ಮಳೆಗಾಲದ ನೆನಪುಗಳು
ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಆದ್ರೂ ಕೂಡ ನೆನಪುಗಳು ಅದರಲ್ಲೂ ಬಾಲ್ಯದ ನೆನಪುಗಳು ಮಧುರಾನುಭವ ನೀಡುವುದು ಸುಳ್ಳಲ್ಲ. ಒಬ್ಬ ಮನುಷ್ಯನಿಗೆ ನೆನಪುಗಳು ಮರುಕಳಿಸೋದಕ್ಕೆ ಕಾಲ ಸಮಯಗಳ ಪರಿಮಿತಿಯಿಲ್ಲ, ಹೀಗಿದ್ದರೂ ನನ್ನ ಪಾಲಿಗೆ ಮಳೆಗಾಲ ನೆನಪುಗಳ ಆಗರ, ಅದರಲ್ಲೂ ನನ್ನ ಬಾಲ್ಯದ ನೆನಪುಗಳು, ಅನುಭವಗಳು ಅದ್ಭುತ ಅನನ್ಯ.
ನಾನು ನಾಲ್ಕನೇ ತರಗತಿಯವರೆಗೆ ಓದಿದ್ದು ನಮ್ಮ ಊರಿನ ಸರಕಾರಿ ಶಾಲೆಯಲ್ಲಿ. ನಾನು ಮತ್ತು ಗೆಳೆಯ ಸೌಕತ್ ಆಲಿ ಮಳೆಗಾಲದ ಸಂಜೆ ಶಾಲೆಯಿಂದ ವಾಪಾಸು ಬರಬೇಕಾದರೆ ಮಣ್ಣಿನ ರಸ್ತೆಯುದ್ದಕ್ಕೂ ಹರಿಯುತ್ತಿದ್ದ ಅತೀ ಸಣ್ಣ ನೀರಿನ ತೊರೆಗಳಿಗೆ ಕಲ್ಲು ಇಟ್ಟು ನೀರು ಇನ್ನೊಂದು ದಿಕ್ಕಿನಲ್ಲಿ ಹರಿಯುವಂತೆ ಮಾಡಿದ್ದು, ಅಲ್ಲಲ್ಲಿ ನಿಂತ ನೀರನ್ನು ತೊರೆಗೆ ಹೋಗಲು ದಾರಿ ಮಾಡಿಕೊಟ್ಟಿದ್ದು, ತೊರೆಯಲ್ಲಿ ಹೋಗುತ್ತಿದ್ದ ನೀರಿನಲ್ಲಿ ಚಪ್ಪಲಿ ಬಿಟ್ಟು ಇನ್ನೊಂದೆಡೆಯಲ್ಲಿ ಹಿಡಿಯುತ್ತಿದ್ದ ಆಟಗಳು ಮರೆಯಲಾಗದು ಹಾಗೇ ಎಲ್ಲವನ್ನು ಇಲ್ಲಿ ಬರೆಯಲೂ ಸಾಧ್ಯವಾಗದು.
ನಾನು ನನ್ನ ಗೆಳೆಯರು ಮನೆ ಹತ್ತಿರದ ಸಣ್ಣ ಗುಡ್ಡದ ಮೇಲೆ ಹತ್ತಿ ಕೈಗೆ ಸಿಕ್ಕಿದ ವಸ್ತುಗಳಿಂದ ನೆಲ ಅಗೆದು ಗುಂಡಿ ತೆಗೆದು, ಅದರಲ್ಲಿ ಮಳೆ ನೀರು ನಿಂತು ಸಣ್ಣ ಕೆರೆ ರಚನೆ ಆದಾಗಲಂತೂ ನಮ್ಮ ಸಂಭ್ರಮ ಯಾವ ವಿಜ್ಞಾನಿಗೂ ಕಡಿಮೆಯಿರಲಿಲ್ಲ. ಅದೇ ಕೆರೆಯಲ್ಲಿ ತೋಟದ ಕೆರೆಯಿಂದ ಹಿಡಿದು ತಂದ ಮೀನು ಬಿಟ್ಟಿದ್ದು ಹೀಗೆ ಪಟ್ಟಿ ಮುಂದುವರಿಯುತ್ತದೆ. ಇದರ ಬಗ್ಗೆ ಮುಂದೊಂದು ದಿನ ವಿವರವಾಗಿ ಬರೆಯುತ್ತೇನೆ.. ಇವತ್ತಿನ ಗಾಳಿ ಮಳೆಗೆ ನೆನಪಾದದ್ದನ್ನು ಇಲ್ಲಿ ಗೀಚಿದ್ದೇನೆ....
Comments
ಉ: ಮಳೆಗಾಲದ ನೆನಪುಗಳು
ಈ ಲೇಖನ ಓದುವಾಗ ನನ್ನ ಬಾಲ್ಯದ ನೆನಪು ಮಾಡಿಕೋಂಡೆ,ಕೆಲಸದ ಮಧ್ಯೆ ಸಮಯವಿಲ್ಲದ ನಮಗೆ ಇಂತಹ ಲೇಖನ ಓದಿದಾಗ ತನ್ತಾನೆ ನೆನಪಾಗುತ್ತೆ ಚೆನ್ನಾಗಿದೆ....