ಮಾಗಡಿ ಕೆಂಪೇಗೌಡ ಮತ್ತು ನಿಧಿ - ಮಾಹಿತಿ ಬೇಕಾಗಿದೆ

ಮಾಗಡಿ ಕೆಂಪೇಗೌಡ ಮತ್ತು ನಿಧಿ - ಮಾಹಿತಿ ಬೇಕಾಗಿದೆ

ನನ್ನ ಗೆಳೆಯರೊಬ್ಬರಿಗೆ ಕೆಂಪೇಗೌಡನ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿದೆ. ಸಂಪದ ಸೂಕ್ತ ಸ್ಥಳವೆಂದು ಇಲ್ಲಿ ಬರೆಯುತ್ತಿದ್ದೇನೆ.


ಘಟನೆ/ಕಥೆಯ ಸಾರಾಂಶ ಇದು - ಅವರ ತಲೆಮಾರಿನ ಹಿರಿಯರ ಮನೆಯಲ್ಲಿ (ನೆಲಮಂಗಲ ಬಳಿ ಮೋಟಗಾನಹಳ್ಳಿ) ಕೆಂಪೇಗೌಡ ಎನ್ನುವವರು ಕೆಲಸಕ್ಕೆ ಇದ್ದರು. ಹೊಲದಲ್ಲಿ ನಿಧಿ ದೊರೆಯಿತು. "ನಿಧಿ ನನ್ನದು" - "ಇಲ್ಲಾ ನನ್ನದು" ಎನ್ನುವ ಕಲಹದ ಬದಲು "ಇದು ನಿಮಗೆ ಸೇರಿದ್ದು" - "ಇಲ್ಲಾ ಇದು ನಿಮ್ಮದೇ" ಎನ್ನುವ ಮಾತು ಕೇಳಿತು. ಇಬ್ಬರ ಹೃದಯ ಸಂಪನ್ನತೆಯೂ ದೊಡ್ಡದು!


ನಾನು ಬಹಳ ಹಿಂದೆ ಇದೇ ರೀತಿಯ ಘಟನೆಯ ಕುರಿತು ಎಲ್ಲೋ ಓದಿದ್ದೆ. ಆದರೆ ವ್ಯಕ್ತಿ,ವಿವರಗಳು ಮತ್ತು ಪುಸ್ತಕದ ನೆನಪಿಲ್ಲ.


ಮಾಗಡಿ ಕೆಂಪೇಗೌಡನ ಬಗೆಗಿನ ಪುಸ್ತಕ/ಐತಿಹ್ಯ/ಕಥೆಗಳಲ್ಲಿ ಈ ಕುರಿತ ಮಾಹಿತಿ ಯಾರಿಗಾದರೂ ತಿಳಿದಿದೆಯೇ? ತಿಳಿದವರು ಪುಸ್ತಕದ ವಿವರಗಳನ್ನು ತಿಳಿಸಲು ಸಾಧ್ಯವೇ? ಮುಂಚಿತವಾಗಿ ಧನ್ಯವಾದಗಳು.


 

Rating
No votes yet

Comments