"ಮಹಾವ್ಯಾದ" ನಕ್ಷತ್ರ ಪುಂಜ ತೋರಿಸಿದ - ನೇಮಿಚಂದ್ರ

"ಮಹಾವ್ಯಾದ" ನಕ್ಷತ್ರ ಪುಂಜ ತೋರಿಸಿದ - ನೇಮಿಚಂದ್ರ

ಶನಿವಾರ ನೇಮಿಚಂದ್ರ ಬಂದಿದ್ರು ಅಂತ ಹೇಳಿದ್ದೆ. ಅವರೊಡನೆ ಸ್ವಲ್ಪ ಹೊತ್ತು ತಂತ್ರಜ್ಞಾನ, ವಿಜ್ಞಾನ, ಕಂಪ್ಯೂಟರ್, ಗ್ನು/ಲಿನಕ್ಸ್ ಮಾತುಕತೆ. ಇದೆಲ್ಲದಕ್ಕಿಂತ ಹೆಚ್ಚಿನ ಸೋಜಿಗ ಅಂದ್ರೆ, ಹೊರಡ ಬೇಕಾದ್ರೆ, ಅವರ ದೃಷ್ಟಿ ಹರಿದಿದ್ದು ನೀಲಾಕಾಶದೆಡೆಗೆ. ಅಲ್ಲಿ ಕಂಡ ಮೂರು ಚುಕ್ಕಿಗಳನ್ನು ಕಂಡ ತಕ್ಷಣ, ಹಾ! "ಮಹಾವ್ಯಾದ" ಎಷ್ಟು ಚೆನಾಗಿ ಕಾಣ್ತಿದೆ ಇಲ್ಲಿಂದ.. ಎಂದವರೆ, ಅದನ್ನು ವಿವರಿಸಲಿಕ್ಕೆ ಶುರು ಮಾಡಿಕೊಂಡ್ರು.

ಇದನ್ನು ಇಂಗ್ಲೀಷ್ ನಲ್ಲಿ "Orion" ಅಂತ ಕರೀತಾರೆ (ಓರಿಯಾನ್ ಈ ಪುಂಜದಲ್ಲಿರೋದ್ರಿಂದ), ಕಾಣುವ ಮೂರು ನಕ್ಷತ್ರಗಳಲ್ಲಿ ಬಲಕ್ಕಿರುವ ಕೊನೆಯ ನಕ್ಷತ್ರ, ನಕ್ಷತ್ರವಲ್ಲ. ಅದು ನೆಬ್ಯೂಲಾ. ಈ ಮೂರು ನಕ್ಷತ್ರಗಳ ಸುತ್ತ ಒಂದು ಚೌಕವನ್ನು ರಚಿಸುವ ೪ ಚುಕ್ಕಿಗಳನ್ನು ತೋರಿಸಿ, ಇದರಲ್ಲಿ ಮೇಲೆ ಕೆಂಪಗೆ ಹೊಳೆಯುವ ನಕ್ಷತ್ರ ಸಾಯುತ್ತಲಿದ್ದು ಅದನ್ನ "Red Gaint" ಅಂತ್ಲೂ (ಕೆಂಪು ದೈತ್ಯ) ಎಡಭಾಗದ ಕೊನೆಯಲ್ಲಿ, ಮಿರಿ ಮಿರಿ ಮಿರುಗುವ ನಕ್ಷತ್ರ ಪ್ರಜ್ವಲಿಸುತ್ತಿದ್ದು, ಅದು ಈಗ ತಾನೆ ಹುಟ್ಟಿರುವ ನಕ್ಷತ್ರ ಅಥವಾ "ಶ್ವೇತ ಕುಬ್ಜ"  ಅಂಥ ಕರೀತೀವಿ ಅಂತ ಹೇಳಿದ್ರು.

ಎರಡು ವಾರಗಳ ಕೆಳಗೆ ತಾರಾಲಯದಲ್ಲಿ ನೋಡಿಬಂದ ನಕ್ಷತ್ರ ಪುಂಜಗಳನ್ನೆಲ್ಲಾ ಮತ್ತೊಮ್ಮೆ ನೆನೆಸಿಕೊಳ್ಳುವಂತೆ ಮಾಡಿದ ಕ್ಷಣ ಇದಾಗಿತ್ತು.

 

Stellarium ನಿಂದ ತೆಗೆದ ಚಿತ್ರಗಳನ್ನು ಈ ಲೇಖನದ ಜೊತೆ ಹಾಕಿದ್ದೇನೆ. ನೀವೂ ಮಹಾವ್ಯಾದ ಗುರುತಿಸಲಿಕ್ಕೆ ಪ್ರಯತ್ನಿಸಿ.

ಹಾಗೇ, ತಾರೆಗಳ ಲೋಕಕ್ಕೆ ಸಂಪದಿಗರನ್ನ ಕರೆದೋಯ್ಯಲಿಚ್ಚಿಸುವವರು ಇಂತಹ ಸಂಗತಿಗಳ ಬಗ್ಗೆ ಬರೀತಿದ್ರೆ ತುಂಬಾ ಅನುಕೂಲ. ಭಾನುವಾರ ಸಂಜೆ ತಾರಾಲಯದಲ್ಲೊಮ್ಮೆ ಸಂಪದಿಗರು ಸಿಗಬಹುದು ಮತ್ತೆ, ಅಂತರಿಕ್ಷದಲ್ಲೊಮ್ಮೆ ಕಣ್ಣಾಡಿಸಿ ಬರಬಹುದು ಏನಂತೀರಿ?

Rating
No votes yet

Comments