ಮಳೆಗಾಲದ ಅಗಲಿಕೆ

ಮಳೆಗಾಲದ ಅಗಲಿಕೆ


ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ
ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;
 
ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು
ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!
 
ಎಂತು ಕಳೆವರು ಮಳೆಯ ದಿನಗಳನಯ್ಯೋ ಒಲವಲಿ ಬಿದ್ದ
ಸೊಗಸಿನ ಕಣ್ಣೆವೆಯ ಮುಗುದೆಯರು ನಲ್ಲನಗಲಿಕೆಯಲಿ?
 
 
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):
 
ಇತೋ ವಿದ್ಯುದ್ವಲ್ಲೀ ವಿಲಸಿತಂ ಇತಃ ಕೇತಕೀತರೋಃ
ಸ್ಫುರನ್ಗಂಧಃ ಪ್ರೋದ್ಯಜ್ಜಲದ ನಿನದ ಸ್ಫೂರ್ಜಿತಂ ಇತಃ |
ಇತಃ ಕೇಕೀಕ್ರೀಡಾ ಕಲಕಲರವಃ ಪಕ್ಷ್ಮಲದೃಶಾಂ
ಕಥಂ ಯಾಸ್ಯಂತ್ಯೇತೇ ವಿರಹ ದಿವಸಾಃ ಸಂಭೃತರಸಾಃ ||
 
-ಹಂಸಾನಂದಿ
 
ಕೊ:  ಮೂಲದಲ್ಲಿ  ಒಂದೂವರೆ ಪಾದದಲ್ಲಿರುವ ಅಂಶವನ್ನು ಅನುವಾದದಲ್ಲಿ ಎರಡು ಸಾಲಾಗಿ ಹಿಗ್ಗಿಸಿರುವುದರಿಂದ, ಅಲ್ಲಿ ಇಲ್ಲದ ಕೆಲವು ಪದಗಳು ಬಂದಿವೆಯಾದರೂ, ಅದು ಅರ್ಥಕ್ಕೆ ಪೂರಕವಾಗಿದೆಯೆಂದು ಹಾಗೇ ಉಳಿಸಿದೆ.
Rating
No votes yet