ಮಳೆ ನಿಂತು ಹೋದ ಮೇಲೆ..

ಮಳೆ ನಿಂತು ಹೋದ ಮೇಲೆ..

"ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ..
ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ..
ಹೇಳುವುದು ಏನೋ ಉಳಿದು ಹೋಗಿದೆ..
ಹೇಳಲಿ ಹೇಗೆ ತಿಳಿಯದಾಗಿದೆ.."

ಈ ಸಾಲುಗಳನ್ನ ಕೇಳ್ತಾ ಇದ್ದ್ರೆ ..ಜೀವನದಲ್ಲಿ ನಾವು ಇನ್ಥ ಪರಿಸ್ಥಿತಿನಲ್ಲಿ ಎಷ್ಟು ಸಲ ಇದ್ದ್ವಿ ಅಂಥ ಅನ್ಸುತ್ತೆ ಅಲ್ವ?..ಯಾರಿಗೋ ಈ ವಿಷಯನ ಹೇಳ್ಬೇಕು ಅಂಥ ಅನ್ಕೋನ್ಡಿರ್ತಿವಿ..ಆದ್ದ್ರೆ ಆಮೇಲೆ ಅವ್ರು ಇರಲ್ಲ ಇಲ್ಲ ಯಾರಿಗೂ ಕಾಯ್ದೆ ಇರೋ ಸಮಯ ತುಂಬ ದೂರ ಹೊಗ್ಬಿಟ್ಟುರುತ್ತೆ..ಆ ಪದಗಳು ಅರ್ಥ ಕಳೆದುಕೊಂಡಿರುತ್ತವೆ.

ಮುಂದೆ ಹೀಗೆ ಹೇಳ್ತಾರೆ:
"ಕಣ್ಣು ತೆರೆದು ಕಾಣೋ ಕನಸೇ ಜೀವನ..
ಸಣ್ಣ ಹಟವ ಮಾಡಿದೆ ಹ್ರದಯ ಈ ದಿನ.."

ಯಾವ್ದೋ ಗುಂಗಿನಲ್ಲಿ ಕಳೆದು ಹೋಗೋಕೆ ಇಂಥ ಮಾಧುರ್ಯಪೂರ್ಣ ಹಾಡುಗಳು ಸಾಕಲ್ವಾ? ಹಂಗಾದ್ದ್ರೆ ಇದರ ಶ್ರೇಯ ಜಯಂತ ಕಾಯ್ಕಿಣಿ ಅವ್ರಿಗೂ ಸಲ್ಲಬೇಕು.ಈ ಹಾದುಗಳು ಸದ್ಯಾನೆ ಬಿಡುಗಡೆ ಆಗೋ "ಮಿಲನ" ಚಿತ್ರದ್ದು.ಹಾದುಗಳನ್ನ ಕೇಳಿ.ಮತ್ತೊಮ್ಮೆ ಕೆಳ್ಬೇಕು ಅಂಥ ಖಂಡಿತ ಅನ್ಸುತ್ತೆ.

ಇತ್ತಿಚೆಗೆ ಕನ್ನಡ ಚಿತ್ರಗಳಲ್ಲಿ ಮಾಧುರ್ಯಪೂರ್ಣ,ಅರ್ಥಗರ್ಭಿತ ಹಾದುಗಳ ಸಂಖ್ಯೆ ಜಾಸ್ತಿ ಆಗಿದ್ದ್ರೆ ಅದ್ರಲ್ಲಿ ಜಯಂತ್ ಪಾತ್ರಾನೂ ಇದೆ.ಸಾಹಿತ್ಯಕ ಹಿನ್ನೆಲೆಯಿಂದ ಬಂದ ಜಯಂತ್ ಕತೆಗಳು,ಸಂಕಲನಗಳನ್ನ (ಉದಾ:ತೂಫಾನ್ ಮೇಲ್) ಓದಿದ್ರೆ ಗೊತ್ತಾಗುತ್ತೆ ಅವ್ರ ಬರಹಗಳು ಜನಸಾಮಾನ್ಯರ ಆಗುಹೋಗುಗಳ ಹತ್ರಾನೇ ಸುಳಿತಾ ಇರುತ್ತೆ. ಅವ್ರ ಗೀತರಚನೆಗಳನ್ನ ಕೇಳ್ದ್ರು ಹಾಗೆ ಅನ್ಸುತ್ತೆ.ಚಿತ್ರರಂಗದ ಕಟ್ಟುಪಾಡುಗಳಿದ್ದಾಗ್ಯೂ ಜಯಂತ್ ಇನ್ನಾ ಸಂಪೂರ್ಣವಾಗಿ ರಾಜಿ ಆಗಿಲ್ಲ ಅನ್ನೊದಿಕ್ಕೆ ಮೇಲಿನ ಹಾಡುಗಳೇ ಸಾಕ್ಷಿ.

ಜಯಂತ್ ಲೇಖನಿಯಿಂದ,ಹಾಗೇನೆ ಬೇರೆಲ್ಲ ಗೀತರಚನೆಕಾರರಿಂದ ಇನ್ನಷ್ತು ಮಧುರ ಹಾಡುಗಳನ್ನ ಕೇಳುವ ಅವಕಾಶ ನಮ್ಗೆಲ್ಲಾ ಸಿಗಲಿ ಅಂಥ ಆಶಿಸುತ್ತ ಇತ್ತಿಚೀಗೆ ವಿಭಿನ್ನ,ಉತ್ತಮ ಅಭಿರುಚಿಯ ಕನ್ನಡ ಚಿತ್ರಗಳು ಬರ್ತಾ ಇದ್ದ್ರೂ ಕನ್ನ್ದಡ ಚಿತ್ರಗಳೆಂದರೆ ಮೂಗು ಮುರಿಯೋ ಕನ್ನಡದ್ದೇ ಮಿತ್ರರಿಗೆ ( ನನ್ನ ಕೆಲವು ಸನ್ಮಿತ್ರರು ಇದ್ದಾರೆ!! ) ಜ್ನಾನೋದಯ ಆಗಲಿ ಅಂಥ ಹಾರೈಸುತ್ತಾ..
ಬರ್ತಿನಿ...ಯಾಕೋ ಸೋನು ನಿಗಮ್ ದನಿ ಕಾಡ್ತಾ ಇದೆ..

Rating
No votes yet

Comments