ಮಲೆನಾಡಲ್ಲೊಂದು ಅಂಗ್ಡಿ!
ಸಳ ಹೊಯ್ಸಳ ಸಾಮ್ರಾಜ್ಯದ ನಿರ್ಮಾತೃ.
ಈತ ಹುಲಿಯನ್ನು ಹೊಯ್ದು ನಿರ್ಮಿಸಿದ ಹೊಯ್ಸಳ ಸಾಮ್ರಾಜ್ಯದ ಗತ ಕಾಲವನ್ನು ನೆನಪಿಸುವ ಊರು ಈ ಉಗ್ಗೆಳ್ಳಿಅಂಗ್ಡಿ.
ಈತ ಹುಲಿಯನ್ನು ಹೊಯ್ದು ನಿರ್ಮಿಸಿದ ಹೊಯ್ಸಳ ಸಾಮ್ರಾಜ್ಯದ ಗತ ಕಾಲವನ್ನು ನೆನಪಿಸುವ ಊರು ಈ ಉಗ್ಗೆಳ್ಳಿಅಂಗ್ಡಿ.
ಅಂಗಡಿಗೆ ಅಂದಿದ್ದ ಹೆಸರು ಸೊಸೆಊರು ಅಂಥ.
ಇಂದು ಅದು ಉಗ್ಗೆಳ್ಳಿ ಅಂಗ್ಡಿ, ಇದೇ ಹಳೆಯ ಹೊಯ್ಸಳ ರಾಜದಾನಿ.
ಮುಂದೆ ರಾಜದಾನಿ ಬೇಲೂರಿಗೆ ಶಿಫ್ಟ್ ಆಗಿತ್ತಷ್ಟೆ!
ಇವತ್ತಿನ ಅಂಗಡಿ ಹಳೆಯ ಸೊಸೆಊರಿನಂತಿಲ್ಲ. ಇಲ್ಲಿ ಇಂದು ಕಾಣಸಿಗುವುದು ಅಳಿದುಳಿದ ದೇವಾಲಯಗಳು, ಅಸ್ಪಷ್ಟ ಶಾಸನಗಳು, ಶಿಥಿಲಗೊಂಡ ಶಿಲ್ಪಗಳು. ನಿಮಗೆ ಗತ ವೈಭವದ ಮೆಲುಕು ಹಾಕಲು ಬೇಕಿದ್ದಲ್ಲಿ ಸ್ವಲ್ಪ ವರ್ಕ್ ಅವ್ಟ್ ಮಾಡ್ಬೇಕಾಗಬಹುದು. ತಂಪಾದ ಕಾಫಿತೋಟದೊಳಗೆ ನುಸುಳಿ, ತಲೆಗೆ ಮಡ್ಡೆ ಹೊಡೆಯದಂತೆ ಬಗ್ಗಿಕೊಂಡು ಸಂಚರಿಸಿ ಅಲ್ಲಿಲ್ಲಿ ಹಂಚಿಹೋಗಿರುವ ಶಾಸನಗಳ ಮತಿಸಬೇಕಾಗಬಹುದು. ಇದರಲ್ಲೂ ಒಂದು ತೃಪ್ತಿ ಇದೆ ಅಲ್ವಾ?.
ಅಂಗಡಿಗೆ ಬೇಟಿ ಇತ್ತವರಿಗೆ ಮನ ವರಿಕೆಯಾಗುವ ಪ್ರಮುಖ ವಿಷಯ ಇಲ್ಲಿಯ ಜನರ ಸರಳ ಸಜ್ಜನಿಕೆ, ಇನ್ನೂ ಮಾಸದ ಈ ಮಣ್ಣಿನ ಕ್ಷಾತ್ರ ತೇಜ, ಮಲೆನಾಡ ಸುಂದರ ಪರಿಸರ.
ಮುಂದೊದು ದಿನ ನೀವು ಬೇಲೂರಿಗೆ ಬಂದಲ್ಲಿ ಅಂಗಡಿಗೆ ಬರಲು ಮರೆಯಬೇಡಿ. ಬೇಲೂರು ಇವತ್ತಿನ ಬೆಂಗಳೂರು ಅಂದ್ಕೊಂಡ್ರೆ ಅಂಗ್ಡಿ ಅಂದಿನ ಮೈಸೂರು!
ಅಂಗಡಿ ತಲುಪುವುದು ಹೇಗೆ?
ಮಂಗಳೂರಿಂದ ಬರುವವರಿಗೆ
ಚಾರ್ಮಾಡಿ->ಕೊಟ್ಟಿಗೆ ಹಾರ->ಮೂಡಿಗೆರೆ-> ಜೆನ್ನಾಪುರ->ಅಂಗ್ಡಿ.
ಬೆಂಗಳೂರಿಂದ ಬರುವವರಿಗೆ
ಹಾಸನ -> ಬೇಲೂರು ->ಮೂಡಿಗೆರೆ (ಜೆನ್ನಾಪುರ)->ಅಂಗ್ಡಿ.
ಶ್ರೀ ಆದಿ ಶಕ್ತಿ ವಸಂತ ಪರಮೇಶ್ವರಿ ದೇವಸ್ಥಾನ ಅಂಗಡಿ
ಮೊದಲಿಗೆ ತಾಯಿ ವಸಂತ ಪರಮೇಶ್ವರಿ ದರ್ಶನ
ಗುಡಿಯೊಳಗೆ ತೋರುವ ಶಿವಲಿಂಗ
ಶ್ರೀ ತ್ರೀ ತೀರ್ಥಂಕರ ಬಸದಿ
ಚೆನ್ನಕೇಶವ ಸ್ವಾಮಿ
ಭಗವಾನ್ ಮಹಾವೀರ
ದೇವಾಲಯಗಳ ಹಿಂಬದಿಯ ಕೆತ್ತನೆಗಳು ಕಂಡದ್ದು ಹೀಗೆ
ಕಾಫಿ ತೋಟದೊಳಗಿರುವ ದೇವಾಲಯಗಳಿಗೆ ಹತ್ತಿಬರಲು ಮೆಟ್ಟಿಲುಗಳು
ನವೀಕರಿಸಲ್ಪಡುತ್ತಿರುವ ದೇವಾಲಯಗಳು
ದೂರದಲ್ಲಿ ನಿಂತು ದಿಟ್ಟಿಸಿದಾಗ
ಇದು ನನ್ನ್ ತಂಗಿ ಕ್ಲಿಕ್ಕಿಸಿದ ಸುಂದರ ಚಿತ್ರ...
Back to Home…ಆಗ್ಲೆ ಸಂಜೆಯಾಗಿದೆ.
Rating
Comments
ಶಿವಮೊಗ್ಗದ ಹತ್ತಿರ ಇರುವ
ಶಿವಮೊಗ್ಗದ ಹತ್ತಿರ ಇರುವ ಅ0ಗಡಿಯ ಮೂಲ ಹೆಸರು ಹುಸೇನ್ ಗಡ ಅದನ್ನು ಹೈದರ್ ಆಲಿ ಇಟ್ಟಿದ್ದ0ತೆ ಅದೇ ರೀತಿ ಈ ಉಗ್ಗಳ್ಳಿ ಅ0ಗಡಿಯೂ ಸಹ ಯಾವುದಾದರೂ ನಡುವೆ ಆ ಪ್ರದೇಶವನ್ನು ಆಕ್ರಮಿಸಿದವರು ಇಟ್ಟ ಹೆಸರಾ?
ಒಳ್ಳೆಯ ಪೋಟೋ ಹಾಗು ಸ್ಥಳ ಮಾಹಿತಿಗಾಗಿ ಧನ್ಯವಾದಗಳು, ವಿದ್ಯಾಕುಮಾರ್ ಅವರೆ.