ಮಹಾತುಂಟ

ಮಹಾತುಂಟ

ಎಲ್ಲರಂತಲ್ಲ ಇವ ಬಲು ಮೊದ್ದು ,

ಮುದ್ದು....

ಯಾರೂ ಇಲ್ಲದಾಗ ಬಂದು ಮುದ್ದಿಸುವ

ಕದ್ದು ,ಕದ್ದು ....

ಮುಗ್ದ ಕಂಗಳ ತೆರೆದು , ಮುಖದಿ

ಮುಗುಳುನಗೆಯ ಸೂಸಿ ..

ಬರುವಾಗ ಈ ಪೋರ ಬಲು ಎಚ್ಚರ

ಮೊಸರು ಕಡೆವಾಗಲಂತೂ ಉಸಿರಾಡದೆ ಬರುವ

ಬದಿಗಿಟ್ಟ ಬೆಣ್ಣೆಯೆಲ್ಲ ಖಾಲಿ ....

ಇವಗೆ ಇದೊಂದು ಖಯಾಲಿ !

ಕಳ್ಳ ಪೋರ, ಹೃದಯ ಚೋರ

ಛಲವಿರಿಸಿ ಹಿಡಿದರೂ ಕಪಟತೆಯ

ಇವನು ಅದಕೂ ಮಾಡುವ ಮೋಡಿ

ಯಾರೂ ನಂಬರು ಇವನ ಮೇಲೆ

ಹೇಳಿದ ದೂರು ,ಚಾಡಿ .

ಗೋಪಿಕೆಯರ ಗೋಳು ನೋಡಿ

ನಕ್ಕಿತು ಸುಧಾಮ ,ಕೃಷ್ಣರ ಜೋಡಿ .

ಕಣ್ಣು ತಪ್ಪಿಸಿ ಇವನ ಬೆಣ್ಣೆ ಮಾರಲುಂಟೆ,

ಅಯ್ಯೋ ಹಾದಿ ಮದ್ಯವೇ ತಡೆವ

ಇವನ ತಂಡ ,ಮಹಾಪುಂಡ

ಸೆರಗು ಎಳೆವನು ಮೂಡಿಸಿ ಮುಖದಿ

ಮಂದಹಾಸ , ಗೋಪಿಕೆಯರು

ಹುಸಿಮುನಿಸು ತೋರಿಸಿ ಗದರುವರು

ಬೇಡ ನಿನ್ನ ಸಹವಾಸ .

ಒಳಗೊಳಗೇ ಕೊರಗುವರು ನೆನೆದು

ಯಶೋದೆಗೆ ದೊರೆತ ಲೇಸ.

ದೂರುವರು ಗೋಪಿಯರು ತಾಯೀ

ಯಶೋದೆಯ ಬಳಿ ವರ್ಣಿಸಿ

ಇವನ ಅತಿಕೆಟ್ಟ ಚಾಳಿ..

ಮಜ್ಜನಕೆ ಹೋದಾಗಲೂ ಬಿಡದೆ

ಹೊತ್ತೊಯ್ದು ಅರಿವೆಯ ಗಂಟು

ಕಾಡಿಸುವುದೂ ಉಂಟು .

ಕುಪಿತ ಯಶೋದೆ ಒಮ್ಮೊಮ್ಮೆ ಶಿಕ್ಷಿಸಿದರೂ

ಇವಗೆ ಸಾಲುವುದೇ ಹೇಳಿ

ಎಲ್ಲ ಇವನಿಂದಲೇ ಕಾಕತಾಳಿ.

ಇವನ ಆಟಕ್ಕೆ ಮಿತಿಯುಂಟೆ

ಅಬ್ಬಬ್ಬ ಕಿರುಬೆರಳಿನಲಿ ಬೆಟ್ಟವೆತ್ತಿದ,

ಆದಿಶೇಷನ ಹೆಡೆಯ ಮೆಟ್ಟಿದ ,

ಭಲಿರೆ ಬಾಯೊಳು ಬ್ರಮ್ಮಾಂಡ ತೋರಿದ

ವಿಷವುಣಿಸಿದ ಪೂತನಿಗೆ ಸಾವುಣಿಸಿದ

ಮಾವ ಕಂಸನ ಕೊಂದು, ಮಾತೆಗೆ ಬಂಧನವ ಬಿಡಿಸಿದ

ಹದಿನಾರು ಸಾವಿರ ಕನ್ಯೆಯರ ವರಿಸಿದ

ಮಹಾತುಂಟ.....

ಇವನು ತೋರಿದ ಮಹಿಮೆಗೆ

ಮಿತಿಯುಂಟ.........?

ರಾಘವೇಂದ್ರ ಆಚಾರ್

Rating
No votes yet