ಮಲ್ಲಿಗೆಯ ಬಳ್ಳಿಯೂ, ಮುಳ್ಳು ಬೇಲಿಯೂ.

ಮಲ್ಲಿಗೆಯ ಬಳ್ಳಿಯೂ, ಮುಳ್ಳು ಬೇಲಿಯೂ.

 ಮಲ್ಲಿಗೆಯ ಬಳ್ಳಿಯೊಂದು ಮುಳ್ಳುಬೇಲಿಯ ಜೋಡಿ, ಬೇಕಾದಾಗ ಸೀಟು ಸಿಗದ ನಗರ ಸಾರಿಗೆಯ ಬಸ್ಸು ಹತ್ತಬೇಕಾಯಿತು.  ಎಳ್ಳು ಸಿಡಿಸಿದರೆ ನೆಲ ಕಾಣದಷ್ಟು ಜನ ತುಂಬಿದ ಬಸ್ಸಿನಲ್ಲಿ, ಹೇಗೋ ಈ ಜೋಡಿ ನಿಲ್ಲುವಷ್ಟು ಜಾಗ ಹೊಂದಿಸಿಕೊಂಡರು.

ಹೆಂಗಸರ ಸೀಟಿನ ಮಧ್ಯೆ ಮಲ್ಲಿಗೆಯ ಬಳ್ಳಿಯನ್ನು ಸೇರಿಸಿದ ಮುಳ್ಳುಬೇಲಿ, ತನ್ನೆರಡೂ ಕೈಗಳನ್ನೂ ಚಾಚಿ ಸೀಟುಗಳ ಹಿಡಿಕೆಯಿಡಿದು, ಮಲ್ಲಿಗೆಯ ಬಳ್ಳಿಯ ರಕ್ಷಣೆಗೆಂಬಂತೆ ನಿಂತ.

ಮಲ್ಲಿಗೆ ಬಳ್ಳಿ ಮಾತಾಡಿತು. "ನಾನೇನು ಓಡಿ ಹೋಗುತ್ತೀನಾ..?"
 
ಮುಳ್ಳುಬೇಲಿ ರಕ್ಷಣೆಯ ಕೈ ತೆಗೆದುಬಿಟ್ಟಿತು.
 
ಪಯಣ ಮುಗಿದು ಬಸ್ಸು ಇಳಿಯುವವರೆಗೂ ಮಲ್ಲಿಗೆಯ ಬಳ್ಳಿ ಮುಳ್ಳುಬೇಲಿ ಜೊತೆಯಾಗೇ ಇದ್ದುವು.
 
Rating
No votes yet