷ್ಟು ದೋಚದೆ ಬಿಡುವುದಿಲ್ಲ. ಕಷ್ಟಪಟ್ಟು ದುಡಿಯುವ ನಾವಿದೀವಲ್ಲಾ ಟ್ಯಾಕ್ಸ್‌ ಕೊಡೋಣ. ಒಂದು ದಿನ, ಈ ಪ್ರಜಾಸತ್ತೆ ದಿವಾಳಿ ಎದ್ದು, ಮುಂದೆ ಅಮೆರಿಕೆಗೋ, ಚೀಣಾಕ್ಕೊ ’ಗುಲಾಮಗಿರಿ ಟ್ಟೈಕ್ಸ್’ ಕಟ್ಟುತ್ತಾ ಚಿರ ಕಾಲ ಬದುಕೋಣ! ಜೈ ಇಂಡಿಯಾ; ಜೈ ಕರ್ನಾಟಕ!