ಮರೆವು

ಮರೆವು

ಬಹುಶ ಇದು ಯಾರನ್ನೂ ಬಿಟ್ಟಿರ್ಲಿಕ್ಕಿಲ್ಲ ಅನ್ಸತ್ತೆ.

- ಗುಂಡ ಸ್ನಾನಕ್ಕೆ ಹೋಗಿರ್ತಾನೆ, ಮುಗಿದ ತಕ್ಷಣ ಚಿಕ್ಕು/ಮೀಟರ್/ಬಾಬು ಟವಲ್ ಅಂತಾನೆ, ಅಲ್ಲಿವರೆಗೆ ಜ್ಞಾಪಕ ಇರಲ್ಲ ಪುಣ್ಯಾತ್ಮನಿಗೆ.

- ಕೈನಲ್ಲಿ ಮಗ್ ಇಟ್ಕೊಂಡು ಬಾಯಿಯಲ್ಲಿ ನೀರು ಆಡುಸ್ತಾ ನೀರು ಉಗಿಯೋದ್ರ ಬದ್ಲು ಮಗ್ ಎಸೆದಿದ್ದೆ.

- ಇನ್ನು ಕೀ, ಅದು ಮನೆ ಕೀ ಆಗ್ಲಿ ಬೈಕ್ದು ಆಗ್ಲಿ ಕಾರಿಂದು ಆಗ್ಲಿ ಅಲ್ಲಿಗೆ ಹೋದಾಗಲೇ ತುಂಬಾ ಸಲ
ಜ್ಞಾಪಕ ಬರೋದು.

- ದಿನಸಿ ಅಂಗಡಿಗೆ ಹೋಗಿ ಸಾಮಾನು ತಗೊಂಡು ಬಂದು ಮನೆಯಲ್ಲಿ ತೆಗೆದು ನೋಡಿದಾಗ
ಆಗಿನ ಅಡಿಗೆಗೆ ಮುಖ್ಯವಾಗಿರಬೇಕಾಗಿದ್ದು ಇಲ್ಲದಿರುವುದು.

- ನನ್ನ ಅಮ್ಮನ ಹತ್ರ ಮೊಬೈಲ್ನಲ್ಲಿ ಮಾತಾಡ್ತಿದ್ದೆ, ಯಾಕೋ ಇದ್ದಕ್ಕಿದ್ದ ಹಾಗೆ ೨ ಜೇಬು ತಡಕಾಡಿದೆ, ಮೊಬೈಲ್ ಇಲ್ಲ. 'ಅಮ್ಮ ತಡಿ ಸ್ವಲ್ಪ ಹೊತ್ತು ಬಿಟ್ಟು ಮಾತಾಡ್ತೀನಿ ಯಾಕೋ ಮೊಬೈಲ್ ಕಾಣ್ತಾ ಇಲ್ಲ' ಅಂತ ಕಟ್ ಮಾಡಿದಾಗ್ಲೆ ಗೊತ್ತಾಗಿದ್ದು.

 

ಮರೆವು: ನಾವು ಮರೆವನ್ನ ಮರೆಯೋದಕ್ಕೆ ಪ್ರಯತ್ನಪಟ್ರೂ ಮರೆವು ನಮ್ಮನ್ನ ಮರೆಯೋದಿಲ್ಲ :)

Rating
No votes yet

Comments