ಮಹಾಭಾರತದಲ್ಲಿ ಯಯಾತಿ ಕತೆಯ ನೀತಿಗಳು
ಯಯಾತಿಯ ಕತೆಯಲ್ಲಿ ಎರಡು ಮೂರು ನೀತಿಗಳಿವೆ
೧. ಅವನಿಗಾಗಿ ಶರ್ಮಿಷ್ಠೆ ಮತ್ತು ದೇವಯಾನಿಯ ಪೈಪೋಟಿ ನಡೆಯುತ್ತದೆ . ಶರ್ಮಿಷ್ಠೆಯ ತಂದೆ ರಾಜ , ಕುಲದ ಒಳಿತಿಗಾಗಿ ರಾಜ ತನ್ನ ಮಗಳ ಒಳಿತನ್ನು ತ್ಯಾಗ ಮಾಡುತ್ತಾನೆ . ದೇವಯಾನಿಯನ್ನು ರಾಣಿಯನ್ನಾಗಿ ಮಾಡಿ ಮಗಳನ್ನು ಅವಳ ದಾಸಿಯಾಗಿ ಮಾಡುತ್ತಾನೆ .
ಇಲ್ಲಿ ಬರುವ ಮಾತು ಇದು - ಕುಲಕ್ಕಾಗಿ ಒಬ್ಬರನ್ನು ತ್ಯಜಿಸಬೇಕು . ಊರಿನ ಒಳಿತಿಗಾಗಿ ಕುಲವನ್ನು ತ್ಯಜಿಸಬೇಕು ಇತ್ಯಾದಿ. ಇದು ಒಂದು ನೀತಿ .
೨. ಅವನಿಗೆ ಮುಂದೊಂದು ಪ್ರಸಂಗದಲ್ಲಿ ಶಾಪದಿಂದ ಮುಪ್ಪು ಬರುತ್ತದೆ . ಅವನ ಮಗನು ತನ್ನ ಯೌವನವನ್ನು ತಂದೆಗೆ ಕೊಟ್ಟನು . ಈ ರೀತಿ ಸಾವಿರ ವರ್ಷ ಸುಖಭೋಗ ಮಾಡಿದರೂ ಅವನಿಗೆ ಸಾಕು ಎನಿಸಲಿಲ್ಲ . ತೃಪ್ತಿಪಡಿಸುವದರಿಂದ ಆಸೆಗಳು ಶಮನವಾಗುವದಿಲ್ಲ ; ಆದ್ದರಿಂದ ಆಸೆಯನ್ನು ತೃಪ್ತಿಪಡಿಸುವ ಯತ್ನ ವ್ಯರ್ಥ ; ಆಸೆಯನ್ನು ತೊರೆಯುವದೇ ಸರಿ . ಇದು ಇನ್ನೊಂದು ನೀತಿ .
೩. ಕೊನೆಗೆ ಅವನು ಬಹುಕಾಲ ತಪಸ್ಸು ಮಾಡಿ ಸ್ವರ್ಗಕ್ಕೆ ಹೋದನು . ಅಲ್ಲಿ ಇಂದ್ರನ ಒಂದು ಪ್ರಶ್ನೆಗೆ ಉತ್ತರವಾಗಿ ’ದೇವ ಮಾನವ ಗಂಧರ್ವ ಮಹರ್ಷಿಗಳಲ್ಲಿ ನನ್ನ ಸಮ ತಪಸ್ಸು ಮಾಡಿದವರನ್ನು ಕಾಣೆ’ ಎಂದನು . ಸಮರೂ ಇರಬಹುದು , ಹೆಚ್ಚಿನವರೂ ಇರಬಹುದು ; ಅದರೆ ಅವರು ಇವನಿಗೆ ಅಹಂಕಾರದಿಂದಾಗಿ ಕಾಣರು . ತಾನು ದೊಡ್ಡವನು ಎಂದು ಯೋಚಿಸಿದೊಡನೆ ಅವನ ಪತನ ಆಯಿತು . ನಂತರ ಅವನಿಗೆ ಅವನ ತಪ್ಪನ್ನು ಬ್ರಹ್ಮನು ತೊರಿಸಿಕೊಡುವನು . ಸಾವಿರ ವರ್ಷದ ತಪಸ್ಸೂ , ಒಳ್ಳೆಯ ಕೆಲಸದ ಫಲವೂ , ಪುಣ್ಯವೂ ಈ ಸಣ್ಣ ದೋಷದಿಂದ ಇಲ್ಲದಂತಾಯಿತು . ನಿನಗಿಂತ ಕಡಿಮೆಯವರನ್ನು ಕೂಡ ಕಡಿಮೆ ಎಂದು ಎಣಿಸಬಾರದು . ಇದು ಮತ್ತೊಂದು ನೀತಿ.
ಇವು ಮಹಾಭಾರತ ಉಪದೇಶಿಸುವ ನೀತಿಗಳೂ ಹೌದು .