ಮಳೆ

ಮಳೆ

ಹೋದ ವರ್ಷ ನಾವು ಮನೆ ರಿಪೇರಿ ಮಾಡಿಸಿದೆವು. ರೂಫ್ ಕೂಡ ರಿಪೇರಿ ಮಾಡಿಸಿದೆವು. ರೂಫ್ ಮೇಲಿನ ಸುರ್‍ಕಿ ತೆಗೆದು ಹಾಕಿದ್ದರು ಮಳೆ ಹಿಡಿಯಿತು ನೋಡಿ ಅಬ್ಬ! ಮನೆ ಪೂರ್ತಿ ನೀರು ಬಕೆಟ್ನಲ್ಲಿ ತೆಗೆತಗೆದು ಹೊರಗೆ ಹಾಕಿದರೂ ಕಾಲು ಮುಳುಗುವಷ್ಟು ನೀರು ಅಡಿಗೆ ಮನೆಯಲ್ಲಿ(ಸಿಮೆಂಟ್ ಜೋಡಿಸಿದ್ದಲ್ಲಿ), ರಾತ್ರಿ ಮಲಗಲೂ ಜಾಗವಿಲ್ಲ ಆದರೂ ಹಾಗೆ ಸವರಿಸಿಕೊಂಡು ನೆನೆದ ಹಾಸಿಗೆಯಲ್ಲೆ ಮಲಗಿದೆವು. ತಮಾಷೆಯೆಂದರೆ ಮನೆಯಲ್ಲಿ ಸುಮಾರು ೫೦ ಮೂಟೆಯಷ್ಟು ಸಿಮೆಂಟ್ ಇತ್ತು, ನಾಲ್ಕು ಇಟ್ಟಿಗೆ ಜೋಡಿಸಿ ಅದರ ಮೇಲೆ ಸಿಮೆಂಟ್ ಮೂಟೆ ಜೋಡಿಸಿಟ್ಟಿದ್ದರು. ಸಿಮೆಂಟ್ಗೆ ಮಾತ್ರ ಒಂದು ಹನಿ ನೀರೂ ತಾಗಿರಲಿಲ್ಲ. ನಿಜವಾಗಿ ನಮ್ಮ ಅದೃಷ್ಟ ಚೆನ್ನಾಗಿತ್ತು ಒಂದು ಮೂಟೆ ಸಿಮೆಂಟೂ ಹಾಳಾಗಲಿಲ್ಲ. ಮಳೆ ಬಂದರೂ ನಮ್ಮ ಪಾಲಿಗೆ ತೊಂದರೆ ತರಲಿಲ್ಲ ಹ್ಯಾಟ್ಸ್ ಆಫ್ ಟು ಮಳೆ. ಮಳೆ ನೋಡಿದಾಗಲೆಲ್ಲ ಇದರ ನೆನಪಿನೊಂದಿಗೆ ಭಯವಾದರೂ ಲುಕ್ಸಾನು ಆಗಲಿಲ್ಲವಲ್ಲ ಸಧ್ಯ ಎಂಬ ಸಮಾಧಾನ ಕೂಡ ಆಗುತ್ತೆ.

Rating
No votes yet