"ಮಳೆ "

Submitted by ravindra n angadi on Sat, 08/23/2014 - 14:00
ಚಿತ್ರ

ಮುತ್ತಿನ ಮಣಿಯಂತೆ ಹನಿ ಹನಿಯಾಗಿ ಸುರಿವ ಮಳೆ 

ಮನಸ್ಸಿಗೆ ಮುದನೀಡುವ ಮುತ್ತಿನಂತಹ ಮಳೆ

ನಿನ್ನಿಂದ ತಾನೆ ಭೂಮಿಗೆ ಒಂದು ಹೊಸ ಕಳೆ

 ನಿನ್ನ ಒಂದೂಂದು ಹನಿಯಿಂದ ಜೀವಿಗೆ ಹರುಷದ ಹೊಳೆ

 

ನಿನ್ನ ಬರುವಿಕೆಗೆ ಕಾಯುತ್ತಿರುತ್ತದೆ ನಮ್ಮ ಮನ

ನಿನ್ನ ಒಂದು ಹನಿಯಿಂದ ಎಲ್ಲರ ಜೀವನ ಪಾವನ

ನಿನ್ನ ವರ್ಷಧಾರೆಯಿಂದ ಭೂಮಿ ನಂದನವನ

ನಿನ್ನ ಸೌಂದರ್ಯ ನೋಡಲು ಸಾಲದು ಎರಡು ನಯನ

 

 ವರ್ಷಧಾರೆಯಿಂದ  ಉಟ್ಟಳು ಧರಿತ್ರಿ ಹಸಿರು ಸೀರೆಯ

 ಮೈದುಂಬಿ ಹರಿದವು ಹೊಳೆ-ನದಿ ಸರೋವರ

ಜಲಪಾತಗಳ ನರ್ತನ ರಮ್ಯ-ರಮಣೀಯ

ನಿನ್ನಿಂದ ಹೆಚ್ಚಾಯಿತು ನಿಸರ್ಗದ ಸೌಂದರ್ಯ

 

ಪ್ರತಿ ಜೀವಿಗೂ ಬೇಕು ನಿನ್ನ  ಒಂದೊಂದು ಹನಿ ತಾನೆ

ನೀ ಬರದಿರೆ ಈ ಭೂಮಿ ಆಗುವುದು ಬರಡು ತಾನೆ  

ನೀ ಬಂದರೆ ಅರಳುವುದು ಪ್ರತಿಯೊಬ್ಬರ ಮನ  

 ಎಂದಿಗೂ ಮರೆಯದಿರು ಭೂಮಿಗೆ ಮಳೆ ಸುರಿಸುವುದನ್ನ

 

 ಭೂಮಿಯ ಪ್ರತಿಯೊಂದು ಜೀವಿಗೂ ಮಳೆಯೇ ಆಧಾರ

ನೀ ಒಲಿದರೆ ರೈತರ ಬಾಳು ಆಗುವುದು ಬಂಗಾರ

 ಮಳೆಯೇ ನಿನ್ನಿಂದ ತೊಳೆಯುವುದು ಜಗದ ಕೊಳೆ

 ಈ ರೀತಿ ನಾವು ತೊಲಗಿಸಬೇಕು ಮನಸ್ಸಿನ ಕೊಳೆ.

 

Rating
No votes yet

Comments

H A Patil

Mon, 08/25/2014 - 21:06

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
'ಮಳೆ' ಕವನ ಚೆನ್ನಾಗಿ ಮೂಡಿ ಬಂದಿದೆ, ಮಳೆಯ ಅನಿವಾರ್ಯತೆ ಅದು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಪರಿಯನ್ನು ಸರಳವಾಗಿ ಸುಂದರವಾಗಿ ಕಟ್ಟಿ ಕೊಟ್ಟಿದ್ದೀರಿ, ಅಂತ್ಯ ಪ್ರಾಸವನ್ನು ಒಂದರಡು ಕಡೆ ಬಿಟ್ಟರೆ ಉಳಿದೆಡೆ ಚೆನ್ನಾಗಿ ಬಳಸಿದ್ದೀರಿ, ಧನ್ಯವಾದಗಳು.

ನಮಸ್ಕಾರ ಸರ್
ನಿಮ್ಮ ಮೆಚ್ಚುಗಿಗೆ ಧನ್ಯವಾದಗಳು ಪ್ರಾಸದ ಬಗ್ಗೆ ಹೆಚ್ಚಿನ ಗಮನ ಕೊಡುತ್ತೇನೆ ಸರ್
ಧನ್ಯವಾದಗಳು .