ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!


(೨೫೨) ನಿಮಗೊಂದು ಮಹತ್ವಾಕಾಂಕ್ಷೆ ಇಲ್ಲದಿದ್ದಲ್ಲಿ ನೀವು ಕನಸು ಕಾಣಲಾರಿರಿ. ಮಹತ್ವಾಕಾಂಕ್ಷೆ ಇದ್ದರೂ ಕನಸು ಕಾಣಲಾರಿರಿ. ಏಕೆಂದರೆ ಆಗ ನಿಮಗೆ ನಿದ್ರೆಯೇ ಬರುವುದಿಲ್ಲವಲ್ಲ!


(೨೫೩) ಎರಡು ಸಂದರ್ಭಗಳಲ್ಲಿ ಇತರರು ನಮ್ಮನ್ನು ನಾವು ಇರುವಂತೆಯೇ ಸ್ವೀಕರಿಸಲಾರರು--(೧) ಬದುಕಿದ್ದಾಗ, "ಯಾಕಾದರೂ ಬದುಕಿದ್ದಾನೀತ" ಎನ್ನುತ್ತಾರೆ. (೨) ಸತ್ತಾಗ, "ಸಾಯಬಾರದಾಗಿತ್ತು ಈತ", ಎನ್ನುತ್ತಾರೆ!


(೨೫೪) ದೇಹದ ವೈಯಕ್ತಿಕ ನಡೆನುಡಿಯ ಬಹಿರ್ಮುಖಿ ಬಯಕೆಯನ್ನು ’ಪೋರ್ನೋ‍ಗ್ರಫಿ’ ಎನ್ನುತ್ತೇವೆ, ಬಹಿರಂಗ ನಡವಳಿಕೆಯ ವೈಯಕ್ತಿಕ ನಿಯಮಾವಳಿಯನ್ನು ’ನೈತಿಕತೆ’ ಎನ್ನುತ್ತೇವೆ!


(೨೫೫) ಭೌಗೋಳಿಕರಣ ಅನಿವಾರ್ಯ ಏಕೆಂದರೆ ಎಲ್ಲೆಡೆ, ಎಲ್ಲ ಕಾಲಕ್ಕೂ ಎಲ್ಲ ಜಾತಿ, ವರ್ಗ, ಕುಲ, ಮತದವರೂ ತಮ್ಮ ಕಾಲುಗಳನ್ನು ಬಳಸಿಯೇ ನಡೆದಾಡುವುದು!

Rating
No votes yet