ಮಹಾಭಾರತದಲ್ಲಿ ಕರ್ಣ
"ಮಹಾಭಾರತದಲ್ಲಿ ನೆನೆಯುವಿರಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆ" ಎಂಬುದಾಗಿಯೂ ಹೇಳುತ್ತಾರೆ. ಆತ ನೀಚ ಕುಲದವ,ನಿರ್ಗತಿಕ ಆದರೂ ಅದ್ವಿತೀಯ ವೀರಾಧಿವೀರ ಮತ್ತು ದಾನಶೂರನು. ಆದರೇನು! ದೈವಬಲವಿದಲ್ಲದವನು. ಹೌದು, ಭೀಷ್ಮನನ್ನು ಬಿಟ್ಟರೆ ಅತಿರಥ ಮಹಾರಥರಲ್ಲಿ ಕರ್ಣನೆ ಪ್ರಪ್ರಥಮ. ದರ್ಯೋಧನ ದುರಳನಾದರೂ ಪಿತಾಮಹ ಭೀಷ್ಮ ಆತ ತಮಗೆ ತಾತ ಅತ್ಯಂತ ಹಿರಿಯನೆಂಬ ಕಾರಣಕ್ಕೂ ಮೊದಲು ಗೌರವಿಸಿ ಆತನಿಗೇ ಸೇನಾಧಿಪತ್ಯಕೊಡುತ್ತಾನೆ. ಕರ್ಣನಿಗೆ ದೈವಬಲ ಇರಲಿಲ್ಲ. ಅದೇ ಕಾರಣಕ್ಕೆ ತಾನು ಅದುವರೆಗೂ ಕಾಣದಿದ್ದ ತಾಯಿಯನ್ನು ಕಂಡಾಗಲೂ ಆ ತಾಯಿಯಿಂದಲೂ ಅವಕೃಪೆಗೊಳಗಾಗುತ್ತಾನೆ. ತಾಯಿ ಕುಂತಿ ಶ್ರೀ ಕೃಷ್ಣನ ಪ್ರೇರಣೆಯಿಂದ ಕರ್ಣನಿಗೆ ತೊಟ್ಟಬಾಣವನ್ನು ತೊಡಬೇಡ( ಯುದ್ಧ ಕಾಲದಲ್ಲಿ ಅದು ಸರ್ಪಾಸ್ತ್ರವಾಗಿ ಅವನನ್ನು ಕೆಣಕುತ್ತದೆ). ಅಷ್ಟು ಸಾಲದೇ ಪಂಚ ಪಾಂಡವರಲ್ಲಿ ಯಾರ ಜೀವವನ್ನೂ ತೆಗೆಯ ಬಾರದು ನೀನು ಎಂದೂ ಕೇಳುತ್ತಾಳೆ. ಆಗ ದುರ್ಯೋಧನನ ಉಪ್ಪು ಉಂಡು ಅವನ ಪ್ರಾಣ ಮಿತ್ರನಾಗಿದ್ದು ಅವನ ಕಡು ವೈರಿ ಅರ್ಜುನನ್ನು ಮಾತ್ರ ಬಿಡಲಾರೆನೆಂದೂ ಕರ್ಣ ಮಾತು ಕೊಡುತ್ತಾನೆ. ಮುಂದೆ ರಣರಂಗದಲ್ಲಿ ಅವನೂ ಭೀಮನೊಡನೆ ಗದಾಯುದ್ಧ ಮಾಡುತ್ತಾನೆ. ಹೋರಾಟದಲ್ಲಿ ಭೀಮ ಅವನತ ಮುಖಿಯಾಗಿಯಾದಾಗ ತನ್ನ ಗದೆ ಎತ್ತಿ ಇನ್ನೇನು ಅವನನ್ನು ಕೊಲ್ಲಬೇಕು, ಆಗ ತಾಯಿ ಕುಂತಿಗೆ ತಾನು ಕೊಟ್ಟ ವಾಗ್ದಾನ ನೆನಪಾಗುತ್ತದೆ. ಅರ್ಜುನನ್ನು ಕೊಲ್ಲಲು ಪ್ರಯತ್ನಿಸಿದಾಗಲು ಅವನ ಸಾರಥಿ ಕೃಷ್ಣನ ಕಪಟವೇ ಮೇಲುಗೈಯಾಗಿ ಬಿಡುತ್ತದೆ. ಹಾಗೆ ಕರ್ಣ ಅಪ್ರತಿಮ ಸಾಮರ್ಥ್ಯವುಳ್ಳವನೂ ವೀರಾಧಿ ವೀರನಾದರೂ ದೈವ ಬಲವಿಲ್ಲದೇನೆ ಗುರುಶಾಪ, ತಾಯಿಯ ಅವಕೃಪೆಯಿಂದ ಕಡೆಗೆ ಮರಣವನ್ನಪ್ಪುತ್ತಾನೆ.
Rating
Comments
ಉ: ಮಹಾಭಾರತದಲ್ಲಿ ಕರ್ಣ
In reply to ಉ: ಮಹಾಭಾರತದಲ್ಲಿ ಕರ್ಣ by muralihr
ಉ: ಮಹಾಭಾರತದಲ್ಲಿ ಕರ್ಣ
In reply to ಉ: ಮಹಾಭಾರತದಲ್ಲಿ ಕರ್ಣ by ritershivaram
ಉ: ಮಹಾಭಾರತದಲ್ಲಿ ಕರ್ಣ
In reply to ಉ: ಮಹಾಭಾರತದಲ್ಲಿ ಕರ್ಣ by hamsanandi
ಉ: ಮಹಾಭಾರತದಲ್ಲಿ ಕರ್ಣ